Saturday, November 22, 2025
Google search engine

Homeರಾಜ್ಯಸುದ್ದಿಜಾಲಜೆಡಿಎಸ್ ಪಕ್ಷವನ್ನು ಉಳಿಸಿ ಬೆಳೆಸಬೇಕಾಗಿದೆ- ಮಾಜಿ ಸಚಿವ ಸಾ.ರಾ.ಮಹೇಶ್

ಜೆಡಿಎಸ್ ಪಕ್ಷವನ್ನು ಉಳಿಸಿ ಬೆಳೆಸಬೇಕಾಗಿದೆ- ಮಾಜಿ ಸಚಿವ ಸಾ.ರಾ.ಮಹೇಶ್

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಈ ದೇಶ ಉಳಿಯಬೇಕು, ರಾಜ್ಯ ಉಳಿಯಬೇಕು ಎಂದರೇ ನಮ್ಮ ನಾಯಕರುಗಳಾದ ಹೆಚ್.ಡಿ.ದೇವೆಗೌಡರು ಮತ್ತು ಹೆಚ್.ಡಿ.ಕುಮಾರಸ್ವಾಮಿಯವರನ್ನು ನಾವುಗಳು ಬೆಂಬಲಿಸಿ ಜೆಡಿಎಸ್ ಪಕ್ಷವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಶುಕ್ರವಾರ ಕರ್ನಾಟಕ ಪ್ರದೇಶ ಜಾತ್ಯಾತೀತ ಜನತಾದಳ ಪಕ್ಷದ ೨೫ನೇ ವರ್ಷದ ರಜತ ಮಹೋತ್ಸವ ಸಂಭ್ರಮದ ಆಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರಕ್ಕೆ ನರೇಂದ್ರ ಮೋದಿ ಮತ್ತು ಹೆಚ್.ಡಿ.ದೇವೆಗೌಡರು, ರಾಜ್ಯಕ್ಕೆ ಹೆಚ್.ಡಿ.ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪ, ಯುವಕರಿಗೆ ನಿಖಿಲ್ ಮತ್ತು ವಿಜೇಂದ್ರ ಅವರುಗಳೇ ನಮ್ಮ ಮುಂದಿನ ನಾಯಕರಾಗಿದ್ದು ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸೋಣ ಎಂದರು.

ಏಳು ಬೀಳುಗಳನ್ನು ಕಂಡು ಹೆಚ್.ಡಿ.ದೇವೆಗೌಡರನ್ನ, ಹೆಚ್.ಡಿ.ಕುಮಾರಸ್ವಾಮಿಯವರನ್ನ, ಜೆಡಿಎಸ್ ಪಕ್ಷವನ್ನ ಹಾಗೂ ಕಾರ್ಯಕರ್ತರನ್ನ ಅಧಿಕಾರ ಇರಲಿ ಇಲ್ಲದಿರಲಿ, ದುಡ್ಡಿರಲಿ ಅಥವಾ ಬಿಡಲಿ ಆದರೂ ತಾಲೂಕಿನಲ್ಲಿ ಕಟ್ಟಿಕೊಂಡು ಬಂದಿರುವ ಅರ್ಜುನಹಳ್ಳಿ ಗಣೇಶಣ್ಣ ಮತ್ತು ಪ್ರಕಾಶಣ್ಣರವರಿಗೆ ನಿಮ್ಮೆಲ್ಲರ ಪರವಾಗಿ ನಾನು ಅಭಿನಂದನೇ ಸಲ್ಲಿಸುತ್ತೇನೆ ಎಂದು ತಿಳಿಸಿದರು.

