Tuesday, December 2, 2025
Google search engine

Homeರಾಜ್ಯಸುದ್ದಿಜಾಲಮಧುವಣಗಿತ್ತಿಯಂತೆ ಸಿಂಗಾರಗೊಂಡ ಅಂಜನಾದ್ರಿ ಬೆಟ್ಟ

ಮಧುವಣಗಿತ್ತಿಯಂತೆ ಸಿಂಗಾರಗೊಂಡ ಅಂಜನಾದ್ರಿ ಬೆಟ್ಟ

ಕೊಪ್ಪಳ : ಹನುಮ ಹುಟ್ಟಿದ ನಾಡಲ್ಲಿ ಹನುಮಮಾಲೆ ವಿಸರ್ಜನೆ ನಡೆಯಲಿದ್ದು, ಅಂಜನಾದ್ರಿ ಬೆಟ್ಟ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ನಾಳೆ (ಡಿ.3) ಹನುಮ ಮಾಲೆ ವಿಸರ್ಜನೆ ಕಾರ್ಯಕ್ರಮವಿದ್ದು, ಜಿಲ್ಲಾಡಳಿತವು ಈಗಾಗಲೇ ಹನುಮ ಮಾಲೆ ವಿಸರ್ಜನೆಗೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ.

ಇಂದಿನಿಂದಲೇ ಅಂಜನಾದ್ರಿಗೆ ಹನುಮ ಭಕ್ತರು ಹರಿದು ಬರುತ್ತಿದ್ದು, ಸುಮಾರು ಒಂದು ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆಯಿದೆ ಎನ್ನಲಾಗಿದೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಅಥ್ಲೆಟಿಕ್ ಅಸೋಶಿಯೇಷನ್ ಕೂಡ ಬರುವ ಭಕ್ತರಿಗಾಗಿ ವಸತಿ, ಶೌಚಾಲಯ, ಊಟ ಎಲ್ಲವನ್ನು ಸಿದ್ಧತೆ ಮಾಡಿಕೊಂಡಿದೆ. ಅಂಜನಾದ್ರಿ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಬರೋ ಭಕ್ತರಿಗೆ ಸುಮಾರು ಎಂಟು ಕಡೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಹನುಮ ಹುಟ್ಟಿರೋದಕ್ಕೆ ಕೆಲ ಕುರುಹಗಳು ಲಭ್ಯವಾಗಿವೆ. ಹನುಮ ಮಾಲೆ ಮೊದಲು ಆರಂಭವಾಗಿದ್ದು ಕೆಲ ಭಕ್ತರಿಂದ. ಇದೀಗ ಅದು ಲಕ್ಷಾಂತರ ಭಕ್ತರನ್ನು ತಲುಪಿದೆ. ಕೇವಲ 13 ಜನರಿಂದ ಆರಂಭವಾದ ಹುನಮಮಾಲೆ ವ್ರತವನ್ನ ಇಂದು ಲಕ್ಷ-ಲಕ್ಷ ಮಂದಿ ಆಚರಣೆ ಮಾಡುತ್ತಿದ್ದಾರೆ. ಕಟ್ಟುನಿಟ್ಟಿನ ವ್ರತ ಮಾಡೋದರ ಮೂಲಕ ಹನುಮ ಮಾಲಾಧಾರಿಗಳು ಅಂಜನಾದ್ರಿಗೆ ಬಂದು ಮಾಲೆಯನ್ನು ವಿಸರ್ಜನೆ ಮಾಡುತ್ತಾರೆ. ಕೆಲವರು 45 ದಿನ, ಕೆಲವರು ಒಂದು ತಿಂಗಳು, ಕೆಲವರು 15 ದಿನ, 9 ದಿನ, ಮೂರು ದಿನ ಮಾಲೆ ಧರಿಸೋ ಪ್ರತೀತಿ ಇದೆ. ನಾಳೆ ಸಾಗರೋಪಾದಿಯಲ್ಲಿ ಹನುಮ ಮಾಲಾಧಾರಿಗಳು ಬರೋ ಹಿನ್ನೆಲೆ ಈಗಾಗಲೇ ಪೊಲೀಸರು ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದು, ಕೊಪ್ಪಳದಿಂದ ಅಂಜನಾದ್ರಿಬೆಟ್ಟದವರೆಗೂ ಸುಮಾರು 2 ಸಾವಿರ ಪೊಲೀಸರ ನಿಯೋಜನೆ ಮಾಡಲು ತಯಾರಿ ನಡೆಸಿದ್ದಾರೆ ಎಂದಿದ್ದಾರೆ.

ಅದಲ್ಲದೇ ಕಳೆದ 39 ದಿನಗಳಿಂದ ಕೊಪ್ಪಳದಲ್ಲಿ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಕೊಪ್ಪಳ ನಗರಸಭೆ ಮುಂಭಾಗದಲ್ಲಿ ಕಾರ್ಖಾನೆಗಳನ್ನ ವಿರೋಧಿಸಿ ಹೋರಾಟ ನಡೆಸುತ್ತಿರೂ ಕೂಡ ಅಥ್ಲೆಟಿಕ್ ಅಸೋಶಿಯೇಷನ್, ಅಥ್ಲೆಟಿಕ್ ಅಸೋಶಿಯೇಷನ್ ಕಿರ್ಲೋಸ್ಕರ್, ಮುಕುಂದ ಸುಮಿ, ಹೊಸಪೇಟೆ ಸ್ಟಿಲ್‌ಗಳ ಸಹಯೋಗ ಪಡೆದುಕೊಂಡಿರುವುದು ಇದೀಗ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಇಷ್ಟಿದ್ದರೂ ಸಂಸದರು ಧಾರ್ಮಿಕ ಕಾರ್ಯಕ್ರಮಕ್ಕೆ ಕಾರ್ಖಾನೆಗಳ ಸಿಎಸ್‌ಆರ್ ಅನುದಾನ ಬಳಸಿಕೊಳ್ಳುತ್ತಿರುವುದು ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಕಾರ್ಖಾನೆಗಳ ಸಿಎಸ್‌ಆರ್ ಅನುದಾನ ಇರೋದೆ ಸಾಮಾಜಿಕ ಕಾರ್ಯಕ್ರಮಕ್ಕೆ ಅನ್ನೋ ಮೂಲಕ ಕಾರ್ಖಾನೆಗಳ ಪರ ಸಂಸದರು ಬ್ಯಾಟ್ ಬೀಸಿದ್ದಾರೆ. ಹನುಮ ಮಾಲೆ ವಿಸರ್ಜನೆ ಕಾರ್ಯಕ್ರಮ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಸಂಸದ ರಾಜಶೇಖರ ಹಿಟ್ನಾಳ್ ನಡೆ ಇದೀಗ ಪ್ರಶ್ನೆ ಮಾಡುವಂತಾಗಿದೆ. ಭಕ್ತರ ಅನುಕೂಲಕ್ಕೆ ಜಿಲ್ಲಾ ಅಥ್ಲೆಟಿಕ್ ಅಸೋಶಿಯೇಷನ್ ಮಾಡುತ್ತಿರುವುದು ಒಳ್ಳೆಯದ್ದೆ, ಆದರೆ ಅದಕ್ಕೆ ಕಾರ್ಖಾನೆಗಳ ಹಣ ಯಾಕೆ ಅನ್ನೋದು ಜನರ ಪ್ರಶ್ನೆಯಾಗಿದೆ.

RELATED ARTICLES
- Advertisment -
Google search engine

Most Popular