Wednesday, November 5, 2025
Google search engine

Homeರಾಜ್ಯಸುದ್ದಿಜಾಲಕಬ್ಬು ಬೆಳೆಗಾರರ ಹೋರಾಟ ಕಿಚ್ಚು; ಬೆಳಗಾವಿ ಸ್ತಬ್ಧ.

ಕಬ್ಬು ಬೆಳೆಗಾರರ ಹೋರಾಟ ಕಿಚ್ಚು; ಬೆಳಗಾವಿ ಸ್ತಬ್ಧ.

ವರದಿ :ಸ್ಟೀಫನ್ ಜೇಮ್ಸ್.

ಬೆಳಗಾವಿ: ಕಬ್ಬಿನ ದರ ಘೋಷಣೆ ಸೇರಿ ವಿವಿಧ ಬೇಡಿಕೆಗಳಿಗಾಗಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು, ಕಬ್ಬು ಬೆಳೆಗಾರರು ನಡೆಸುತ್ತಿರುವ ಅಹೋರಾತ್ರಿ ಧರಣಿ ಬುಧವಾರ 7ನೇ ದಿನಕ್ಕೆ ಕಾಲಿಟದಟಿದೆ. ಮತ್ತೊಂದೆಡೆ ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲಿಸಿ ಹಳ್ಳಿ, ಪಟ್ಟಣಗಳಲ್ಲಿ ಹೋರಾಟ ಆರಂಭವಾಗಿದ್ದು, ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಬಸ್ ಸಂಚಾರವೂ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು. ವ್ಯಾಪಾರ ಕೇಂದ್ರಗಳು ಮುಚ್ಚಲ್ಪಟ್ಟಿದ್ದು, ಶಾಲಾ-ಕಾಲೇಜುಗಳಿಗೂ ಹಾಜರಾತಿ ಕಡಿಮೆ ಕಂಡುಬಂತು.
ಬುಧವಾರ ಬೆಳಗ್ಗೆಯಿಂದಲೇ ಬೆಳಗಾವಿ, ಬಾಗಲಕೋಟ ಜಿಲ್ಲೆಗಳಲ್ಲಿ ಸಾರಿಗೆ ಸಂಚಾರ ಬಂದ್ ಆಗಿದೆ.

RELATED ARTICLES
- Advertisment -
Google search engine

Most Popular