ಮೈಸೂರು: ಜಿಲ್ಲಾ ವ್ಯಾಪ್ತಿಯಲ್ಲಿ ಕಾಡಿನಿಂದ ನಾಡಿಗೆ ಬಂದಿದ್ದ 22 ಹುಲಿಗಳನ್ನು 42 ದಿನಗಳಲ್ಲಿ ಸೆರೆ ಹಿಡಿಯಲಾಗಿದೆ.
ಈ 22 ಹುಲಿಗಳಲ್ಲಿ 12 ಮರಿ ಹುಲಿ, 7 ಗಂಡು ಹುಲಿ, ಮೂರು ಹೆಣ್ಣು ಹುಲಿಗಳು ಸೆರಯಾಗಿವೆ. ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ, ಸರಗೂರು, ನಂಜನಗೂಡು ಮತ್ತು ಹುಣಸೂರು ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಈ ಹುಲಿಗಳು ಉಪಟಳ ನೀಡುತ್ತಿದ್ದವು.
“ರಾಜ್ಯ ಧರ್ಮ ಟಿವಿ” ಜೊತೆ ಮೈಸೂರು ವಿಭಾಗದ ಡಿಸಿಎಫ್ ಪರಮೇಶ್ ಮಾತನಾಡಿ, ರೈತರು ಆತಂಕ ಪಡುವ ಅಗತ್ಯವಿಲ್ಲ. ರೈತರ ಜೊತೆ ನಾವು ಕೈಜೋಡಿಸಿ ಕೆಲಸ ಮಾಡುತ್ತೇವೆ. ಹುಲಿಕಟ್ಟೆ, ಹುಲಿಯೂರು, ಹುಲಿದುರ್ಗ ಹೆಸರುಗಳಿವೆ. ಹುಲಿಗಳು ಹಿಂದೆ ಇಲ್ಲಿ ಕಾಣಿಸಿದ್ದಕ್ಕೆ ಈ ಹೆಸರುಗಳು ಬಂದಿವೆ. ಹಿಂದೆಯೂ ಹುಲಿಗಳು ಬರುತ್ತಿದ್ದವು, ಈಗಲೂ ಬರುತ್ತಿವೆ. ಹುಲಿಗಳು ಕಂಡು ಬಂದರೆ ಸಹಾಯವಾಣಿಗೆ ಕರೆ ಮಾಡುವಂತೆ ಮನವಿ ಮಾಡಿದರು.
ಹುಲಿಯನ್ನು ಹಿಡಿಯಲು ಇಲಾಖೆಯಲ್ಲಿ ಎಲ್ಲಾ ರೀತಿಯ ಸಲಕರಣೆಗಳಿವೆ. ಮುಖ್ಯವಾಗಿ ಡ್ರೋನ್, ಜನ ಮತ್ತು ಪೊಲೀಸರ ಸಹಕಾರ ಇದ್ದರೆ ಮಾತ್ರ ಕಾರ್ಯಾಚರಣೆ ಯಶಸ್ವಿಯಾಗುತ್ತದೆ. ಹಿಡಿದಿರುವ ಹುಲಿಗಳನ್ನು ಪುನರ್ವಸತಿ ಕೇಂದ್ರದಲ್ಲಿ ಬಿಡಲಾಗಿದೆ. ಈ ವೈದ್ಯರ ಸಲಹೆಯನ್ನು ಆಧಾರಿಸಿ ಹುಲಿಗಳನ್ನು ಕಾಡಿಗೆ ಮರಳಿ ಬಿಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.



