Friday, December 5, 2025
Google search engine

Homeಸ್ಥಳೀಯದೊಡ್ಡದಾಗಿ ಬಾಯಿ ಬಿಟ್ಟ ಹೆಬ್ಬಾವು

ದೊಡ್ಡದಾಗಿ ಬಾಯಿ ಬಿಟ್ಟ ಹೆಬ್ಬಾವು

ಮೈಸೂರು: ನಂಜನಗೂಡು ತಾಲ್ಲೂಕಿನ ಮಹಾದೇವನಗರದ ಕೋಡಹಳ್ಳ ಸಮೀಪದಲ್ಲಿ ದೈತ್ಯ ಹೆಬ್ಬಾವನ್ನು ಸೆರೆಹಿಡಿಯಲಾಗಿದೆ. ರೈತರಲ್ಲಿ ಆತಂಕ ಸೃಷ್ಟಿಸಿದ್ದ ಭಾರಿ ಗಾತ್ರದ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳ ಸಹಾಯದಿಂದ ಉರಗ ತಜ್ಞ ಸಂಜಯ್‌ ರಕ್ಷಣೆ ಮಾಡಿದ್ದಾರೆ.

ರೈತರು ಜಮೀನಿಗೆ ತೆರಳುತ್ತಿದ್ದ ವೇಳೆ ಈ ಹೆಬ್ಬಾವು ಕಾಣಿಸಿಕೊಂಡಿದೆ. ಇದೇ ಹೆಬ್ಬಾವು ಕುರಿ ಹಾಗೂ ಮೇಕೆಗಳನ್ನು ನುಂಗಿ ರೈತರಿಗೆ ಭಾರೀ ತೊಂದರೆಯನ್ನು ನೀಡುತ್ತಿತ್ತು. ಇದೀಗ ಹೆಬ್ಬಾವನ್ನು ಪತ್ತೆ ಮಾಡಿ ಸೆರೆ ಹಿಡಿಯಲಾಗಿದ್ದು, ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

RELATED ARTICLES
- Advertisment -
Google search engine

Most Popular