ಬೆಂಗಳೂರು : ಸದ್ಯ ಪೊಲೀಸರ ಮೇಲೆಯೇ ಪದೇ ಪದೇ ಕಳ್ಳತನದ ಆರೋಪ ಕೇಳಿ ಬರುತ್ತಿದ್ದು, ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಮಾತು ಇದೀಗ ನಗರ ಪೊಲೀಸರಿಗೆ ಅನ್ವಯವಾಗುವಂತಿದೆ. ಇತ್ತೀಚಿಗೆ ಪೋಲಿಸರ ಸಾಲು ಸಾಲು ಸಸ್ಪೆಂಡ್ ಕೇಸ್ಗಳು ದಾಖಲಾಗ್ತಿದೆ ಎನ್ನಲಾಗುತ್ತಿದೆ. ಈ ನಡುವೆ ದರೋಡೆ ಮತ್ತು ಕಳ್ಳತನದ ಕೇಸ್ನಲ್ಲಿ ಪೊಲೀಸರೇ ಭಾಗಿಯಾಗುತ್ತಿದ್ದು, ಖಾಕಿ ತೊಟ್ಟವರ ಮೇಲಿನ ಭರವಸೆ ಕಳೆದು ಹೋಗುತ್ತಿದೆ. ಈ ಸಾಲಿನಲ್ಲಿ ಮತ್ತೊಂದು ಕೇಸ್ ಬೆಳಕಿಗೆ ಬಂದಿದ್ದು, ಕಮಿಷನರ್ ಕಚೇರಿಯಲ್ಲಿ ಕಳ್ಳತನ ಮಾಡಿದ ಕಾನ್ಸ್ಟೇಬಲ್ ಮನೆಯಲ್ಲಿ ಲಕ್ಷ, ಲಕ್ಷ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಇತ್ತ ಕಮಿಷನರ್ ಕಚೇರಿಯ ಕಾಂಪೌಂಡ್ ಒಳಗಡೆಯೇ ಕಳ್ಳತನ ನಡೆದಿದೆ. ಒಂದೇ ಪ್ರಕರಣದಲ್ಲಿ ಸೀಜ್ ಮಾಡಲಾದ ಹಣವನ್ನು ಕಾರಿನಲ್ಲೇ ಹೆಡ್ ಕಾನ್ಸಟೇಬಲ್ ಜಬೀವುಲ್ಲಾ ಕಳ್ಳತನ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಸಿಸಿಬಿ ಸೈಬರ್ ಕ್ರೈಂ ಠಾಣೆಯ ಕಾನ್ಸಟೇಬಲ್ ಜಬೀವುಲ್ಲಾ ವಿರುದ್ಧ ಹಣ ಕದ್ದ ಆರೋಪವಿದೆ. ಈ ಬಗ್ಗೆ “ಕಮಿಷನರ್ ಸಾಹೇಬರೇ ನಿಮ್ಮ ಕಚೇರಿಯಲ್ಲೇ, ನಿಮ್ಮ ಸಿಬ್ಬಂದಿಯೇ ಕಳ್ಳತನ ಮಾಡ್ತಿದ್ದಾರೆ” ಎಂದು ಜನರು ಪ್ರಶ್ನೆ ಮಾಡುವಂತಾಗಿದೆ.
11 ಲಕ್ಷ ಹಣದ ಬ್ಯಾಗ್ ಕದ್ದ ಕಾನ್ಸ್ಟೇಬಲ್ :
ಇತ್ತೀಚಿಗೆ ನಡೆದ ಪ್ರಕರಣವೊಂದರಲ್ಲಿ ಆರೋಪಿಯನ್ನ ಬಂಧಿಸಿ ಕಾರು ಸೀಜ್ ಮಾಡಲಾಗಿದ್ದು, ಆ ಕಾರನ್ನು ಕಮಿಷನರ್ ಕಚೇರಿಯ ಬೇಸ್ಮೆಂಟ್ ನಲ್ಲಿ ನಿಲ್ಲಿಸಲಾಗಿತ್ತು. ಆರೋಪಿಯೇ ಕಾರಿನಲ್ಲಿ 11 ಲಕ್ಷ ಹಣದ ಬ್ಯಾಗ್ ಇಟ್ಟಿದ್ದನಂತೆ ಈ ವಿಚಾರ ತಿಳಿದು ಆ ಬ್ಯಾಗ್ ನನ್ನು ಹೆಡ್ ಕಾನ್ಸಟೇಬಲ್ ಜಬೀವುಲ್ಲಾ ಕದ್ದು ತನ್ನ ಮನೆಗೆ ತೆಗೆದುಕೊಂಡು ಹೋಗಿದ್ದ ಎನ್ನಲಾಗಿದೆ.
