Wednesday, November 26, 2025
Google search engine

Homeಕ್ಯಾಂಪಸ್ ಕಲರವವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವು ಮುಖ್ಯ: ವಿದ್ವಾನ್ ರಘುನಾಥ್

ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವು ಮುಖ್ಯ: ವಿದ್ವಾನ್ ರಘುನಾಥ್

ಗುಂಡ್ಲುಪೇಟೆ : ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವು ಮುಖ್ಯ ಎಂದು ಅಂತರರಾಷ್ಟ್ರೀಯ ಪ್ರಖ್ಯಾತ ತಬಲ ವಾದಕ ವಿದ್ವಾನ್ ರಘುನಾಥ್ ತಿಳಿಸಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ಕ್ರೀಡೆ ರಾಸೇಯೋ, ರೋವರ್ಸ್ ಮತ್ತು ರೇಂಜರ್ಸ್, ರೆಡ್ ಕ್ರಾಸ್ ಹಾಗೂ ವಿವಿಧ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.ಪರಿಶ್ರಮದಿಂದ ಜೀವನ ಸಾರ್ಥಕ ಪಡಿಸಿಕೊಳ್ಳುವುದು ನಿಮ್ಮ ಕರ್ತವ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಮದನಕುಮಾರ್ ಎ.ಆರ್. ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣ ಎಷ್ಟು ಮುಖ್ಯವೋ ಹಾಗೆ ಸಂಸ್ಕ್ರತಿಯು ಅಷ್ಟೇ ಮುಖ್ಯ, ಕಲೆ ನಮ್ಮ ದೇಶದ ಸಂಪತ್ತು. ವಿದ್ಯಾರ್ಥಿಗಳು ಆತ್ಮ ವಿಶ್ವಾಸದಿಂದ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ತಮ್ಮ ಪ್ರತಿಭೆಯನ್ನು ಹೊರ ಹಾಕಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಚಾಲಕ ವಿಜಯ್ ಕುಮಾರ್, ಕಛೇರಿ ಅಧೀಕ್ಷಕ ಪುಟ್ಟಬುದ್ಧಿ ಎನ್, ಕ್ರೀಡಾ ಸಂಚಾಲಕ ಪುಟ್ಟರಾಜು ಎಸ್.ಜೆ, ರಾ.ಸೇ.ಯೋ ಸಂಚಾಲಕ ಕೃಷ್ಣಮೂರ್ತಿ, ರೋವರ್ಸ್, ಸಂಚಾಲಕ ಡಾ. ತುಳಸಿರಾಮ್ ಎಸ್, ರೇಂಜರ್ಸ್ ಘಟಕದ ಸಂಚಾಲಕ ದಿವ್ಯಾಭಾರತಿ ಜೆ, ರೆಡ್ಕ್ರಾಸ್ ಘಟಕದ ಸಂಚಾಲಕ ಸಂಯುಕ್ತ ಸಿಂಗ್.ಟಿ, ಗ್ರಂಥಪಾಲಕ ಶ್ರೀನಿವಾಸನಾಯಕ, ಡಾ. ರಶ್ಮಿ ಜೆ ಆರ್, ಲಕ್ಷ್ಮೀ ಎಸ್ ಎಸ್ ಹಾಗೂ ಎಲ್ಲಾ ಅಧ್ಯಾಪಕರು, ಅಧ್ಯಾಪಕೇತರ ವರ್ಗದವರು ಇದ್ದರು.

RELATED ARTICLES
- Advertisment -
Google search engine

Most Popular