೨೨ ವರ್ಷ ಈ ತಾಲೂಕಿನಲ್ಲಿ ನನ್ನನ್ನು ನಿಮ್ಮ ಮನೆ ಮಗನಾಗಿ ಕಂಡಿದ್ದೀರಿ ನನ್ನ ಮೇಲಿನ ಪ್ರೀತಿಗೆ ಕೆಲವರು ನನ್ನ ಕಾಲಿಗೆ ಬಿದ್ದು ನಮಸ್ಕರಿಸುತ್ತಾರೆ. ಅದನ್ನೇ ನೀವು ಓಟು ಕೊಟ್ಟ ಮತದಾರರನ್ನ ಕಾಲಿಗೆ ಬೀಳಿಸಿಕೊಳ್ಳುತ್ತೀರಿ ಎಂದು ಕಳೆದ ಚುನಾವಣೆಯಲ್ಲಿ ಅಪಪ್ರಚಾರ ಮಾಡಿ ಟೀಕಿಸಿದ್ರೀ. ಆದರೇ ನೀವು ಮರದಾರರ ಕಾಲಿಗೆ ಬಿದ್ದು ಇತ್ತೀಚೇಗೆ ದೊಡ್ಡೆಕೊಪ್ಪಲು ಗ್ರಾಮದಲ್ಲಿ ವ್ಯಕ್ತಿಯೋರ್ವನಿಗೆ ಕಪಾಳಮೋಕ್ಷ ಮಾಡಿದ್ದೀರಿ ಎಂದು ಶಾಸಕ ಡಿ.ರವಿಶಂಕರ್ ಹೆಸರೇಳದೆ ಕುಟುಕಿದ ಸಾ.ರಾ.ಮಹೇಶ್ ಇದು ನಿಮಗೆ ಮತ್ತು ನಿಮ್ಮ ನಾಯಕರಿಗೆ ಇರುವ ಅಧಿಕಾರದ ದರ್ಪ ನೀವೆಲ್ಲಾ ನಮ್ಮ ನಾಯಕರಾದ ದೇವೆಗೌಡರು ಮತ್ತು ಕುಮರಸ್ವಾಮಿಯವರನ್ನು ನೋಡಿ ಕಲಿಯಿರಿ ಎಂದರು.

ಯಾವುದೇ ಧರ್ಮ, ಜಾತಿ ಭೇದ ವಿಲ್ಲದೇ ಕೆಲಸ ಮಾಡೋಣ ಪ್ರಮಾಣಿಕತೆ ಬಹಳ ಮುಖ್ಯ ಊಟಕೊಟ್ಟು, ಓಟುಕೊಟ್ಟು ಅಧಿಕಾರ ಕೊಟ್ಟವರ ಬಳಿ ಹಾಗೂ ಅಧಿಕಾರಿಗಳ ಹತ್ತಿರ ಹಣ ಪಡೆದು ಅವರನ್ನು ವಸೂಲಿ ಮಾಡಲು ಬಿಡುವುದು ಒಂದೇ ಬಿಕ್ಷೆ ಬೇಡುವುದು ಒಂದೇ. ಅಧಿಕಾರಿಯಿಂದ ಹಣ ಪಡೆದು ನೇಮಕ ಮಾಡಿದರೇ ಆತ ಜನರಿಂದ ವಸೂಲಿ ಮಾಡುತ್ತಾನೆ ಎಂದು ಆರೋಪಿಸಿದರು.

ಹಾಲಿನಿಂದ ಆಲ್ಕೋಹಾಲ್ ವರೆಗೆ ಬೆಲೆ ಹೆಚ್ಚಾಗಿದೆ. ರಾಜ್ಯ ಸರ್ಕಾರ ೬ ಲಕ್ಷ ಕೋಟಿ ಸಾಲ ಮಾಡಿದ್ದು ಅದರಲ್ಲಿ ೪.೫೦ ಸಾವಿರ ಕೋಟಿಯನ್ನ ನಮ್ಮ ಮೈಸೂರಿನ ಮುಖ್ಯಮಂತ್ರಿಗಳೇ ಮಾಡಿರುವುದು. ಅದರಲ್ಲಿ ಯಾವುದೇ ಜಾತಿ, ಪಕ್ಷ ಬೇಧವಿಲ್ಲಾ. ಆದರೇ ನಮ್ಮ ಕುಮಾರಣ್ಣ ೧ ರಿಂದ ೩ ಲಕ್ಷದ ವರೆಗೆ ಪ್ರತಿಯೊಬ್ಬ ರೈತನ ಸಾಲ ಮನ್ನಾ ಮಾಡಿದರು. ಆದ್ದರಿಂದ ರಾಜ್ಯದ ಜನ ನಮ್ಮನ್ನು ಅಧಿಕಾರಕ್ಕೆ ತರಲು ತೀರ್ಮಾನಿಸಿದ್ದಾರೆ ಎಂದು ಹೇಳಿದರು.

೨ಸಾವಿರ ರೂಪಾಯಿ ಗೃಹಲಕ್ಷಿö್ಮ ಹಣ ಕೊಡುವುದಕೋಷ್ಕರ ಎಲೆಕ್ಷನ್‌ಗಳು ಬಂದಾಗ ಮಾತ್ರ ಮರ‍್ನಾಲ್ಕು ತಿಂಗಳ ಹಣ ಆಕುವುದು. ಹಿಂದೆ ಸರ್ಕಾರ ಅಧೀನದಲ್ಲಿರುವ ಕಂಪನಿಗಳಿAದ ಬರುವ ಲಾಭಾಂಶದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಚೆಕ್ ಮೂಲಕ ತೆಗೆದುಕೊಳ್ಳುತ್ತಿದ್ದರು. ಆದರೇ ಈಗ ರಾಜ್ಯ ಸರ್ಕಾರದಲ್ಲಿ ಸಂಬಳ ಕೊಡಲಾಗದೆ ೩೬ ಕೋಟಿಯನ್ನ ಸರ್ಕಾರಿ ಸ್ವಾಮ್ಯದ ಕಂಪನಿಯೊAದರಿAದ ರಾಜ್ಯಪಾಲರ ಹೆಸರಿಗೆ ತೆಗೆದುಕೊಂಡಿದ್ದಾರೆ ಎಂದು ದೂರಿದ್ದಾರೆ.

ನಾನು ಪ್ರತಿ ಮಂಗಳವಾರ ಕಚೇರಿಯಲ್ಲಿ ಜನರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಸಿಗುತ್ತೇನೆ ಕಷ್ಟ ಸುಖಗಳಿಗೆ ಸ್ಪಂದಿಸಿ ನಿಮ್ಮ ಜತೆ ಇರುತ್ತೇನೆ ನಾವೆಲ್ಲಾ ಸೇರಿ ನಮ್ಮ ನಾಯಕರ ಕೈ ಬಲಪಡಿಸೋಣ ಎಂದು ಮನವಿ ಮಾಡಿದರು. ನಂತರ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯಿಂದ ಮೆರವಣಿಗೆ ಹೊರಟ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಗರುಡುಗಂಭ ವೃತ್ತ, ಪುರಸಭಾ ವೃತ್ತಾದ ಮೂಲಕ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ತೆರಳಿ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಹಂಪಾಪುರಕುಮಾರ್, ವಕ್ತಾರ ಕೆ.ಎಲ್.ರಮೇಶ್, ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ಕುಚೇಲ, ಮಹಿಳಾ ಘಟಕದ ಜಿಲ್ಲಾದ್ಯಕ್ಷೆ ದಾಕ್ಷಾಯಿಣಿ, ತಾಲೂಕು ಅಧ್ಯಕ್ಷೆ ರಾಜಲಕ್ಷಿö್ಮ ನಗರಾಧ್ಯಕ್ಷೆ ರೂಪಾ, ತಾಪಂ ಮಾಜಿ ಸದಸ್ಯರಾದ ಹಂಗರಬಾಯನಹಳ್ಳಿತಮ್ಮಣ್ಣ, ನಾಗಣ್ಣ, ಪುರಸಭಾ ಮಾಜಿ ಸದಸ್ಯರಾದ ಕೆ.ಪಿ.ಪ್ರಭುಶಂಕರ್, ರಾಜಾಶ್ರೀಕಾಂತ್, ಸಂತೋಷಗೌಡ, ಉಮೇಶ್, ಜಿ.ಪಿ.ಮಂಜು, ಮುಖಂಡರಾದ ಹನಸೋಗೆನಾಗರಾಜು, ನೀಲಯ್ಯ, ಘನತೆಕುಮಾರ್, ದೇವೇಂದ್ರ ಸೇರಿದಂತೆ ಇನ್ನಿತರರು ಇದ್ದರು.

RELATED ARTICLES
- Advertisment -
Google search engine

Most Popular