Friday, December 5, 2025
Google search engine

Homeರಾಜ್ಯಇಂಡಿಗೋ ರದ್ದು : ಮಧುಮಕ್ಕಳ ಕುರ್ಚಿಯಲ್ಲಿ ತಂದೆ-ತಾಯಿ!

ಇಂಡಿಗೋ ರದ್ದು : ಮಧುಮಕ್ಕಳ ಕುರ್ಚಿಯಲ್ಲಿ ತಂದೆ-ತಾಯಿ!

ಹುಬ್ಬಳ್ಳಿ : ನವ ವಧು-ವರನಿಗೆಂದು ಹುಬ್ಬಳ್ಳಿಯ ಗುಜರಾತ್ ಭವನದಲ್ಲಿ ಅದ್ಧೂರಿ ಆರತಕ್ಷತೆ ಹಮ್ಮಿಕೊಳ್ಳಲಾಗಿತ್ತು. ಆದರೆ ಇಂಡಿಗೋ ಹಾರಾಟ ರದ್ದಾದ ಹಿನ್ನಲೆ ಮಧು ಮಕ್ಕಳು ಕಾರ್ಯಕ್ರಮ ತಲುಪಲಿಲ್ಲ. ಬಳಿಕ ರಿಸೆಪ್ಷನ್‌ ಕುರ್ಚಿಗಳ ಮೇಲೆ ಹುಡುಗಿಯ ತಂದೆ-ತಾಯಿಯೇ ಕುಳಿತು ಬಂದ ಜನರಿಂದ ಶುಭಾಶಯ ಸ್ವೀಕರಿಸಿದ್ದಾರೆ.

ಹುಬ್ಬಳ್ಳಿಗೆ ಬರಲೇ ಇಲ್ಲ ಮಧುಮಕ್ಕಳು :
ಹುಬ್ಬಳ್ಳಿ-ಇಂಡಿಗೋ ವಿಮಾನಗಳಲ್ಲಿ ಪೈಲಟ್‌‌ಗಳ ಕೊರತೆಯಿಂದ ದೇಶದ್ಯಾಂತ ಹಲವು ವಿಮಾನಗಳು ರದ್ದಾಗಿದ್ದು, ಇಂಡಿಗೋ ವಿಮಾನಗಳ ಅವಾಂತರದಿಂದ ವಧು-ವರರೇ ಆರತಕ್ಷತಗೆ ಬಾರದಂತಾಗಿದೆ. ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ಗಳಾಗಿರುವ ಹುಬ್ಬಳ್ಳಿಯ ಮೇಧಾ ಕ್ಷೀರಸಾಗರ ಹಾಗೂ ಭುವನೇಶ್ವರದ ಸಂಗಮ ದಾಸ್‌, ನವೆಂಬರ್ 23 ರಂದು ಭುವನೇಶ್ವರದಲ್ಲಿ ಮದುವೆಯಾಗಿದ್ದರು. ಈ ಬೆನ್ನಲ್ಲೇ ವಧುವಿನ ತವರು ಜಿಲ್ಲೆ ಹುಬ್ಬಳ್ಳಿಯಲ್ಲಿ ಬುಧವಾರದಂದು ಆರತಕ್ಷತೆ ಆಯೋಜನೆ ಮಾಡಿದ್ದು, ಇದಕ್ಕಾಗಿ ಹುಬ್ಬಳ್ಳಿಯ ಗುಜರಾತ್‌ ಭವನದಲ್ಲಿ ಸಕಲ ಸಿದ್ಧತೆ ನಡೆಸಿದ್ದರು.

ವಿಮಾನ ರದ್ದಾಗಿ ಭುವನೇಶ್ವರದಲ್ಲೇ ಸಿಲುಕಿದ ಜೋಡಿ:
ಭುವನೇಶ್ವರದಿಂದ ಬೆಂಗಳೂರಿಗೆ, ಅಲ್ಲಿಂದ ಹುಬ್ಬಳ್ಳಿಗೆ ಡಿಸೆಂಬರ್​ 2ಕ್ಕೆ ವಿಮಾನ ಬುಕ್ ಮಾಡಿದ್ದ ವಧು-ವರರು ಹಾಗೂ ಕೆಲ ಸಂಬಂಧಿಕರಿಗೆ ಭುವನೇಶ್ವರದಿಂದ ಮುಂಬೈ, ಅಲ್ಲಿಂದ ಹುಬ್ಬಳ್ಳಿಗೆ ವಿಮಾನ ಟಿಕೆಟ್‌ ಬುಕ್‌ ಮಾಡಿದ್ದರು. ಆದರೆ ಡಿ.2ರ ಬೆಳಗ್ಗೆ 9 ರಿಂದ ಮರುದಿನ (ಡಿ.3) ಬೆಳಗಿನ ಜಾವ 4-5 ರವರೆಗೂ ವಿಮಾನ ವಿಳಂಬವಾಗಿದ್ದು, ಏಕಾಏಕಿ 3 ರಂದು ಬೆಳಗ್ಗೆ ವಿಮಾನ ರದ್ದಾಗಿದೆ.

ಹೀಗಾಗಿ ಇಂಡಿಗೋ ಏರ್‌ಲೈನ್ಸ್‌ ರದ್ದುಗೊಳಿಸಿದ ಪರಿಣಾಮ ಆರತಕ್ಷತೆ ಬರಲಾಗದೆ ವಧು-ವರರು ಪರದಾಡಿದ್ದು, ಮಧು ಮಕ್ಕಳು ಆನ್‌ಲೈನ್‌ ಮೂಲಕವೇ ಆರತಕ್ಷತೆ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ವಧುವಿನ ತಂದೆ ತಾಯಿಯೇ ಮಗಳು ಅಳಿಯನ ಬದಲು ರಿಸೆಪ್ಷನ್​ ಕುರ್ಚಿಯಲ್ಲಿ ಕುಳಿತಿದ್ದು, ಬಂದ ಅತಿಥಿಗಳನ್ನು ಬರಮಾಡಿಕೊಂಡು ಶುಭಾಶಯ ಸ್ವೀಕರಿಸಿದ್ದಾರೆ. ಅತ್ತ ವಧು-ವರ ಕೂಡ ಮಧುಮಕ್ಕಳಂತೆ ಸಿದ್ಧಗೊಂಡು ಭುವನೇಶ್ವರದಿಂದ ಆನ್​ಲೈನ್ ಮೂಲಕ ಆರತಕ್ಷತೆ ಮಾಡಿಸಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular