Monday, November 10, 2025
Google search engine

Homeರಾಜ್ಯಸುದ್ದಿಜಾಲಸಮಾಜದ ಅಭಿವೃದ್ಧಿಗೆ ಅನುದಾನ ಸದುಪಯೋಗಪಡಿಸಿಕೊಳ್ಳಲು ಗ್ರಾ ಪಂ. ಅಧ್ಯಕ್ಷ ಮಂಜುನಾಥ್ ಕರೆ

ಸಮಾಜದ ಅಭಿವೃದ್ಧಿಗೆ ಅನುದಾನ ಸದುಪಯೋಗಪಡಿಸಿಕೊಳ್ಳಲು ಗ್ರಾ ಪಂ. ಅಧ್ಯಕ್ಷ ಮಂಜುನಾಥ್ ಕರೆ

ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಬರುತ್ತಿರುವ ವಿಶೇಷ ಅನುದಾನಗಳನ್ನು ಸಮಾಜದ ಜನರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ತಿಳಿಸಿದರು. ಹನಸೋಗೆ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಸಂಘದಿಂದ ಆಯೋಜಿಸಿದ ನೂತನ ನಾಮಫಲಕ ಉದ್ಘಾಟಿಸಿ ಮಾತನಾಡಿದರು.

ಗ್ರಾಮ ಪಂಚಾಯಿತಿಯಿಂದ ಹಿಡಿದು ಜಿಲ್ಲಾ ಕಚೇರಿ ವರೆಗೂ ಬರುವಂತಹ ಎಲ್ಲಾ ತಾಲೂಕು ಮಟ್ಟದ ಇಲಾಖೆಗಳಲ್ಲಿ ವಾಲ್ಮೀಕಿ ಸಮಾಜಕ್ಕೆ ವಿಶೇಷ ಅನುದಾನಗಳು ಮತ್ತು ಸಬ್ಸಿಡಿ ಸೌಲಭ್ಯಗಳು ಇವೆ ಇವುಗಳನ್ನು ಸಂಘ ಸಂಸ್ಥೆಗಳು ಸಮಾಜದಲ್ಲಿರುವ ತೀರ ಬಡ ಕುಟುಂಬದವರಿಗೆ ತಲುಪಿಸುವಂತಹ ಕೆಲಸವನ್ನು ಮಾಡಬೇಕು. ಜೊತೆಗೆ ಗ್ರಾಮ ಪಂಚಾಯಿತಿಯಲ್ಲಿ ಸಿಗುವಂತಹ ಸೌಲಭ್ಯಗಳನ್ನು ವಾಲ್ಮೀಕಿ ಸಮಾಜದ ಜನರಿಗೆ ಕೊಡಿಸಲು ನಾನು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸದಾ ನಿಮ್ಮೊಂದಿಗೆ ಇರುತ್ತೇವೆ ಎಂದು ಭರವಸೆ ನೀಡಿದರು.

ಸಮಾಜದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವ ಬಡ ಮಕ್ಕಳಿಗೆ ಮತ್ತು ಅಂಗವಿಕಲರಿಗೆ ನಿರ್ಗತಿಕ ಕುಟುಂಬಗಳಿಗೆ ಪರಿಶಿಷ್ಟ ಪಂಗಡದ ಅನುದಾನದಲ್ಲಿ ವಿಶೇಷ ಸೌಲಭ್ಯಗಳು ಇದೆ ಇವುಗಳನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಈ ವಾಲ್ಮೀಕಿ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಭೇಟಿ ಮಾಡಿ ಇರುವಂತಹ ಸೌಲಭ್ಯಗಳನ್ನು ಅಂತಹ ಜನರಿಗೆ ಕೊಡಿಸುವಂತಹ ಕೆಲಸವನ್ನು ಮಾಡಿ ನಿಮ್ಮೊಂದಿಗೆ ನಾನು ಇರುತ್ತೇನೆ ಎಂದು ಸಂಘದ ಸದಸ್ಯರಿಗೆ ಸಲಹೆ ನೀಡಿದರು.

ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಸಿ ಸಿ ಮಹದೇವ್ ಮಾತನಾಡಿ ಸಂಘ ಸಂಸ್ಥೆಗಳಲ್ಲಿ ಯಾವುದೇ ರಾಜಕೀಯ ಪಕ್ಷಗಳನ್ನು ಮಾಡಿಕೊಳ್ಳದೆ ಸಮಾಜದ ಅಭಿವೃದ್ಧಿಗೆ ಈ ಸಂಘಗಳು ಕೆಲಸ ಮಾಡಬೇಕು. ಹಿಂದಿನ ದಿನಗಳಿಂದಲೂ ಹನಸೋಗೆ ಗ್ರಾಮದಲ್ಲಿ ಸಮಾಜದ ಅಭಿವೃದ್ಧಿಗೆ ದುಡಿದಂತಹ ಸಮಾಜದ ಹಿರಿಯರು ಮತ್ತು ಯಜಮಾನರು ಸಮಾಜ ಸೇವಕರು ಇಂತಹವರನ್ನು ಗುರುತಿಸಿ ಅವರಿಗೆ ಗೌರವ ನೀಡುವಂತಹ ಕೆಲಸ ಸಂಘ ಮಾಡಬೇಕಿದೆ. ಹನಸೋಗೆ ಗ್ರಾಮದಲ್ಲಿರುವ ಪ್ರತಿ ಕುಟುಂಬದಲ್ಲೂ ಪ್ರತಿಯೊಬ್ಬರು ಅಕ್ಷರಸ್ಥರಾಗಬೇಕು ಸರ್ಕಾರಗಳ ಮತ್ತು ಸಮಾಜದ ವಿಷಯಗಳನ್ನು ತಿಳಿದುಕೊಳ್ಳುವಂತಹ ಪರಿಜ್ಞಾನವನ್ನು ಬೆಳೆಸಿಕೊಳ್ಳಬೇಕು. ಜೊತೆಗೆ ಸಂಘಟನೆಗೆ ಹೆಚ್ಚು ಬಲ ತುಂಬುವಂತ ಶಕ್ತಿಯನ್ನು ಈ ಗ್ರಾಮದ ಜನರು ಹೆಚ್ಚು ನೀಡಬೇಕು.

ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಸೇರಿದಂತೆ ಸ್ಥಳೀಯ ಚುನಾವಣೆಗಳು ಮತ್ತು ರಾಜ್ಯಮಟ್ಟದ ಚುನಾವಣೆಗಳು ಬಂದಂತಹ ಸಂದರ್ಭದಲ್ಲಿ ನಿಮ್ಮ ನಿಮ್ಮ ಪಕ್ಷಗಳಲ್ಲಿ ನೀವು ಕೆಲಸ ಮಾಡಿ ಅಲ್ಲಿ ನಿಮ್ಮದೇ ಆದ ಸ್ವಾಭಿಮಾನದ ವ್ಯಕ್ತಿತ್ವವನ್ನು ರಾಜಕೀಯವಾಗಿ ಬೆಳೆಸಿಕೊಳ್ಳಿ ಆದರೆ ಯಾರಿಗೂ ಗುಲಾಮರಾಗಿ ಬಾಳುವಂತಹ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಡಿ ಮದಕರಿ ನಾಯಕರ ಆಳ್ವಿಕೆಯನ್ನು ತಿಳಿದು ಅವರ ಆದರ್ಶ ಗುಣಗಳನ್ನು ತಾವು ಕೂಡ ಅಳವಡಿಸಿಕೊಂಡು ಈ ಸಮಾಜಕ್ಕೆ ಕೊಟ್ಟಂತ ಅವರ ಕೊಡುಗೆಗಳನ್ನು ಆದರ್ಶವಾಗಿ ಇಟ್ಟುಕೊಂಡು ರಾಜಕೀಯ ಜೀವನದಲ್ಲೂ ಬೆಳೆಯಿರಿ ಆದರೆ ಚುನಾವಣೆ ಮುಗಿದ ತಕ್ಷಣವೇ ವೈ ಮನಸು ದ್ವೇಷಗಳನ್ನು ಬಿಟ್ಟು ಸಮಾಜ ಕಟ್ಟುವಂತಹ ಕೆಲಸ ಮಾಡಿ ಸಂಘಟನೆಗಳಿಗೆ ಒಗ್ಗಟ್ಟಿನಿಂದ ಸಹಕಾರ ನೀಡಿ ಎಂದರು.

