Monday, November 10, 2025
Google search engine

Homeಅಪರಾಧಕಾನೂನುರೇಣುಕಾಸ್ವಾಮಿ ಕೊಲೆ ಪ್ರಕರಣ: ವಿಚಾರಣೆ ನ.19ಕ್ಕೆ ಮುಂದೂಡಿಕೆ

ರೇಣುಕಾಸ್ವಾಮಿ ಕೊಲೆ ಪ್ರಕರಣ: ವಿಚಾರಣೆ ನ.19ಕ್ಕೆ ಮುಂದೂಡಿಕೆ

ಬೆಂಗಳೂರು: ನಟ ದರ್ಶನ್ ಮತ್ತು ಗ್ಯಾಂಗ್ ನಿಂದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಇಂದು ನಟ ದರ್ಶನ್ ಮತ್ತು ಇತರೆ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದು ವಿಚಾರಣೆಯನ್ನ ನವೆಂಬರ್ 19ಕ್ಕೆ ಕೋರ್ಟ್ ಮುಂದೂಡಿಕೆ ಮಾಡಿದೆ.

ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿ ನಟ ದರ್ಶನ್ ಹಾಗೂ ಇತರೆ ಆರೋಪಿಗಳು ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.  ಸಿ ಆರ್ ಪಿ ಸಿ ಸೆಕ್ಷನ್ 294 ಅಡಿ ಅರ್ಜಿ ಸಲ್ಲಿಕೆ ಮಾಡಲಾಗುತ್ತಿದ್ದು,  ಸಿಆರ್ಪಿಸಿ ಸೆಕ್ಷನ್ 294 ಅಡಿ ಸಹಾಯಕ ಎಸ್ ಪಿಪಿ ಸಚಿನ್ ಅರ್ಜಿ ಸಲ್ಲಿಸಿದ್ದಾರೆ ಈ ಹಿನ್ನೆಲೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೊಲೆ ಆರೋಪಿ ನಟ ದರ್ಶನ್ ಹಾಜರಾಗಿದ್ದರು.

ಅರ್ಜಿ ಬಗ್ಗೆ ಪ್ರತಿಕ್ರಿಯೆ ನೀಡಲು ದರ್ಶನ್ ಸೇರಿದಂತೆ ಆರೋಪಿಗಳ ಪರ ವಕೀಲರು ಕಾಲಾವಕಾಶ ಕೋರಿದರು. 5000ಕ್ಕೂ ಹೆಚ್ಚಿನ ದಾಖಲೆಗಳು ಇರುವುದರಿಂದ 15 ದಿನ ಸಮಯಕ್ಕೆ ಮನವಿ ಮಾಡಿದರು. ಬಳಿಕ 57ನೇ ಸಿಸಿಎಚ್  ಕೋರ್ಟ್ ವಿಚಾರಣೆಯನ್ನು ನವೆಂಬರ್ 19ಕ್ಕೆ ಮುಂದೂಡಿಕೆ ಮಾಡಿದೆ.

RELATED ARTICLES
- Advertisment -
Google search engine

Most Popular