Sunday, November 23, 2025
Google search engine

Homeಅಪರಾಧನಂಜನಗೂಡಿನಲ್ಲಿ ಮತ್ತೆ ಹೊರಬಂದ ಲಾಂಗು ಮಚ್ಚು: ರೌಡಿಶೀಟರ್ ಧನರಾಜ್ ಬೋಲಾ ಮೇಲೆ ಮಾರಕಾಸ್ತ್ರಗಳಿಂದ ದಾಳಿ

ನಂಜನಗೂಡಿನಲ್ಲಿ ಮತ್ತೆ ಹೊರಬಂದ ಲಾಂಗು ಮಚ್ಚು: ರೌಡಿಶೀಟರ್ ಧನರಾಜ್ ಬೋಲಾ ಮೇಲೆ ಮಾರಕಾಸ್ತ್ರಗಳಿಂದ ದಾಳಿ

ನಂಜನಗೂಡು : ನಂಜನಗೂಡಿನಲ್ಲಿ ಮತ್ತೆ ಲಾಂಗು, ಮಚ್ಚು ಝಳಪಿಸಿದೆ. ನಗರದ ರೌಡಿ ಶೀಟರ್ ಧನರಾಜ್ ಭೋಲಾ ಮೇಲೆ ಶುಕ್ರವಾರ ರಾತ್ರಿ ದಾಳಿ ಮಾಡಲಾಗಿದೆ. 10 ಜನರ ತಂಡ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ.

ನಂಜನಗೂಡು ಪಟ್ಟಣದ ಶಂಕರಪುರ ಬಡಾವಣೆ ಬಳಿ ನಡೆದಿದೆ. ನಗರದ ರಘು ಮತ್ತು ಕಾರ್ತಿಕ್ ಹಾಗೂ ಇತರರು ದಾಳಿ ಮಾಡಿದ್ದಾರೆ.

ಬೈಕ್ ನಲ್ಲಿ ಬರುತ್ತಿದ್ದಾಗ ಮಾರಕಾಸ್ತ್ರಗಳಿಂದ ದಾಳಿ ಮಾಡಲಾಗಿದೆ. ಧನರಾಜ್ ಭೋಲಾ ನ ಬೆರಳುಗಳು ಕಟ್ ಆಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಘು ಹಾಗೂ ಕಾರ್ತಿಕ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವೈಯುಕ್ತಿಕ ಕಾರಣಕ್ಕೆ ದ್ವೇಷ ಬೆಳೆಸಿಕೊಂಡು ಹಲ್ಲೆ ನಡೆಸಿದ್ದಾರೆಂದು ಹೇಳಲಾಗಿದೆ. ಉಳಿದ ಆರೋಪಿಗಳ ಸೆರೆಗೆ ನಂಜನಗೂಡು ಪೊಲೀಸರು ಬಲೆ ಬೀಸಿದ್ದಾರೆ. ಧನರಾಜ್ ಭೋಲಾಗೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

RELATED ARTICLES
- Advertisment -
Google search engine

Most Popular