Thursday, November 6, 2025
Google search engine

Homeರಾಜಕೀಯಸಚಿವ ಸ್ಥಾನ ಬೇಕು ಅಂತ ನಾನು ದೆಹಲಿಗೆ ಹೋಗೋದಿಲ್ಲ: ರಾಮಲಿಂಗಾರೆಡ್ಡಿ

ಸಚಿವ ಸ್ಥಾನ ಬೇಕು ಅಂತ ನಾನು ದೆಹಲಿಗೆ ಹೋಗೋದಿಲ್ಲ: ರಾಮಲಿಂಗಾರೆಡ್ಡಿ

ಬೆಂಗಳೂರು: ನಾನು ಸಚಿವ ಸ್ಥಾನ ಬೇಕು ಅಂತ ಹಿಂದೆಯೂ ದೆಹಲಿಗೆ ಹೋಗಿಲ್ಲ. ಮುಂದೆಯೂ ಹೋಗೋದಿಲ್ಲ ಅಂತ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆ, ಡಿಸಿಎಂ ಡಿಕೆಶಿವಕುಮಾರ್ ದೆಹಲಿ ಪ್ರವಾಸ ಮತ್ತು ಸಚಿವ ಆಕಾಂಕ್ಷಿಗಳು ದೆಹಲಿ ಪ್ರವಾಹ ಹೋಗ್ತಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಅಧಿಕಾರ ಬೇಕು ಅಂತ ದೆಹಲಿಗೆ ಹೋಗೊಲ್ಲ. 2 ವರ್ಷಗಳಲ್ಲಿ ದೆಹಲಿಗೆ ನಾನು ಹೋಗಿರೋದು ಎರಡನೇ ಸಾರಿ. ಇಲಾಖೆ ಕಾರ್ಯಕ್ರಮಗಳಿಗೆ. ನಾನು ಯಾವತ್ತು ಸ್ಥಾನಮಾನ ಬೇಕು ಕೊಡಿ ಅಂತ ದೆಹಲಿಗೆ ಹೋಗಿಲ್ಲ ಎಂದರು. ನನಗೆ ಸಚಿವ ಸ್ಥಾನ ಬೇಕು ಅಂತ ಪ್ರಭಾವವನ್ನು ಬೀರೋದಿಲ್ಲ. ಅರ್ಹತೆ ಇದ್ದರೆ ಕೊಡ್ತಾರೆ ಇಲ್ಲಾ ಅಂದರೆ ಇಲ್ಲ. ದಲಿತ ಸಿಎಂ ಕೂಗು ವಿಚಾರವಾಗಿ ನಾನು ಮಾತಾಡೊಲ್ಲ ಎಂದರು.

ಬಿಜೆಪಿಯವರು ಅಧಿಕಾರಕ್ಕೆ ಬಂದ 2014 ರಿಂದ ವೋಟ್ ಚೋರಿ ದೇಶದಲ್ಲಿ ನಡೆಯುತ್ತಿದೆ. ರಾಹುಲ್ ಗಾಂಧಿಯವರು ಮತ್ತೆ ವೋಟ್ ಚೋರಿ ಆರೋಪ ಮಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಗಾಂಧಿ ಪರ ಬ್ಯಾಟಿಂಗ್ ಮಾಡಿದ್ರು. ಬಿಜೆಪಿಯವರು ವೋಟ್ ಚೋರಿ ಮಾಡೋದು ಹೊಸದೇನು ಅಲ್ಲ. 2014 ರಿಂದ ವೋಟ್ ಚೋರಿ ಪ್ರಾರಂಭ ಆಗಿದೆ. ಎಲ್ಲಾ ಚುನಾವಣೆಯಲ್ಲಿ ಬಿಜೆಪಿ ಕುತಂತ್ರ ಮಾಡಿದೆ. ಕೇಂದ್ರ ಚುನಾವಣೆ ಆಯೋಗದವರು ಬಿಜೆಪಿ ಜೊತೆ ಶಾಮೀಲಾಗಿ ವ್ಯವಸ್ಥಿತವಾಗಿ ಇದನ್ನು ಮಾಡ್ತಿದ್ದಾರೆ ಎಂದು ಅರೋಪಿಸಿದರು.

