Thursday, November 13, 2025
Google search engine

Homeರಾಜ್ಯಸುದ್ದಿಜಾಲರೈತ ಹೋರಾಟದಲ್ಲಿ ಕಲ್ಲು ತೂರಾಟ ನಡೆಸಿದ್ದ ಆರು ಆರೋಪಿಗಳ ಬಂಧನ: ಎಸ್ಪಿ.

ರೈತ ಹೋರಾಟದಲ್ಲಿ ಕಲ್ಲು ತೂರಾಟ ನಡೆಸಿದ್ದ ಆರು ಆರೋಪಿಗಳ ಬಂಧನ: ಎಸ್ಪಿ.

ವರದಿ :ಸ್ಟೀಫನ್ ಜೇಮ್ಸ್.

ಬೆಳಗಾವಿ
ಇತ್ತೀಚೆಗೆ ಕಬ್ಬು ಬೆಂಬಲ ಬೆಲೆ ಘೋಷಣೆಯ ಸಲುವಾಗಿ ರೈತರು ನಡೆಸಿದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಆರೋಪಿಗನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ್ ಹೇಳಿದರು.
ಗುರುವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಚನ್ನಗೌಡ ಸಸಾಲಟ್ಟಿ(40), ಪ್ರಶಾಂತ್ ಮುಗಳಿ(28), ವಿನಾಯಕ್ ಕೋಟಿವಾಲಿ(25), ಮಲ್ಲಪ್ಪ ಘಟಗಿ(46), ಶಿವಾನಂದ ವಾಣಿ(59), ಸೋಮಯ್ಯ ಹಿರೇಮಠ(46) ಬಂಧಿತ ಆರೋಪಿಗಳು ಎಂದರು.
ಹತ್ತರಗಿ ಟೋಲ್ ಬಳಿ ರೈತರ ಪ್ರತಿಭಟನೆ ವೇಳೆ ಕಲ್ಲು ತೂರಾಟ ಪ್ರಕರಣದಲ್ಲಿ 12 ಜನ ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ದರು. ಹತ್ತರಗಿ ಟೋಲ್ ಗೆಟ್ ನಲ್ಲಿ ಕಲ್ಲು ತೂರಾಟ ನಡೆಸಿದವರು ಯಾರೂ ರೈತರಲ್ಲ. ರೈತರ ಪ್ರತಿಭಟನೆ ಹೆಸರಿನಲ್ಲಿ ಗಲಾಟೆ ಮಾಡಲು ಬಂದಿದ್ದರು ಎಂದರು.
ಕಲ್ಲು ತೂರಾಟ ನಡೆಸಿದ ಕಿಡಗೇಡಿಗಳನ್ನು ಯಮಕನಮರಡಿ ಪೊಲೀಸರಿಂದ ಆರು ಜನ ದುಷ್ಕರ್ಮಿಗಳ ಬಂಧಿಸಿದ್ದಾರೆ‌‌. ಕಳೆದ ನ. 7ರಂದು ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದ್ದ ಘಟನೆಯಲ್ಲಿ ಪ್ರತಿ ಟನ್ ಕಬ್ಬಿಗೆ 3500ದರ ನಿಗದಿಗಾಗಿ ನಡೆದಿದ್ದ ರೈತರ ಹೋರಾಟ ನಡೆಸಿದರು. ಈ ವೇಳೆ ರೈತರ ವೇಷದಲ್ಲಿ ಬಂದು ಪೊಲೀಸರ ಮೇಲೆ ಹಲ್ಲೆ ನಡೆಸಿ ಕಲ್ಲು ತೂರಿದ್ದ ಕಿಡಗೇಡಿಗಳ ವಿರುದ್ಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿ ವಿಡಿಯೋ ಆಧರಿಸಿ ಆರು ಜನ ಆರೋಪಿಗಳ ಬಂಧಿಸಿದ್ದೇವೆ ಎಂದರು.

RELATED ARTICLES
- Advertisment -
Google search engine

Most Popular