Tuesday, November 11, 2025
Google search engine

Homeರಾಜ್ಯಟಿಟಿಡಿ ಲಡ್ಡುವಿನಲ್ಲಿ ನಕಲಿ ತುಪ್ಪ ಬಳಕೆ : ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ: ಪರಿಷತ್‌ ಸದಸ್ಯ ಶರವಣ

ಟಿಟಿಡಿ ಲಡ್ಡುವಿನಲ್ಲಿ ನಕಲಿ ತುಪ್ಪ ಬಳಕೆ : ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ: ಪರಿಷತ್‌ ಸದಸ್ಯ ಶರವಣ

ಬೆಂಗಳೂರು:  ತಿರುಪತಿ ಲಡ್ಡು ಪ್ರಸಾದ ತಯಾರಿಕೆಯಲ್ಲಿ ನಕಲಿ ತುಪ್ಪ ಬಳಸಿರುವುದು ಖಚಿತವಾಗಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ ಒತ್ತಾಯಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಇದು ಕೋಟ್ಯಂತರ ಹಿಂದೂ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿರುವ ಗಂಭೀರ ಪ್ರಕರಣವಾಗಿದೆ. ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ)ದಲ್ಲಿ ತಯಾರಾಗುವ ಲಡ್ಡು ಪ್ರಸಾದದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ನಕಲಿ ತುಪ್ಪ ಬಳಕೆಯಾಗಿರುವುದು ಎಸ್‌‍ಐಟಿ ತನಿಖೆಯಲ್ಲಿ ದೃಢಪಟ್ಟಿದೆ. 250 ಕೋಟಿ ರೂ.ಗೂ ಅಧಿಕ ಮೌಲ್ಯದ 68 ಲಕ್ಷ ಕೆ.ಜಿ. ನಕಲಿ ತುಪ್ಪವನ್ನು ಬಳಸಿರುವುದು ತನಿಖೆಯಿಂದ ದೃಢಪಟ್ಟಿದ್ದು, ಇದು ಖಂಡನೀಯ ಎಂದಿದ್ದಾರೆ.

ಅಕ್ರಮಕ್ಕೆ ಕಾರಣರಾದವರ ವಿರುದ್ಧ ಸಿಬಿಐ ಮತ್ತು ಆಂಧ್ರ ಪೊಲೀಸರ ತನಿಖೆಯ ಆಧಾರದ ಮೇಲೆ ಸೂಕ್ತ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿರುವ ಅವರು, ಟಿಟಿಡಿ ಲಡ್ಡುಗಳಲ್ಲಿ ಕೊಬ್ಬಿನಂಶ ಹಾಗೂ ಕಳಪೆ ಪದಾರ್ಥಗಳನ್ನು ಬಳಸಲಾಗಿದೆ ಎಂಬ ಆರೋಪವೂ ತನಿಖೆಯಲ್ಲಿ ದೃಢವಾಗಿದೆ. ಇಂತಹ ಕೆಲಸ ಮಾಡಿದವರಿಗೆ ಯಾವುದೇ ಕ್ಷಮೆ ಇರಬಾರದು ಎಂದರು.

ನಂದಿನಿ ತುಪ್ಪ ಬಳಕೆಗೆ ಮನವಿ: ಪ್ರಸಾದದ ಗುಣಮಟ್ಟ ಕಾಪಾಡಲು, ನಮ ರಾಜ್ಯದ ಪ್ರಖ್ಯಾತ ಮತ್ತು ಗುಣಮಟ್ಟದ ನಂದಿನಿ ತುಪ್ಪವನ್ನು ಎಷ್ಟು ಬೇಕಾದರೂ ಪೂರೈಸಲು ಕರ್ನಾಟಕ ಸರ್ಕಾರ ಸಿದ್ಧವಿದೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಟಿಟಿಡಿ ಆಡಳಿತವು ನಂದಿನಿ ತುಪ್ಪವನ್ನೇ ಬಳಸಬೇಕು ಎಂದು ಶರವಣ ಅವರು ಮನವಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular