Sunday, November 16, 2025
Google search engine

HomeUncategorizedಯೆನೆಪೊಯ ವಿವಿಯ 15ನೇ ಘಟಿಕೋತ್ಸವ ಸಮಾರಂಭ

ಯೆನೆಪೊಯ ವಿವಿಯ 15ನೇ ಘಟಿಕೋತ್ಸವ ಸಮಾರಂಭ

ಮಂಗಳೂರಿನ ದೇರಳಕಟ್ಟೆಯ ಯೆನೆಪೊಯ ಪರಿಗಣಿತ ವಿಶ್ವವಿದ್ಯಾನಿಲಯದ ಆವರಣದ ಯೆಂಡುರೆನ್ಸ್ ಝೋನ್ ಸಭಾಂಗಣದಲ್ಲಿ ಶನಿವಾರ ಯೆನೆಪೊಯ ವಿವಿಯ 15ನೇ ಘಟಿಕೋತ್ಸವ ಸಮಾರಂಭ ನಡೆಯಿತು. ಇದೇ ವೇಳೆ ಘಟಿಕೋತ್ಸವ ಭಾಷಣ ಮಾಡಿದ ಹೊಸದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಶಾಂತಿಶ್ರೀ ಧುಲಿಪುಡಿ ಪಂಡಿತ್, ಭಾರತದ ಶಕ್ತಿಯನ್ನು ಕೇವಲ ಆರ್ಥಿಕ ಬೆಳವಣಿಗೆಯಿಂದ ಮಾತ್ರ ನಿರ್ಧರಿಸಲು ಸಾಧ್ಯವೇ ಇಲ್ಲ. ದೇಶದ ಭಾಷೆಯು ವೈವಿಧ್ಯಮಯ ಸಂಸ್ಕೃತಿ ಸಂಪ್ರದಾಯಗಳಿಂದ ಕೂಡಿದೆ. ಈ ವೈವಿಧ್ಯವನ್ನು ಸ್ವೀಕರಿಸಿ, ನಿಮ್ಮ ಭವಿಷ್ಯವನ್ನು ನೀವೇ ರೂಪಿಸಬೇಕೆಂದು ಕರೆ ನೀಡಿದರು. ನಮ್ಮ ಸುತ್ತ-ಮುತ್ತಲಿನ ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ಮಾಡಲು ಪ್ರಯತ್ನಿಸಿ. ಅಲ್ಲದೇ ಸವಾಲುಗಳನ್ನು ಎದುರಿಸಿ ಮುಂದೆ ಹೋಗಿ ಎಂದು ಕರೆ ನೀಡಿದರು.
ಘಟಿಕೋತ್ಸವದ ಅಧ್ಯಕ್ಷತೆಯನ್ನು ವಿವಿಯ ಕುಲಾಧಿಪತಿ ಡಾ.ಯೆನೆಪೊಯ ಅಬ್ದುಲ್ಲಾ ಕುಂಞಿ ವಹಿಸಿ ವಿವಿಧ ವಿಭಾಗಗಳ ಪದವೀಧರರಿಗೆ ಪದವಿ ಪ್ರಧಾನ ಮಾಡಿದರು.
ಸೆಂಟರ್ ಫಾರ್ ಸೆಲ್ಯುಲಾರ್ ಆಂಡ್ ಮಾಲಿಕ್ಯುಲರ್ ಪ್ಲಾಟ್ಫಾರ್ಮ್ಸ್, ಬೆಂಗಳೂರು ಇದರ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ತಸ್ಲಿಮರಿಫ್ ಸಯ್ಯದ್ ಗೌರವ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಉಪಕುಲಪತಿ ಡಾ. ಎಂ. ವಿಜಯಕುಮಾರ್ ಸ್ವಾಗತಿಸಿ, ವಿಶ್ವವಿದ್ಯಾನಿಲಯದ ವರದಿ ವಾಚಿಸಿದರು.
ಇನ್ನು ಈ ಸಮಾರಂಭದಲ್ಲಿ ದಂತ, ವೈದ್ಯಕೀಯ, ನರ್ಸಿಂಗ್, ಫಿಸಿಯೋಥೆರಪಿ, ಫಾರ್ಮಸಿ, ಅಲೈಡ್ ಹೆಲ್ತ್ ಸೈನ್ಸಸ್, ಆಯುರ್ವೇದ, ಹೋಮಿಯೋಪತಿ, ವಿಜ್ಞಾನ, ಕಲೆ ಮತ್ತು ಸಮಾಜ ವಿಜ್ಞಾನ, ವಾಣಿಜ್ಯ ಮತ್ತು ಮ್ಯಾನೇಜೆಂಟ್ ಮುಂತಾದ ವಿವಿಧ ವಿಭಾಗಗಳ ಚಿನ್ನದ ಪದಕ ವಿಜೇತರು, ಡಾಕ್ಟರೇಟ್ ಪದವೀಧರರು ಸೇರಿದಂತೆ ಒಟ್ಟು 3,729 ಪದವೀಧರರಿಗೆ ಪದವಿ ಪ್ರಧಾನ ಮಾಡಲಾಯಿತು.
ವಿವಿ ಸಹ ಕುಲಾಧಿಪತಿ ಮುಹಮ್ಮದ್ ಫರ್ಹಾದ್ ಯೆನೆಪೊಯ, ಪರೀಕ್ಷಾಂಗ ನಿಯಂತ್ರಕ ಡಾ.ಬಿ.ಟಿ. ನಂದೀಶ್, ಸಹ ಕುಲಪತಿ ಡಾ.ಬಿ.ಎಚ್. ಶ್ರೀಪತಿ ರಾವ್, ಕುಲಸಚಿವ ಡಾ. ಗಂಗಾಧರ ಸೋಮಯಾಜಿ ಕೆ.ಎಸ್. ಸೇರಿ ಅನೇಕ ಮಂದಿ ಗಣ್ಯರು ಹಾಜರಿದ್ದರು.

RELATED ARTICLES
- Advertisment -
Google search engine

Most Popular