ಢಾಕಾ: ಭಾರತವು ಚೂರು ಚೂರಾಗಿ ಒಡೆದು ಹೋಗದ ಹೊರೆತು ಬಾಂಗ್ಲಾದಲ್ಲಿ ಎಂದಿಗೂ ಶಾಂತಿ ನೆಲೆಸುವುದಿಲ್ಲ ಎಂದು ಬಾಂಗ್ಲಾದೇಶದ ನಿವೃತ್ತ ಬ್ರಿಗೇಡಿಯರ್ ಜನರಲ್ ಅಬ್ದುಲ್ಲಾಹಿಲ್ ಅಮಾನ್ ಅಜ್ಮಿ ಕೊಟ್ಟಿರುವ ಹೇಳಿಕೆ ವಿಶ್ವದಲ್ಲೇ ತಲ್ಲಣ ಸೃಷ್ಟಿಸಿದೆ.
ಢಾಕಾದ ನ್ಯಾಷನಲ್ ಪ್ರೆಸ್ ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದೆಹಲಿ ಯಾವಾಗಲೂ ಬಾಂಗ್ಲಾದೇಶದ ಒಳಗೆ ಅಶಾಂತಿಯನ್ನು ಮೂಡಿಸುವ ಮತ್ತು ಅದನ್ನು ಜೀವಂತವಾಗಿರಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಚಿತ್ತಗಾಂಗ್ ಬಗ್ಗೆ ಸುಳ್ಳು ಸುಳ್ಳು ಆರೋಪ :
1975 ರಿಂದ 1996 ರವರೆಗೆ ಚಿತ್ತಗಾಂಗ್ ಗುಡ್ಡಗಾಡು ಪ್ರದೇಶದಲ್ಲಿ ಅಶಾಂತಿಯನ್ನು ನೆಲೆಸಲು ಭಾರತವೇ ಕಾರಣ. ಶೇಖ್ ಮುಜಿಬುರ್ ರಹಮಾನ್ ಸರ್ಕಾರದ ಅವಧಿಯಲ್ಲಿ ಪರ್ವತ್ಯ ಚಟ್ಟೋಗ್ರಾಮ್ ಜನ ಸಂಹತಿ ಸಮಿತಿ ರಚನೆಯಾಯಿತು. ಅದರ ಶಸ್ತ್ರಸಜ್ಜಿತ ವಿಭಾಗವೇ ಶಾಂತಿ ವಾಹಿನಿ. ಭಾರತವು ಅವರಿಗೆ ಆಶ್ರಯ, ಶಸ್ತ್ರಾಸ್ತ್ರ ಮತ್ತು ತರಬೇತಿಯನ್ನು ನೀಡಿತ್ತು. ಆ ಮೂಲಕ ರಕ್ತಪಾತಕ್ಕೆ ಕಾರಣವಾಯಿತು ಎಂದು ದೂರಿದ್ದಾರೆ. 1997ರಲ್ಲಿ ಸಹಿ ಹಾಕಲಾದ ಚಿತ್ತಗಾಂಗ್ ಶಾಂತಿ ಒಪ್ಪಂದವನ್ನು ಸಹ ಅಜ್ಮಿ ಈ ಸಂದರ್ಭದಲ್ಲಿ ಟೀಕಿಸಿದ್ದಾರೆ.



