ಮಂಡ್ಯ: ಮಂಡ್ಯ ಜಿಲ್ಲೆ ತನ್ನ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ವಿಶ್ವವಿಖ್ಯಾತ ಪ್ರವಾಸಿ ತಾಣಗಳಿಂದ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಗ್ರ ಸ್ಥಾನ ಪಡೆದಿದೆ. ಪ್ರವಾಸೋದ್ಯಮ ಇಲಾಖೆಯ ಸೂಚನೆಯ ಮೇರೆಗೆ ರಾಜ್ಯದ 1,275 ಪ್ರವಾಸಿ ತಾಣಗಳ ಪೈಕಿ ಮಂಡ್ಯದಲ್ಲೇ 106 ಸ್ಥಳಗಳನ್ನು ಗುರುತಿಸಲಾಗಿದೆ. ಇದು ಪ್ರವಾಸೋದ್ಯಮ ನಕ್ಷೆಯಲ್ಲಿ ಮಂಡ್ಯಕ್ಕೆ ಮತ್ತೊಂದು ಹೆಗ್ಗಳಿಕೆಯನ್ನು ಸೇರಿಸಿದೆ. ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಅತ್ಯಲ್ಪ ಪ್ರವಾಸಿ ತಾಣಗಳನ್ನು ಗುರುತಿಸಲ್ಪಟ್ಟಿರುವುದು ವಿರೋಧಾಭಾಸದ ಚಿತ್ರವನ್ನು ಮೂಡಿಸಿದೆ.
ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಪ್ರಸಿದ್ಧ ತಾಣಗಳಿದ್ದರೂ, ಸ್ಥಳೀಯರನ್ನು ಹೊರತುಪಡಿಸಿ ಹೊರ ರಾಜ್ಯ ಮತ್ತು ವಿದೇಶಿ ಪ್ರವಾಸಿಗರಿಗೆ ಅವುಗಳ ಬಗ್ಗೆ ಪರಿಚಯ ಕಡಿಮೆ. ಈ ಹಿನ್ನೆಲೆ, ಪ್ರವಾಸೋದ್ಯಮ ಇಲಾಖೆಯ ಸೂಚನೆಯಂತೆ ಪ್ರತಿಯೊಂದು ಸ್ಥಳದ ಐತಿಹಾಸಿಕ ಮಹತ್ವ, ಧಾರ್ಮಿಕ ಪ್ರಾಮುಖ್ಯತೆ, ಭೇಟಿಯ ಅಂಕಿ-ಅಂಶಗಳು ಹಾಗೂ ಛಾಯಾಚಿತ್ರಗಳೊಂದಿಗೆ ಸಂಪೂರ್ಣ ವಿವರಗಳನ್ನು ಸಲ್ಲಿಸಲು ಸೂಚಿಸಲಾಗಿದೆ. ಇದರ ಮೂಲಕ ಪ್ರವಾಸಿ ತಾಣಗಳಿಗೆ ಹೆಚ್ಚಿನ ಗಮನ ಸೆಳೆದು ಅವುಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದೇ ಮುಖ್ಯ ಉದ್ದೇಶ.
ಮಂಡ್ಯ ಹೊರತುಪಡಿಸಿ ಬೆಳಗಾವಿ ಜಿಲ್ಲೆಯಲ್ಲಿ 100, ಚಿಕ್ಕಬಳ್ಳಾಪುರದಲ್ಲಿ 95 ಮತ್ತು ಉತ್ತರ ಕನ್ನಡದಲ್ಲಿ 85 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ. ಸಾಂಸ್ಕೃತಿಕ ನಗರ ಮೈಸೂರು ಕೇವಲ 13 ತಾಣಗಳ ಪಟ್ಟಿಯನ್ನು ಸಲ್ಲಿಸಿರುವುದು ಗಮನಾರ್ಹ. ಬೆಂಗಳೂರು-ಮೈಸೂರು ಹೆದ್ದಾರಿ ನಡುವೆ ಇರುವ ಮಂಡ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುವ ಅನೇಕ ಅದ್ಭುತ ತಾಣಗಳನ್ನು ಹೊಂದಿದೆ.
