ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಭುಗಿಲೆದ್ದ ನಾಯಕತ್ವ ಬದಲಾವಣೆ ಬಿರುಗಾಳಿ, ಬ್ರೇಕ್ಫಾಸ್ಟ್ ಮೀಟಿಂಗ್ ಬಳಿಕ ಕೊಂಚ ತಣ್ಣಗಾಗಿತ್ತು. ಆದರೆ ಕುರ್ಚಿ ಚರ್ಚೆ ಇನ್ನೂ ನಿಂತಿಲ್ಲ. ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಸಚಿವರು ಹಾಗೂ ಶಾಸಕರು ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ.
ಇದೇ ವೇಳೆ ಮದುವೆಯೊಂದರಲ್ಲಿ ಡಿಸಿಎಂ ಡಿಕೆಶಿ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದು, ಇದೀಗ ಸಾಹುಕಾರ್ ಭೇಟಿ ಹಾಗೂ ಚರ್ಚೆ ಬಗ್ಗೆ ಡಿಸಿಎಂ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಬೆಂಗಳೂರಲ್ಲಿ ಮಾತಾಡಿದ ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಸತೀಶ್ ಜಾರಕಿಹೊಳಿ ಅವರನ್ನ ಮದುವೆಯಲ್ಲಿ ಭೇಟಿಯಾಗಿದ್ದು ನಿಜ ಕಣ್ರೀ, ನಾನು ಹಾಗೂ ಸತೀಶ್ ಇಬ್ಬರು ಸಹೋದ್ಯೋಗಿಗಳು, ಮಧ್ಯಾಹ್ನ ಕ್ಯಾಬಿನೆಟ್ನಲ್ಲಿ ಇರುತ್ತೇವೆ. ಸಂಜೆ ಊಟಕ್ಕೆ ಸೇರುತ್ತೇವೆ, ಬೆಳಿಗ್ಗೆ ತಿಂಡಿಗೆ ಸೇರುತ್ತೇವೆ ಇದಲ್ಲಾ ಇದ್ದೇ ಇರುತ್ತೆ ಎಂದು ತಿಳಿಸಿದ್ದಾರೆ.
ಇವಾಗ ನಾನು ಹಾಗೂ ಸಚಿವ ಎಂಬಿ ಪಾಟೀಲ್ ಜೊತೆ ಚರ್ಚೆ ಮಾಡಿದೆ. ರಾಜ್ಯಕ್ಕೆ ಯಾವೆಲ್ಲಾ ಇಂಡಸ್ಟ್ರಿ ಗಳನ್ನು ತರಬೇಕು. ಆಂಧ್ರ ಪ್ರದೇಶ ಯಾವ ರೀತಿ ನಮಗೆ ಪೈಪೋಟಿ ಕೊಡ್ತಿದೆ. ತಮಿಳುನಾಡು, ತೆಲಂಗಾಣಕ್ಕೆ ಯಾವ ರೀತಿ ನಾವು ಕಾಂಪೀಟ್ ಮಾಡಬೇಕೆಂದು ಚರ್ಚೆ ಮಾಡಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಖಂಡಿತ ನಾನು, ಸತೀಶ್ ಮೀಟ್ ಆಗಿದ್ದು ನಿಜ.
ನಿನ್ನೆ ರಾತ್ರಿ ಯಾವುದೋ ಒಂದು ಮದುವೆಯಲ್ಲಿ ಭೇಟಿ ಮಾಡಿದ್ದೆವು. ಅಲ್ಲೇ ನಾವಿಬ್ಬರು ಪಕ್ಷ ಹಾಗೂ ರಾಜ್ಯದ ವಿಚಾರಗಳ ಬಗ್ಗೆಯೂ ಮಾತಾಡಿದ್ದೇವೆ. ನೀವು ಯಾಕೆ ನಮ್ಮನ್ನು ವೈರಿಗಳ ತರ ಲೆಕ್ಕ ಹಾಕ್ತೀರಲ್ಲ? ರಾಜಕಾರಣದಲ್ಲಿ ಬಾಂಧವ್ಯ, ನೆಂಟಸ್ಥನ, ಸ್ನೇಹ ಎಲ್ಲಾ ಇದ್ದೆ ಇರುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಪವರ್ ಶೇರಿಂಗ್ ಚರ್ಚೆ ಸಮಯದಲ್ಲೇ ಡಿಕೆಶಿ ಅವರು ಸತೀಶ್ ಜೊತೆ ನೆಂಟಸ್ಥನ ಬಾಂಧವ್ಯದ ಬಗ್ಗೆ ಮಾತಾಡಿದ್ದು, ಕುತೂಹಲಕ್ಕೂ ಎಡೆಮಾಡಿಕೊಟ್ಟಿದೆ ಎಂದಿದ್ದಾರೆ.



