ವರದಿ: ಎಡತೊರೆ ಮಹೇಶ್
ಎಚ್ ಡಿ ಕೋಟೆ: ಹಾರ್ಟ್ ಸಂಸ್ಥೆ ಮೈಸೂರು, ರೋಟರಿ ಕ್ಲಬ್ ಆಪ್ ಮೈಸೂರು ವೆಸ್ಟ್ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹೆಚ್. ಡಿ.ಕೋಟೆ , ಪ್ರಾಥಮಿಕ ಆರೋಗ್ಯ ಕೇಂದ್ರ ಸಾಗರೆ ,ಬಿದರಹಳ್ಳಿ ಗ್ರಾಮ ಪಂಚಾಯಿತಿ ಇವರ ಸಹಯೋಗದೊಂದಿಗೆ ಹೊಸಕೆರೆ ಸುಂಡ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ. ರವಿಕುಮಾರ್.ಟಿ. ಅಧ್ಯಕ್ಷತೆ ವಹಿಸಿ ದೀಪ ಬೆಳಗುವುದರ ಮೂಲಕ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿ ಆರೋಗ್ಯವೇ ಭಾಗ್ಯ ಈ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಹಾರ್ಟ್ ಸಂಸ್ಥೆಯು 8 ಶಿಬಿರಗಳನ್ನು ನಮ್ಮ ತಾಲೂಕಿನಲ್ಲಿ ನಡೆಸಿದ್ದು ಇದು 9 ನೆಯ ಶಿಬಿರ, ಇಂತಹ ಕುಗ್ರಾಮಗಳಲ್ಲಿ ಶಿಬಿರಗಳು ನಡೆಯಬೇಕು ಈ ಭಾಗದಲ್ಲಿ ತಾಲೂಕಿನ ಆಸ್ಪತ್ರೆಗಳು ಸಂಪರ್ಕ ಇಲ್ಲದೆ ಇರುವುದರಿಂದ ಇಲ್ಲಿಗೆ ತಜ್ಞ ವೈದ್ಯರನ್ನು ಕರೆಯಿಸಿ ತಪಾಸಣೆ ನಡೆಸುತ್ತಿದ್ದು, ಕಾಡಂಚಿನ ಗ್ರಾಮಗಳಿಗೆ ತುರ್ತು ಸಂದರ್ಭದ ಚಿಕಿತ್ಸೆಗಾಗಿ ಅಬುಲೆನ್ಸ್ ನೀಡಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ನಂತರ ಮಾತನಾಡಿದ ಡಾ. ಶರತ್ ರವರು ಪ್ರತಿಯೊಬ್ಬರ ಆರೋಗ್ಯ ಬಹಳ ಮುಖ್ಯ, ಈ ಶಿಬಿರದಿಂದ ಹೃದಯ ಸಮಸ್ಯೆಗಳನ್ನು ಗುರುತಿಸಲು ಸಹಕರಿಯಾಗಿದೆ, ಗ್ರಾಮದಲ್ಲಿ ನೀರಿನ ಪರೀಕ್ಷೆ ಮಾಡಲಾಗುವುದು, ಯಾವುದೇ ಆರೋಗ್ಯ ಸಮಸ್ಯೆಗಳು ಕಂಡು ಬಂದಲ್ಲಿ ಆರೋಗ್ಯ ಕಾರ್ಯ ಕರ್ತರನ್ನು ಭೇಟಿ ಮಾಡಿ ಆಗತ್ಯೆ ಸೇವೆಗಳನ್ನು ಪಡೆದುಕೊಳ್ಳಿ ಸದಾ ನಿಮ್ಮ ಜೊತೆಗೆ ನಾವಿರುತ್ತೇವೆ ಎಂದು ತಿಳಿಸಿದರು.
ವೇದಿಕೆಯಲ್ಲಿ ನಾರಾಯಣ ಹೆಲ್ತ್ ಸಾಮಾನ್ಯ ರೋಗ ತಜ್ಞರಾದ ಡಾ ಪೂರ್ಣಿಮಾ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ನರಸಿಂಹ ಮೂರ್ತಿ, ಎಸ್. ಡಿ. ಎಂ. ಸಿ. ಅಧ್ಯಕ್ಷ ಶಿವಪ್ಪ ಅಸಿನರಾಗಿದ್ದರು. ಈ ಶಿಬಿರದಲ್ಲಿ ಬಿಪಿ ಮತ್ತು ಶುಗರ್ 45 ಸಾಮಾನ್ಯ ರೋಗ ತಪಾಸಣೆ 45 ಜನ ಕಣ್ಣಿನ ಪರೀಕ್ಷೆ, ಇಸಿಜಿ 25 ಜನರು ಮಾಡಿಸಿಕೊಂಡರು ಇಸಿಜಿ ತೊಂದರೆ ಇದ್ದ 4 ಜನರನ್ನು ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿಕೊಡಲಾಯಿತು. 10 ಮಕ್ಕಳು ಕಣ್ಣಿನ ಪರೀಕ್ಷೆಗೆ ಒಳಪಟ್ಟರು.
ಶಿಬಿರದಲ್ಲಿ ಶಿಕ್ಷಕರಾದ ಕುಮಾರ್, ಮೈಸೂರು ಎ.ಎಸ್.ಜಿ ಕಣ್ಣಿನ ಆಸ್ಪತ್ರೆಯ ಮಹೇಶ್, ಜಾರ್ಜ್, ಮತ್ತು ತಂಡ, ನಾರಾಯಣ ಹೆಲ್ತ್ ಸುಪ್ರೀತ್ ಮತ್ತು ತಂಡ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಸಿಬ್ಬಂದಿ ರವಿರಾಜ್, ಶರಣಪ್ಪ, ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ನೇತ್ರಾವತಿ, ಮಾಚಿ, ಪುಷ್ಪ, ಆಶಾ ಕಾರ್ಯಕರ್ತೆ ಸವಿತಾ, ಗಾಯಿತ್ರಿ, ಉಷಾರಾಣಿ, ಚಲುವರಾಜಿ, ರಾಜೇಶ್, ಹಾರ್ಟ್ ಸಂಸ್ಥೆ ಸಂಯೋಜಕ ಶಿವಲಿಂಗ ಸಾರ್ವಜನಿಕರು ಇದ್ದರು.
.