ವಿಶ್ವವಿಖ್ಯಾತ ಕೆ.ಆರ್.ಎಸ್. ಬೃಂದಾವನ, ಮೇಲುಕೋಟೆಯ ಚಲುವನಾರಾಯಣಸ್ವಾಮಿ ದೇವಾಲಯ, ಕರಿಘಟ್ಟ, ದಕ್ಷಿಣ ಪಕ್ಷಿಕಾಶಿ ಎಂದು ಕರೆಯಲ್ಪಡುವ ರಂಗನತಿಟ್ಟು ಪಕ್ಷಿಧಾಮ, ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ, ಹೊಸಹೊಳಲಿನ ಹೊಯ್ಸಳೇಶ್ವರ ದೇವಾಲಯ, ಏಷ್ಯಾದ ಮೊದಲ ಜಲವಿದ್ಯುತ್ ಸ್ಥಾವರ ಶಿವನಸಮುದ್ರ, ವೇಣುಗೋಪಾಲಸ್ವಾಮಿ ದೇವಾಲಯ, ಆದಿಚುಂಚನಗಿರಿ ಕ್ಷೇತ್ರ, ನಾಗಮಂಗಲದ ಸೌಮ್ಯಕೇಶವ ದೇವಾಲಯ, ಹೇಮಗಿರಿ ಫಾಲ್ಸ್ ಮತ್ತು ಕಲ್ಲಹಳ್ಳಿಯ ಭೂವರಾಹಸ್ವಾಮಿ ದೇವಾಲಯ ಮುಖ್ಯ ಆಕರ್ಷಣೆಗಳಾಗಿವೆ.
ತಾಲೂಕುವಾರು ನೋಡಿದರೆ ಶ್ರೀರಂಗಪಟ್ಟಣ 24 ತಾಣಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಮದ್ದೂರು ಹಾಗೂ ಕೆ.ಆರ್.ಪೇಟೆ ತಲಾ 18, ಪಾಂಡವಪುರ 13, ಮಂಡ್ಯ 12, ಮಳವಳ್ಳಿ 11 ಹಾಗೂ ನಾಗಮಂಗಲ 10 ತಾಣಗಳನ್ನು ಹೊಂದಿದೆ. ಈ ಮೂಲಕ ಮಂಡ್ಯ ಜಿಲ್ಲೆ ನಿಜಕ್ಕೂ ಪ್ರವಾಸಿಗರ ಪರಮ ಗಮ್ಯಸ್ಥಳವೆಂದು ತೋರಿಸಿದೆ.
ಮಂಡ್ಯ : ಮಂಡ್ಯ ಜಿಲ್ಲೆ ತನ್ನ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ವಿಶ್ವವಿಖ್ಯಾತ ಪ್ರವಾಸಿ ತಾಣಗಳಿಂದ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಗ್ರ ಸ್ಥಾನ ಪಡೆದಿದೆ. ಪ್ರವಾಸೋದ್ಯಮ ಇಲಾಖೆಯ ಸೂಚನೆಯ ಮೇರೆಗೆ ರಾಜ್ಯದ 1,275 ಪ್ರವಾಸಿ ತಾಣಗಳ ಪೈಕಿ ಮಂಡ್ಯದಲ್ಲೇ 106 ಸ್ಥಳಗಳನ್ನು ಗುರುತಿಸಲಾಗಿದೆ. ಇದು ಪ್ರವಾಸೋದ್ಯಮ ನಕ್ಷೆಯಲ್ಲಿ ಮಂಡ್ಯಕ್ಕೆ ಮತ್ತೊಂದು ಹೆಗ್ಗಳಿಕೆಯನ್ನು ಸೇರಿಸಿದೆ. ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಅತ್ಯಲ್ಪ ಪ್ರವಾಸಿ ತಾಣಗಳನ್ನು ಗುರುತಿಸಲ್ಪಟ್ಟಿರುವುದು ವಿರೋಧಾಭಾಸದ ಚಿತ್ರವನ್ನು ಮೂಡಿಸಿದೆ.