ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಬದುಕನ್ನು ಬದಲಾವಣೆ ಮಾಡುವಲ್ಲಿ ವಿದ್ಯೆ ಮುಖ್ಯವಾಗಿದ್ದು ಅದರಂತೆ ವಿದ್ಯೆ ಕಲಿತ ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಲ್ಲಿ ಎಂದು ಶಾಸಕ.ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಜೇಜಿನಲ್ಲಿ 2025-26 ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಕೆ.ಎಸ್.ಓ.ಯು ದೂರ ಶಿಕ್ಷಣ ಕಲಿಕಾ ಕೇಂದ್ರ, ಮತ್ತು ಕ್ಯಾಂಟಿನ್ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಶಿಕ್ಷಣ ಪಡೆಯುವುದು ಸುಲಭವಾಗಿ ಸಿಗುವುದಿಲ್ಲ ಕಠಿಣ ಶ್ರಮ ವಹಿಸಿ ವಿದ್ಯೆ ಕಲಿತರೆ, ನೀವು ಕಲಿತ ವಿದ್ಯೆ ನಿಮ್ಮ ದಿಕ್ಸೂಚಿಯನ್ನೇ ಬದಲಾಯಿಸುವುದರ ಜೊತೆಗೆ ಶಾಶ್ವತವಾಗಿ ನಿಮ್ಮಲ್ಲಿ ಅದು ಮಣ್ಣಲ್ಲಿ ಮಣ್ಣಾಗುವವರೆಗೂ ಇರುತ್ತದೆ ಎಂದರು.
ಕಾಲೇಜಿನ ಅಭಿವೃದ್ಧಿಗಾಗಿ 15 ಕೋಟಿ ವೆಚ್ಚದಲ್ಲಿ ಜಿ.4 ಹೊಸ ಕಟ್ಟಡ ನಿರ್ಮಾಣದ ಕಾಮಗಾರಿಗೆ ಅತಿಶೀಘ್ರದಲ್ಲಿ ಚಾಲನೇ ನೀಡಲಾಗುವುದು ಹಾಗೂ ಕಾಲೇಜಿನ ಎಲ್ಲಾ ಮೂಲಭೂತ ಸೌಕರ್ಯಗಳ ಒದಗಿಸಲು ಕ್ರಮ ವಹಿಸುತ್ತೇನೆ, ಜೊತೆಗೆ ಶೌಚಾಲಯ ದುರಸ್ತಿ ಮಾಡಿಸಲಾಗುವುದು ಎಂದರಲ್ಲದೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಐದು ಲಕ್ಷ ಅನುದಾನ ನೀಡಲಾಗುವುದರ ಜೊತೆಗೆ ಕಾಲೇಜಿನ ಎಲ್ಲಾ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿದರು.
2008 ರಲ್ಲಿ ಮಂಜೂರಾಗಿದ್ದ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ದೂರ ಶಿಕ್ಷಣ ಕೇಂದ್ರವನ್ನು ಏಕೆ ಮುಚ್ಚಲಾಗಿತ್ತು. ಏಕೆ ಪ್ರಾರಂಬಿಸಲಿಲ್ಲ ಎಂದು ಪ್ರಶ್ನೆ ಮಾಡಿದ ಶಾಸಕರು ನಾನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಮೇಲೆ ಗ್ರಾಮೀಣ ಭಾಗದಲ್ಲಿ ದೂರ ಶಿಕ್ಷಣ ವಂಚಿತರಾಗ ಬಾರದ ಎಂದು ಮನಗಂಡು ಹಾಗೂ ಉನ್ನತ ಶಿಕ್ಷಣ ಎಲ್ಲರಿಗೂ ದೊರೆಯುವ ಉದ್ದೇಶದಿಂದ ಮಾರ್ಚ್ ತಿಂಗಳಲ್ಲಿ ಅನುಮೋದನೆ ಮಾಡಿಸಿ ದೂರ ಶಿಕ್ಷಣ ಕಲಿಕಾ ಕೇಂದ್ರವನ್ನು ಪ್ರಾರಂಬಿಸಲಾಗಿದೆ. ಈ ಬಗ್ಗೆ ವಿರೋಧ ಪಕ್ಷದವರು ಸೋಶಿಯಲ್ ಮೀಡಿಯಾದಲ್ಲಿ ಅನಗತ್ಯವಾಗಿ ಅಪ್ರಚಾರ ಮಾಡಲಾಗುತ್ತಿದೆ.
ಡಿ.ರವಿಶಂಕರ್, ಶಾಸಕರು.
