ಕನ್ನಡ ಭಾಷೆ ಹಾಗೂ ಕನ್ನಡಿಗರ ಬಗ್ಗೆ ಹೊಗಳಿದ ಯಶ್ ಅವರು ಜನರ ಬಗ್ಗೆ ಹಾಗೂ ವಾತಾವರಣ ಬಗ್ಗೆ ಹೇಳುತ್ತಾ ನಾವೆಲ್ಲ ಕನ್ನಡವನ್ನು ಎಲ್ಲರಿಗೂ ಕಲಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ಆದಾಯ ತೆರಿಗೆ ಇಲಾಖೆಯ ವತಿಯಿಂದ ಆಯೋಜಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಕುರಿತು ಮಾತನಾಡಿದ್ದಾರೆ.
ಟಾಕ್ಸಿಕ್ ಚಿತ್ರದ ಚಿತ್ರೀಕರಣ, ಫ್ಯಾಮಿಲಿ ಟೈಂ ಎಂದು ಇತ್ತೀಚೆಗೆ ಯಾವ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಇವರು, ಈ ನಡುವೆ ಆದಾಯ ತೆರಿಗೆ ಇಲಾಖೆಯ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪತ್ನಿ ರಾಧಿಕಾ ಪಂಡಿತ್ ಜೊತೆ ಭಾಗಿಯಾಗಿದ್ದಾರೆ.ಈ ವೇಳೆಯಲ್ಲಿ ಕನ್ನಡ ಭಾಷೆ ಮಹತ್ವದ ಕುರಿತು ಮಾತನಾಡಿ, ಕರ್ನಾಟಕದಲ್ಲಿ ಇರುವ ಎಲ್ಲರಿಗೂ ಕನ್ನಡ ಕಲಿಸೋಣ, ಹಾಗೆಂದು ಬಲವಂತವಾಗಿ ನಾವು ಯಾರಿಗೂ ಕನ್ನಡ ಕಲಿಸೋದು ಬೇಡ ಎಂದು ತಿಳಿಸಿದರು.
ಹೆಚ್ಚು ಟ್ಯಾಕ್ಸ್ ಕಟ್ಟುವ ವಿಚಾರದಲ್ಲಿ ನಮ್ಮ ರಾಜ್ಯ 2ನೇ ಸ್ಥಾನದಲ್ಲಿದೆ ಎಂದು ಕೇಳಿ ಖುಷಿಯಾಯಿತು. ಆದಷ್ಟು ಬೇಗ ಮೊದಲ ಸ್ಥಾನಕ್ಕೆ ಏರುವುದು ನಮ್ಮ ಗುರಿಯಾಗಬೇಕು ಎಂದು ತಿಳಿಸಿದ್ದಾರೆ. ಭಾಷೆಯ ವಿಚಾರಕ್ಕೆ ಬಂದರೆ ಕನ್ನಡ ಬರದವರಿಗೆ ಕೂಡ ಇಲ್ಲಿ ಸ್ಪರ್ಧೆ ಇಟ್ಟು ಕನ್ನಡ ಕಲಿಸುವ ಪ್ರಯತ್ನ ಮಾಡಿದ್ದಾರೆ. ಇಲ್ಲಿ ಬಹಳ ಜನಕ್ಕೆ ಕನ್ನಡ ಗೊತ್ತಿಲ್ಲ ಅನಿಸುತ್ತೆ. ನನ್ನ ಪ್ರಕಾರ ನಾವು ಎಲ್ಲಿಗೆ ಹೋದರು ಅಲ್ಲಿನ ಭಾಷೆ, ಸಂಸ್ಕೃತಿಗೆ ಗೌರವ ಕೊಟ್ಟರೆ ಅದರ ಹತ್ತು ಪಟ್ಟು ತಿರುಗಿ ಬರುತ್ತದೆ ಎಂದು ಅಭಿಪ್ರಾಯ ಪಟ್ಟರು. ಅದೇ ಕರ್ನಾಟಕ, ಕನ್ನಡ ನನಗೆ ಕಲಿಸಿದೆ. ನೀವೆಲ್ಲಾ ಕನ್ನಡ ಕಲಿಯಲು ಯತ್ನಿಸಿದ್ದು ಖುಷಿಯಾಯಿತು ಎಂದರು.
ಕರ್ನಾಟಕಕ್ಕೆ ಬೇರೆ ಕಡೆಗಳಿಂದ ಬಂದವರು ಇಲ್ಲಿನ ಜನರ ಬಗ್ಗೆ ಒಳ್ಳೆ ಮಾತುಗಳನಾಡುತ್ತಾರೆ. ಅದು ನಮ್ಮ ಸಂಸ್ಕೃತಿ. ನಾವೆಲ್ಲರೂ ಬೇರೆಯವರಿಗೆ ಕನ್ನಡ ಕಲಿಸೋಣ ಎಂದು ಹಾಗೂ ಬೇರೆಯವರು ಕನ್ನಡ ಕಲಿಯಬೇಕು ಎಂದು ಗಲಾಟೆ ಮಾಡುವ ಬದಲು ಕನ್ನಡ ಗೊತ್ತಿಲ್ಲದಿದ್ದರೆ ಇಲ್ಲಿ ಕಷ್ಟ ಎನ್ನುವ ಭಾವನೆ ಬರುವಂತೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ನನ್ನ ಪ್ರಕಾರ ಯಾವುದೇ ಭಾಷೆಯು ಹೊಟ್ಟೆ ತುಂಬಿಸುತ್ತದೆ. ಎಲ್ಲಾ ಕಡೆ ಕನ್ನಡಕ್ಕೆ ಪ್ರಾಮುಖ್ಯತೆ ಬರುವಂತೆ ಮಾಡಬೇಕು ಅಂದ್ರೆ ನಾವು ಕನ್ನಡಿಗರಾಗಿ ಅಭಿವೃದ್ಧಿಯಾಗುವಂತೆ ಮಾಡಬೇಕು ಕನ್ನಡದ ಹಿರಿಮೆಯನ್ನು ಎಲ್ಲರಿಗೂ ಕಲಿಸಿಬೇಕು ಎಂದಿದ್ದಾರೆ. ಕಾರ್ಯಕ್ರಮದಲ್ಲಿ ಅನ್ಯಭಾಷಿಕರು ಹೆಚ್ಚು ಇದ್ದ ಕಾರಣ ಕನ್ನಡ ಹಾಗೂ ಇಂಗ್ಲೀಷ್ ಸೇರಿಸಿ ನಟ ಯಶ್ ಮಾತನಾಡಿದ್ದಾರೆ.



