ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆ ಅಲ್ಲ, ವೇಣುಗೋಪಾಲ್ ಕಾಂಗ್ರೆಸ್ ಹೈಕಮಾಂಡ್ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸಿಎಂ ಮತ್ತು ವೇಣುಗೋಪಾಲ್ ಭೇಟಿ ಬಗ್ಗೆ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಇಷ್ಟು ದಿನ ರಾಜ್ಯದ ಗೊಂದಲಕ್ಕೆ ಎಐಸಿಸಿ ಅಧ್ಯಕ್ಷರು ಎಲ್ಲರನ್ನು ಕರೆದು ಮಾತುಕತೆ ಮಾಡಿ ನನ್ನಿಂದ ಏನು ಆಗಲ್ಲ ಅಂತ ದೆಹಲಿಗೆ ಹೋಗಿದ್ದರು. ನನ್ಮ ಕೈಯಲ್ಲಿ ಏನು ಇಲ್ಲ, ಹೈಕಮಾಂಡ್ ಗಮನಕ್ಕೆ ತರುತ್ತೇನೆ ಅಂತ ಹೇಳಿ ಹೋದ್ರು. ಯಾಕೆ ಮಲ್ಲಿಕಾರ್ಜುನ ಖರ್ಗೆ ಹೀಗೆ ಮಾತಾಡಿದ್ರು ಅಂತ ರಾಜ್ಯದ ಜನರಿಗೆ ಗೊಂದಲ ಆಗಿತ್ತು. ಈಗ ಆ ಗೊಂದಲ ಏನು ಅಂತ ಕ್ಲಿಯರ್ ಆಗಿದೆ. ಕಾಂಗ್ರೆಸ್ ಹೈಕಮಾಂಡ್ ಯಾರು ಅಂದರೆ ವೇಣುಗೋಪಾಲ್ ಅಂತ ಗೊತ್ತಾಯ್ತು. ಎಐಸಿಸಿ ಅಧ್ಯಕ್ಷರಿಗಿಂತ ವೇಣುಗೋಪಾಲ್ ದೊಡ್ಡವರು ಅಂತ ಗೊತ್ತಾಯ್ತು ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆಗೂ ವೇಣುಗೋಪಾಲ್ ಹೈಕಮಾಂಡ್ ಆಗಿದ್ದಾರೆ. ಇದು ಕಾಂಗ್ರೆಸ್ ಪರಿಸ್ಥಿತಿ ಎಲ್ಲಿಗೆ ಬಂದಿದೆ ಗೊತ್ತಾಯ್ತು. ಯಾವುದೋ ಒಬ್ಬ ವ್ಯಕ್ತಿ ಕೈಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದೆ ಎಂದು ಹರಿಹಾಯ್ದರು.
ಈ ದೇಶ ನಡೆಸೋ ಕಾಂಗ್ರೆಸ್ ಕೈಯಲ್ಲಿ ಇವತ್ತು ಬಂಡವಾಳ ಇಲ್ಲ. ಬಂಡವಾಳಕ್ಕೆ ಇರೋ ಒಂದೇ ಒಂದು ರಾಜ್ಯ ಕರ್ನಾಟಕ. ವೇಣುಗೋಪಾಲ್ ಅಲ್ಲಿ ಕುಳಿತು ಕಾಂಗ್ರೆಸ್‌ನಲ್ಲಿ ಇರೋ 2-3 ಗುಂಪುಗಳನ್ನ ಕರೆಯುತ್ತಿದ್ದಾರೆ. ಯಾವ ಗುಂಪು ಎಷ್ಟು ಬಾಳಿಕೆ ಬರುತ್ತೆ ಅಂತ ವೇಣುಗೋಪಾಲ್ ನೋಡುತ್ತಿದ್ದಾರೆ. ಕಾಂಗ್ರೆಸ್‌ಗೆ ಮೊದಲು ಎಟಿಎಂ ಲೀಡರ್ ಬೇರೆ ಇದ್ದರು. ಆ ಜನರಲ್ ಸೆಕ್ರೆಟರಿ ಬೇರೆ. ಹೈಕಮಾಂಡ್ ಜನರಲ್ ಸೆಕ್ರೆಟರಿ ವೇಣುಗೋಪಾಲ್. ಇವರು ಯರ‍್ಯಾರು ಎಷ್ಟಕ್ಕೆ ಬಾಳುತ್ತೀರಾ. ನೀವು ಎಷ್ಟಕ್ಕೆ ಬಾಳುತ್ತೀರಾ ಅಂತ ಇಬ್ಬರನ್ನು ತೂಕ ಮಾಡೋ ಸ್ಥಿತಿಗೆ ಬಂದಿದೆ. ರಾಜ್ಯದ ಹಿತ ಮರೆತು ಅಧಿಕಾರ ಉಳಿಯೋಕೆ, ಛೇರ್ ಉಳಿಸಿಕೊಳ್ಳಬೇಕು ಅಂತ ಸಿಎಂ-ಡಿಸಿಎಂ ಪೈಪೋಟಿಗೆ ಬಿದ್ದು ರಾಜ್ಯದ ಸ್ಥಿತಿ ಗಂಭೀರ ಮಾಡಿದ್ದಾರೆ ಎಂದು ಸಿಎಂ, ಡಿಸಿಎಂ, ಹೈಕಮಾಂಡ್ ವಿರುದ್ಧ ಕಿಡಿಕಾರಿದರು.