ಪ್ರಾಸ್ತಾವಿಕ ನುಡಿ ನುಡಿದ ಕಾಲೇಜಿನ ಪ್ರಾಂಶುಪಾಲ ಡಾ ಬಿ.ಎಸ್.ಜಯ ಮಾತನಾಡಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆಗೊಂಡು 54 ವರ್ಷಗಳು ಪೂರೈಸಿದ್ದು, 1200 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಮುಂದಿನ ಸಾಲಿನಿಂದ ಪಿಎಸ್.ಪಿಎಂ. ಹಾಗೂ ಬಿಸಿಎ ಸ್ನಾತಕೋತ್ತರ ಪದವಿ ಶಿಕ್ಷಣ ಆರಂಭಗೊಳಗಳ್ಳಲಿದೆ ಆದ್ದರಿಂದ ಶಾಸಕರು ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ಕೊಠಡಿ ನಿರ್ಮಿಸಿ ಕೋಡ ಬೇಕೆಂದು ಮನವಿ ಮಾಡಿದರು.
ಕಾಲೇಜಿಗೆ ಒಳಚರಂಡಿ ವ್ಯವಸ್ಥೆ ಇಲ್ಲದಂತಾಗಿದ್ದು ಒಳಚರಂಡಿ ಹಾಗು ಶೌಚಾಲಯ ವ್ಯವಸ್ಥೆ ಕಲ್ಪಿಸಿ ಕೊಡಿ, ಕಾಲೇಜು ರಸ್ತೆ ಹಾಗೂ ಒಳ ರಸ್ತೆಗಳಿಗೆ ಡಾಂಬರೀಕರಣ ಮಾಡಿಸಿ ಕೊಡಿ ಎಂದರಲ್ಲದೆ ಜಿ.-4 ಹೊಸ ಕಟ್ಟಡ ನಿರ್ಮಾಣಕ್ಕೆ ಈಗೊ 15 ಕೋಟಿ ಹಣ ಬಿಡುಗಡೆ ಆಗಿದ್ದು ಟೆಂಡರ್ ಮುಗಿದಿದೆ. ಇನ್ನೇನು ಕಾಮಗಾರಿ ಆರಂಭಗೊಳ್ಳಲಿದ್ದು ಹಳೇಯ ಕಟ್ಟಡದ ಮೇಲ್ಚಾವಣಿಯನ್ನು ತೆಗೆದು ಅದರಲ್ಲಿ ಭೋದಕರ ಹಾಗೂ ವಿದ್ಯಾರ್ಥಿಗಳ ವಾಹನ ಪಾರ್ಕಿಂಗ್ ತಂ ಗುದಾಣ ನಿರ್ಮಿಸಿ ಕೊಡಿ ಎಂದು ಶಾಸಕರಲ್ಲಿ ಮನವಿ ಮಾಡಿದರು.
ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಚಿಕ್ಕಮಗಳೂರು ಗಣೇಶ್ ಮಾತನಾಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಕಾರ್ಯದರ್ಶಿ ಪ್ರಶಾಂತ್ ಜೈನ್, ಸದಸ್ಯರಾದ ನಟರಾಜು, ರಾಜಯ್ಯ ಸನಾಉಲ್ಲಾಖಾನ್, ಎಸ್.ಪ್ರಸಾದ್,ರಾಜೇಶ್, ಜಯರಾಮೇಗೌಡ, ಜಿ.ಆರ್.ರಾಮೇಗೌಡ, ಶಂಕರ್ ಸ್ವಾಮಿ, ಪುರಸಭೆ ಮಾಜಿ ಸದಸ್ಯ ಕೆ.ವಿನಯ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಚೀರನಹಳ್ಳಿ ಶಿವಣ್ಣ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ರಮೇಶ್ , ಕಾಂಗ್ರೆಸ್ ಮುಖಂಡರಾದ ರಾಣಿಬಾಲಶಂಕರ್, ವ್ಯಾನ್ ಸುರೇಶ್, ದಲಿತ ಮುಖಂಡ ರಾಮಯ್ಯ, ಸಾಂಸ್ಕೃತಿಕ ಸಮಿತಿ ಅಧ್ಯಾಪಕ ಕಾರ್ಯದರ್ಶಿ ಎಲ್.ಮಹೇಶ್, ಸಂಚಾಲಕರಾದ ಎ.ಸುಮ, , ಡಾ.ಜಿ.ಬಿ.ತಿಪ್ಪೇಸ್ವಾಮಿ, ಎಂ.ರಘು, ಕ್ಯಾಂಟಿನ್ ಸಂಚಾಲಕ ಡಾ. ಕೆ.ಎನ್.ಮೋಹನ್, ದತ್ತಿ ನಿಧಿ ಸಮಿತಿ ಸಂಚಾಲಕ ಡಾ.ಎಂ.ಎಸ್.ಮಹದೇವು, ಎನ್.ಸಿ.ಸಿ.ಅಧಿಕಾರಿ ಎನ್.ಯತೀಶ್, ಕಾರ್ಯಕ್ರಮ ಅಧಿಕಾರಿಗಳಾ್ ಎಂ.ವಿ.ರಾಘವೇಂದ್ರ, ಸಿ.ಸುಪ್ರೀತ, ಸಂಚಿಕೆ ಸಂಪಾದಕ ಡಾ.ಕೆ.ವಿ.ಕಿರಣ್ ಕುಮಾರ್ ಹಾಗೂ ಭೋದಕ ವರ್ಗ, ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು



