ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಟ್ಟಣದ ವ್ಯಾಪ್ತಿಯಲ್ಲಿ ಬರುವ ರಸ್ತೆಗಳು ಅಭಿವೃದ್ಧಿಗೆ 10 ಕೋಟಿ ವಿಶೇಷ ಅನುದಾನ ನೀಡಿದ್ದಾರೆ ಎಂದು ಶಾಸಕ.ಡಿ.ರವಿಶಂಕರ್ ಹೇಳಿದರು.
ಕೆ.ಆರ್.ನಗರದಿಂದ – ಹುಣಸೂರು ರಸ್ತೆಗೆ 5 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಪಟ್ಟಣದ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಕ್ರಿಯಾ ಯೋಜನೆ ತಯಾರಿಸಲಾಗಿದ್ದು ಬಯಲು ರಂಗಮಂದಿರ (ಡಾ.ರಾಜ್ ಬಾನಂಗಳ ) 1.50 ಕೋಟಿ ಹಾಗೂ ಗಾಂಧಿ ಪಾರ್ಕ್, ದೇವಿರಮ್ಮ ಶಿಶು ವಿಹಾರ ಮೈದಾನ ಸೇರಿದಂತೆ ಇತರ ಪಾಕರ್ಗಳಿಗೆ ತಲಾ 50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಎತ್ತಿಗೊಳ್ಳಲಾಗಿದೆ ಎಂದರು.
ಪಟ್ಟಣದ ನಾಗರೀಕರು, ವಿದ್ಯಾರ್ಥಿ ಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ 1.30 ವೆಚ್ಚದಲ್ಲಿ ಡಿಜಿಟಲ್ ಲೈಬ್ರರಿ ನಿರ್ಮಾಣ ಮಾಡಲಾಗುವುದು ಎಂದರಲ್ಲದೆ ಪ್ರವಾಸಿ ಮಂದಿರ ತುಂಬಾ ಹಳೇಯದಾಗಿದ್ದು ಅದನ್ನು ತೆರವುಗೊಳಿಸಿ ಅಂದಾಜು 2.50 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಳ್ಳುವುದರ ಜೊತಗೆ ಪಟ್ಟಣದ ಹೊರ ವಲಯದ ಹಳೇ ಎಡತೊರೆಯ ಮೀನಾಕ್ಷಿ ಸಮೇತ ಅರ್ಕೇಶ್ವರ ಸ್ವಾಮಿಯ ದೇವಾಲಯ ಜೀರ್ಣೋದ್ಧಾರ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಈ ಬಾರಿ ವಿಶೇಷವಾಗಿ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಹಳೇ ಎಡತೊರೆಯ ಮೀನಾಕ್ಷಿ ಸಮೇತ ಅರ್ಕೇಶ್ವರಸ್ವಾಮಿ ದೇವಾಲಯ ಬಳಿ ಇರುವ ಕಾವೇರಿ ನದಿಯ ಮದ್ಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶಿವನ ವಿಗ್ರಹ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಪಟ್ಟಣದ ಗರುಡಗಂಭ ವೃತ್ತದಿಂದ ಹುಣಸೂರು ರಸ್ತೆಯ ಮಾರಿಗುಡಿ ನವ ಗ್ರಾಮದವರೆಗೆ ದ್ವಿಪಥ ರಸ್ತೆ ನಿರ್ಮಿಸಿ ಮಧ್ಯ ಭಾಗದಲ್ಲಿ ವಿದ್ಯುತ್ ಕಂಬ ಆಳವಡಿಸಿ ಉತ್ತಮ ಗುಣಮಟ್ಟದ ರಸ್ತೆ ಮಾಡಲಾಗುವುದು ಎಂದರಲ್ಲದೆ ಹುಣಸೂರು ಗಡಿ ಭಾಗದ ವರೆಗೆ ಗುಣಮಟ್ಟದ ಏಳೂವರೆ ಮೀಟರ್ ರಸ್ಗೆ ಹಾಗೂ ಅಗತ್ಯ ಕಡೆಗಳಲ್ಲಿ ಚರಂಡಿ ನಿರ್ಮಾಣ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಪಟ್ಟಣದ ಮುಳ್ಳೂರು ರಸ್ತೆ ಹಾಗೂ ಜಾಮೀಯ ಮಸೀದಿ ರಸ್ತೆಯಿಂದ ಹುಣಸೂರು ರಸ್ತೆಗೆ ಸಂಪರ್ಕಿಸುವ ಕಡೆ ವೃತ್ತ ನಿರ್ಮಾಣ ಮಾಡಿ ಅಭಿವೃದ್ಧಿ ಪಡಿಸಲಾಗುವುದು ಎಂದ ಶಾಸಕರು ವಾಹನ ದಟ್ಟಣೆಯನ್ನು ತಪ್ಪಿಸಲು ಎರಡೂವರೆ ತಿಂಗಳಲ್ಲಿ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಿ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಕಪಾಲ ಮೋಕ್ಷ ಮಾಡಿದ್ದೇನೆ ಎಂದು ವಿರೋಧಿಗಳು ನನ್ನ ವಿರುದ್ಧ ಅಪ ಪ್ರಚಾರ ಮಾಡುತ್ತಿದ್ದಾರೆ ಇದಕ್ಕೆ ನಾನು ಕಿವಿಗೊಡಲ್ಲ, ಕ್ಷೇತ್ರದ ಅಭಿವೃದ್ಧಿಗೆ ಹೆಚ್ಷು ಒತ್ತು ಕೊಡುತ್ತಿದ್ದೇನೆ ಹೊರತು ಇವರ ಹೇಳಿಕೆಗಳಿಗೆ ಮಹತ್ವ ಕೊಡಲ್ಲ, ಕಳೆದ 20 ವರ್ಷಗಳಿಂದ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ನಾನು ಸಾರ್ವಜನಿಕ ಸೇವೆ ಮಾಡುತ್ತಿದ್ದು ನಮ್ಮಕುಟುಂಬದ ವ್ಯಕ್ತಿತ್ವ ಏನೆಂಬುದು ಕ್ಷೇತ್ರದ ಜನತೆಗೆ ಗೊತ್ತಿದೆ. ಆದರಿಂದಲೇ ನಾನು 27 ಸಾವಿರ ಅಧಿಕ ಮತಗಳಿಂದ ಆಯ್ಕೆಯಾಗಿದ್ದೇನೆ. ಮುಂದೆಯು ಕೂಡ ನಾನು ಕ್ಷೇತ್ರದ ಜನತೆಯ ಕಾಲಿಗೆ ಬೀಳುತ್ತೇನೆ ಆರ್ಶೀವಾದ ಪಡೆಯುತ್ತೇನೆ ಹೊರತು ನಮ್ಮ ವಿರೋಧಿಗಳ ಅಪ ಪ್ರಚಾರಕ್ಕೆ ಕಿವಿಗೊಡಲ್ಲ.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ನಿರ್ಧೇಶಕರಾದ ಕೆ.ಎನ್.ಪ್ರಸನ್ನ, ಸಯ್ಯದ್ದ್ ಜಾಬೀರ್, ಹಿರಿಯ ವೈದ್ಯ ಡಾ.ಮೋಹನ್ ದಾಸಭಟ್, ಪುರಸಭೆ ಮಾಜಿ ಅಧ್ಯಕ್ಷರಾದ ಕೋಳಿ ಪ್ರಕಾಶ್, ಸಿದ್ದಿಕ್, ಶಿವುನಾಯಕ್, ಮಾಜಿ ಸದಸ್ಯರಾದ ಜಾವೀದ್ ಪಾಷ, ಶಂಕರ್ ಸ್ವಾಮಿ, ನಟರಾಜ್, ಕೆ.ವಿನಯ್, ಅಸ್ಲಂಪಾಷ, ಜಿ.ಪಂ.ಮಾಜಿ ಅಧ್ಯಕ್ಷ ಸಿದ್ದಪ್ಪ, ತಾ.ಕುರುಬರ ಸಂಘದ ಅಧ್ಯಕ್ಷ ಚೀರನಹಳ್ಳಿ ಶಿವಣ್ಣ, ಬ್ಲಾಕ್ ಕಾಂಗ್ರೆಸ್ ರಾದ ಅಧ್ಯಕ್ಷ ಎಂ.ಎಸ್.ಮಹದೇವ್, ಎಂ.ಜೆ.ರಮೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಕೆಂಚಿಮಂಜು, ಜಾಮೀಯ ಮಸೀದಿ ಕಮಿಟಿ ಕಾರ್ಯದರ್ಶಿ ತಸ್ಸವರ್ ಪಾಷ, ಕಾಂಗ್ರೆಸ್ ಮುಖಂಡರಾದ ನವೀದ್ದ್, ಕೆ.ಪಿ.ಜಗದೀಶ್, ತಿಪ್ಪೂರು ಮಹದೇವನಾಯಕ, ವಕೀಲ ಮಹದೇವ ಸ್ವಾಮಿ, ಗಾಂಧಿ ಶಿವಣ್ಣ, ಡೈರಿ ಮಹದೇವ್, ಸುಮಂತ್, ಕೆ.ಎಲ್.ರಾಜೇಶ್, ಲೋಕೋಪಯೋಗಿ ಇಲಾಖೆಯ ಎಇಇ ಸುಮಿತ, ಜೆಇ ಸಿದ್ದೇಶ್ವರ ಪ್ರಸಾದ್ ಮೊದಲಾದವರು ಇದ್ದರು.



