ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಮೈಸೂರು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ನೂತನ ಉಪ ನಿರ್ದೇಶಕರಾಗಿ ಡಿ.ಉದಯ್ ಕುಮಾರ್ ಅವರನ್ನ ರಾಜ್ಯ ಸರ್ಕಾರ ನೇಮಿಸಿ ಅದೇಶ ಹೊರಡಿಸಿದೆ.
ಹಾಲಿ ಕೊಡಗು ಜಿಲ್ಲೆಯ ಕೂಡಿಗೆಯಲ್ಲಿ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾಗಿದ್ದ ಇವರನ್ನು ಇಲ್ಲಿಗೆ ವರ್ಗಾಯಿಸಿದೆ
ಹಾಲಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾಗಿದ್ದ ಜವರೇಗೌಡ ಅವರ ನಿವೃತ್ತಿಯಿಂದ ತೆರವಾಗಿದ್ದ ಸ್ಥಾನಕ್ಕೆ ಇವರನ್ನು ನೇಮಿಸಲಾಗಿದೆ.
ನೂತನ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ನೂತನ ಉಪ ನಿರ್ದೇಶಕ ಡಿ.ಉದಯ್ ಕುಮಾರ್ ಅವರು ಕೆ.ಅರ್.ನಗರ ತಾಲೂಕಿನ ಡಿ.ಕೆ.ಕೊಪ್ಪಲು ಗ್ರಾಮದ ನಿವೃತ್ತ ಶಿಕ್ಷಕರಾದ ದೊಡ್ಡ ಅಪ್ಪುಗೌಡರ ಪುತ್ರರಾಗಿದ್ದು ಇವರನ್ನು ಒಕ್ಕಲಿಗ ನೌಕರರ ಸಂಘದ ಅಧ್ಯಕ್ಷ ಲಕ್ಕಿಕುಪ್ಪೆ ಶಂಕರೇಗೌಡ, ಪ್ರಧಾನ ಕಾರ್ಯದರ್ಶಿ ಹೆಬ್ಬಾಳ್ ಈಶ್ವರ್, ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸಂಗರಶೆಟ್ಟಹಳ್ಳಿ ಸುರೇಶ್ , ಶಿಕ್ಷಕ ಕುಪ್ಪೆ ಯೋಗೇಶ್,ಮೇಲೂರು ಕುಮಾರ್, ಮತ್ತಿತರು ಅಭಿನಂಧಿಸಿದ್ದಾರೆ.