ಬೇಲ್ ಪಡೆದ ಆರೋಪಿ ಹಣದ ಬ್ಯಾಗ್ ಕೇಳಿದ್ದಾನೆ :
ಈ ವೇಳೆ ಇನ್ಸ್‌ಪೆಕ್ಟರ್ ಉಮೇಶ್ ತಂಡ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು. ನಂತರ ಜಾಮೀನು ಪಡೆದು ಹೊರಬಂದ ಆರೋಪಿ ಹಣದ ಬ್ಯಾಗ್ ನಾಪತ್ತೆಯಾಗಿರುವುದನ್ನು ತಿಳಿಸಿದ್ದು, ಇತ್ತ ಹಣ ಕಳ್ಳತನ ಮಾಡಿದ ಜಬೀವುಲ್ಲಾ, ಏನು ಗೊತ್ತಿಲ್ಲ ಅನ್ನೋ ತರ ನಾಟಕವಾಡಿದ್ದಾನೆ. ಬಳಿಕ ಈ ಬಗ್ಗೆ ಸೈಬರ್ ಪೊಲೀಸರ ಬಳಿ ಪ್ರಶ್ನೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಆರೋಪಿಯ ಪ್ರಶ್ನೆಗೆ ಗಾಬರಿಗೊಂಡು ಪರಿಶೀಲನೆ ಮಾಡಿದ ಪೊಲೀಸರಿಗೆ ಕಾರಿನಲ್ಲಿದ್ದ ಹಣವನ್ನ ಹೆಡ್ ಕಾನ್ಸಟೇಬಲ್ ಜಬೀವುಲ್ಲಾ ಕಳ್ಳತನ ಮಾಡಿರುವುದು ತಿಳಿದು ಬಂದಿದ್ದು, ಹೆಡ್ ಕಾನ್ಸಟೇಬಲ್ ಜಬೀವುಲ್ಲಾ ಮನೆ ಸರ್ಚ್ ಮಾಡುವಾಗ, ಮನೆಯ ಬಾಗಿನಲ್ಲಿಯೇ ನಿಂತು ಹೈಡ್ರಾಮಾ ಮಾಡಿದ್ದಾನೆ.
ಪರಿಶೀಲನೆ ನಡೆಸಿದ ನಂತರ ಮನೆಯ ಬೆಡ್ ಕೆಳಗೆ ಲಕ್ಷ ಲಕ್ಷ ಹಣವನ್ನು ಜೋಡಿಸಿಟ್ಟಿರುವುದು ಬೆಳಕಿಗೆ ಬಂದಿದೆ. 11 ಲಕ್ಷದಲ್ಲಿ ಜಬೀವುಲ್ಲಾ ಎರಡು ಲಕ್ಷ ಹಣ ವಾಪಸ್ ಕೊಟ್ಟಿದ್ದಾನೆ. ಉಳಿದ ಹಣ ವಾಪಸ್ ನೀಡುವಂತೆ ತಾಕೀತು ಮಾಡಿಕೊಂಡಿರುವ ಪೊಲೀಸರು, ಜಬೀವುಲ್ಲಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತಯಾರಾಗಿದ್ದಾರೆ.
ಈ ಹಿನ್ನಲೆ, ಕರ್ತವ್ಯ ಲೋಪ ಎಸಗಿದ್ದ ನಾಲ್ವರು ಪೊಲೀಸರನ್ನು ಅಮಾನತು ಮಾಡಿ ಉತ್ತರ ವಿಭಾಗದ ಡಿಸಿಪಿ ನೇಮಗೌಡ ಆದೇಶ ಹೊರಡಿಸಿದ್ದಾರೆ. ಸಂಜಯನಗರ, ಸುಬ್ರಹ್ಮಣ್ಯ ನಗರ, ನಂದಿನಿ ಲೇಔಟ್ ಠಾಣೆ ಸಿಬ್ಬಂದಿಯನ್ನ ಅಮಾನತು ಮಾಡಲಾಗಿದೆ.
ಎಎಸ್‌ಐ ಶ್ರೀನಿವಾಸ್ ಮೂರ್ತಿ(ನಂದಿನಿ ಲೇಔಟ್ ಠಾಣೆ), ಎಎಸ್‌ಐ ಜಯರಾಮೇಗೌಡ, ಹೆಡ್ ಕಾನ್ಸಟೇಬಲ್ ಧರ್ಮ (ಸುಬ್ರಹ್ಮಣ್ಯ ನಗರ ಠಾಣೆ), ಕಾನ್ಸಟೇಬಲ್ ನಜೀರ್ (ಸಂಜಯನಗರ ಠಾಣೆ) ಅಮಾನತ್ತಾದ ಸಿಬ್ಬಂದಿ ದೂರು ನೀಡಲು ಬಂದ ವ್ಯಕ್ತಿಯ ದೂರು ಪಡೆಯದೆ ನಿರ್ಲಕ್ಷ್ಯ ತೋರಿದ್ದ ನಂದಿನಿ ಲೇಔಟ್ ಠಾಣೆ ಎಎಸ್ಐ ಶ್ರಿನಿವಾಸ ಮೂರ್ತಿ ಕೂಡ ಸಸ್ಪೆಂಡ್ ಆಗಿದ್ದಾರೆ.