ಮಹಾರಾಷ್ಟ್ರ ಎಂಪಿ ಚುನಾವಣೆ ಇಂಡಿ ಕೂಟಕ್ಕೆ ಜಾಸ್ತಿ ಸ್ಥಾನ ಬಂತು. ವಿಧಾನಸಭೆ ನಾವು ಗೆಲ್ತೀವಿ ಅಂತ ಬಿಜೆಪಿ ಮಹಾರಾಷ್ಟ್ರದಲ್ಲಿ ವೋಟ್ ಚೋರಿ ಕೆಲಸ ಮಾಡಿದೆ. ಮಹಾರಾಷ್ಟ್ರ ಚುನಾವಣೆ ವೇಳೆಯೇ ಈ ವೋಟ್ ಚೋರಿ ಬಗ್ಗೆ ನಮಗೆ ಗೊತ್ತಾಯ್ತು ಅಂತ ಬಿಜೆಪಿ ವಿರುದ್ಧ ಕಿಡಿಕಾರಿದರು.

ವಂದೇ ಮಾತರಂ ಗೀತೆ ರಾಷ್ಟ್ರ ಗೀತೆ ಆಗಬೇಕಿತ್ತು ಎಂಬ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬ್ರಿಟಿಷರು ದೇಶ ಬಿಟ್ಟು ಹೋದಾಗಲೇ ನಮ್ಮ ರಾಷ್ಟ್ರಗೀತೆ, ಸಂವಿಧಾನ, ಕಾನೂನು ಹೇಗೆ ಇರಬೇಕು ಅಂತ ಸ್ವಾತಂತ್ರ್ಯ ಬಂದ ಮೇಲೆ ಆಗಿನ ಪ್ರಧಾನಿಗಳು, ಮಂತ್ರಿ ಮಂಡಲ ತೀರ್ಮಾನ ಮಾಡಿ ಮಾಡಿದೆ. ಈಗ 78 ವರ್ಷ ಆದ ಮೇಲೆ ಬಿಜೆಪಿ ಅವರು ವಿರೋಧ ಮಾಡ್ತಾ ಇದ್ದಾರೆ. ಜನಗಣಮನದಲ್ಲಿ ಏನಿದೆ. ವಂದೇ ಮಾತರಂನ್ನು ಬಿಜೆಪಿಯವರು ಹಾಡ್ತಾರೋ ಇಲ್ಲವೋ ಗೊತ್ತಿಲ್ಲ. ನಮ್ಮ ಕಾಂಗ್ರೆಸ್‌ನ ಎಲ್ಲಾ ಕಾರ್ಯಕ್ರಮದಲ್ಲಿ ವಂದೇ ಮಾತರಂ ಹಾಡ್ತೀವಿ. ಬಿಜೆಪಿ ಅವರಿಗಿಂತ ವಂದೇ ಮಾತರಂ ಗೀತೆ ಮೇಲೆ ಕಾಂಗ್ರೆಸ್ ಅವರಿಗೆ ಗೌರವ ಜಾಸ್ತಿ ಇದೆ ಎಂದು ತಿರುಗೇಟು ಕೊಟ್ಟರು.

ಬಿಜೆಪಿಯವರು ನೆಹರು, ರಾಹುಲ್ ಗಾಂಧಿ, ಇಂದಿರಾಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್ ವಿರುದ್ಧ ಅಪ ಪ್ರಚಾರ ಮಾಡ್ತಾರೆ. ಸರ್ದಾರ್ ವಲ್ಲಭಭಾಯ್ ಪಟೇಲರೇ RSS ಬ್ಯಾನ್ ಮಾಡಿದ್ರು. ಈಗ ಚರಿತ್ರೆ ತಿರುಚೋ ಕೆಲಸ ಬಿಜೆಪಿಯವರು ಮಾಡ್ತಿದ್ದಾರೆ. ಹೀಗೆ ಚರಿತ್ರೆ ತಿರುಚೋಕೆ ವಾಟ್ಸಾಪ್ ಯುನಿವರ್ಸಿಟಿಗಳು ಕೆಲಸ ಮಾಡ್ತಿವೆ.‌ ನಮ್ಮ ರಾಜ್ಯದಲ್ಲಿ ಇತಿಹಾಸ ತಿರುಚೋಕೆ 700 ಜನರನ್ನ ವಾಟ್ಸಾಪ್‌ನಲ್ಲಿ ಹೀಗೆ ಮಾಡೋರು ಇದ್ದಾರೆ‌. 78 ವರ್ಷ ಆದ ಮೇಲೆ ಕಾಗೇರಿ ಅವರು ಜನಗಣಮನ ವಿರೋಧ ಮಾಡಿದ್ದಾರೆ. ಬಿಜೆಪಿ ಅವರು ವಂದೇ ಮಾತರಂ ಅವರು ಹಾಡೋದೇ ಇಲ್ಲ ಎಂದು ಕಿಡಿಕಾರಿದರು.

RELATED ARTICLES
- Advertisment -
Google search engine

Most Popular