ಹನಸೋಗೆ ಗ್ರಾಮ ತಾಲೂಕಿನಲ್ಲಿ ಹೆಚ್ಚು ನಾಯಕ ಸಮಾಜ ಇರುವಂತಹ ದೊಡ್ಡ ಗ್ರಾಮ. ಎಲ್ಲ ರಾಜಕೀಯ ಪ್ರಭಾವಿ ವ್ಯಕ್ತಿಗಳ ಗಮನ ಈ ಗ್ರಾಮದ ಮೇಲಿದೆ. ಆದರೆ ಸಮಾಜ ಮತ್ತು ಸಮಾಜದ ಜನರು ಅಭಿವೃದ್ಧಿ ಆಗದಿರುವುದು ಬಹಳ ಬೇಸರದ ವಿಷಯ. ಮಾಜಿ ಶಾಸಕ ಚಿಕ್ಕಮಾದು ಅವರಿಗೆ ರಾಜಕೀಯ ಶಕ್ತಿ ತುಂಬಿದ ಈ ಗ್ರಾಮದ ಅಭಿವೃದ್ಧಿಗೆ ಅವರ ಪುತ್ರ ಶಾಸಕ ಅನಿಲ್ ಚಿಕ್ಕಮಾದು ಸ್ಪಂದಿಸಬೇಕು ಏಕೆಂದರೆ ನಿಮ್ಮ ಕುಟುಂಬವನ್ನು ಪ್ರೀತಿಸುವಂತಹ ಜನರಿದ್ದಾರೆ ಎಂದು ಒತ್ತಾಯಿಸಿದರು. ರಾಜಕಾರಣಿಗಳ ಬಣ್ಣದ ಮಾತಿಗೆ ಮಾರುಹೋಗಿರುವ ಇಲ್ಲಿಯ ಜನರು 40ವರ್ಷದಿಂದ ವಾಲ್ಮೀಕಿ ಸಮುದಾಯ ಭವನ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿರುವುದೇ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತಾಲೂಕು ವಾಲ್ಮೀಕಿ ನೌಕರರ ಸಂಘದ ಅಧ್ಯಕ್ಷ ರೋಹಿತ್, ತಾಲೂಕು ನಾಯಕರ ಸಂಘದ ಕಾರ್ಯದರ್ಶಿ ಕಾಳಮ್ಮನ ಕೊಪ್ಪಲು ಲೋಕೇಶ್, ಯಜಮಾನ್ ಚೆಲುವ ನಾಯಕ, ಹನಸೋಗೆ ವಾಲ್ಮೀಕಿ ಸಂಘದ ಅಧ್ಯಕ್ಷ ಅರುಣ್ ಕುಮಾರ್, ಉಪಾಧ್ಯಕ್ಷ ಎಚ್ ಪಿ ರಾಮ ನಾಯಕ, ಕಾರ್ಯದರ್ಶಿ ಎಚ್ ಎಸ್ ಕೃಷ್ಣ ನಾಯಕ, ಖಜಾಂಚಿ ಚಂದ್ರನಾಯಕ, ನಿರ್ದೇಶಕರಾದ ನಾಗನಾಯಕ, ಶ್ರೀನಿವಾಸ್, ಅವಿನಾಶ್, ಲಕ್ಷ್ಮಣನಾಯಕ, ದೇವರಾಜ್, ಹೆಚ್ ಸಿ ರಾಮನಾಯಕ, ಲೋಕೇಶ್, ನಾಗರಾಜ ನಾಯಕ, ಚಿಕ್ಕಯಜಮಾನ್ ವಸಂತ್, ಹೆಚ್ ಎಸ್.ರಾಜನಾಯಕ ಚೆಲುವರಾಜನಾಯಕ, ಪ್ರಸನ್ನ, ರಮೇಶ್ ಸೇರಿದಂತೆ ಸಂಘದ ಸದಸ್ಯರು ನಾಯಕ ಸಮಾಜದ ಎಲ್ಲಾ ಮುಖಂಡರು ಮಹಿಳಾ ಸಂಘದ ಪ್ರತಿನಿಧಿಗಳು ಇದ್ದರು.

RELATED ARTICLES
- Advertisment -
Google search engine

Most Popular