ಚೆನ್ನೈ : ತಿರುಪತಿಯಲ್ಲಿ ಭಾರೀ ಚರ್ಚೆಗೀಡಾದ ಲಡ್ಡು ಪ್ರಸಾದ ತುಪ್ಪ ಕಲಬೆರಕೆ ಹಿನ್ನಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೇಮಿಸಿದ ವಿಶೇಷ ತನಿಖಾ ತಂಡವು ತಿರುಮಲ ತಿರುಪತಿ ದೇವಸ್ಥಾನಂ ಅಧಿಕಾರಿಯನ್ನು ಬಂಧಿಸಿದೆ.
ಟಿಟಿಡಿ ಲಡ್ಡು-ತುಪ್ಪ ಕಲಬೆರಕೆ ವಿಚಾರವಾಗಿ ಸಿಬಿಐ ನೇತೃತ್ವದ ಎಸ್‌ಐಟಿ ಟಿಟಿಡಿ ಎಂಜಿನಿಯರಿಂಗ್ ಇಲಾಖೆಯ ಹಿರಿಯ ಅಧಿಕಾರಿ ಆರ್.ಎಸ್‌ಎಸ್ವಿಆರ್ ಸುಬ್ರಹ್ಮಣ್ಯಂ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಸುಬ್ರಹ್ಮಣ್ಯಂ ಈ ಹಿಂದೆ ಟಿಟಿಡಿಯಲ್ಲಿ ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದು, ಲಡ್ಡು ತಯಾರಿಸಲು ಬಳಸುವ ತುಪ್ಪ ಸೇರಿದಂತೆ ಪ್ರಮುಖ ವಸ್ತುಗಳನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಹೊಂದಿದ್ದರು ಎಂದು ಎಸ್‌ಐಟಿ ಸದಸ್ಯ ತ್ರಿಪಾಠಿ ತಿಳಿಸಿದರು.
ಈ ವೇಳೆ ಎಸ್‌ಐಟಿ ಆತನನ್ನು ಎಸಿಬಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನನ್ನು ೧೫ ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದೆ. ಈ ಪ್ರಕರಣದಲ್ಲಿ ಈತ ೨೯ನೇ ಆರೋಪಿಯಾಗಿದ್ದು, ಅವರ ಬಂಧನದೊಂದಿಗೆ ಈವರೆಗೆ ಒಂಬತ್ತು ಜನರನ್ನು ಬಂಧಿಸಲಾಗಿದೆ ಹಾಗೂ ಕೆಲವು ಆರೋಪಿಗಳ ಹೇಳಿಕೆಗಳ ಆಧಾರದ ಮೇಲೆ ಎಸ್ ಐಟಿ ಅವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.



