ಬೆಂಗಳೂರು: ನಾನು ಗೃಹಸಚಿನಾದ ಮೇಲೆ ಯಾರಿಂದಲೂ ಹಣ ಪಡೆದಿಲ್ಲ. ಹಣ ಪಡೆದು ಯಾವುದೇ ಪೋಲಿಸರಿಗೆ ಪೋಸ್ಟಿಂಗ್ ಮಾಡಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಪೊಲೀಸ್ ಇಲಾಖೆಯಲ್ಲಿ ಲಂಚ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ 124 ಪೊಲೀಸರ ವಿರುದ್ದ ಕ್ರಮ ಕೈಗೊಳ್ಳಲಾಗಿದೆ. 7.11 ಕೋಟಿ ದರೋಡೆ ಕೇಸ್ ನಲ್ಲಿ ಓರ್ವ ಪಿಸಿ ಭಾಗಿಯಾಗಿದ್ದ. ಆತನನ್ನು ಕೆಲಸದಿಂದ ವಜಾಗೊಳಿಸುತ್ತೇವೆ. ದಾವಣಗೆರೆಯಲ್ಲಿ ಚಿನ್ನಭಾರಣ ವ್ಯಾಪಾರಿ ದರೋಡೆ ಪ್ರಕರಣದಲ್ಲಿ ಓರ್ವ ಪ್ರೊಬೆಷನರಿ ಪಿಎಸ್ ಐ ವಜಾಗೊಳಿಸಿದ್ದೇವೆ ಮತ್ತೊಬ್ಬ ಪಿಎಸ್ ಐ ಅಮಾನತು ಮಾಡಿದ್ದೇವೆ. ಕೋಲಾರದ ಪೊಲೀಸ್ ಸಿಬ್ಬಂದಿಯನ್ನು ವಜಾ ಮಾಡುತ್ತೇವೆ. ಅವರು ಕೋರ್ಟ್ ಗೆ ಹೋದರೆ ನಾವು ಕೂಡ ಹೋಗುತ್ತೇವೆ ಎಂದರು.
ನಾನು ಗೃಹಸಚಿವನಾದ ಮೇಲೆ ಯಾರಿಂದಲೂ ಹಣ ಪಡೆದಿಲ್ಲ ಹಣ ಪಡೆದು ಯಾವುದೇ ಪೋಲಿಸರಿಗೆ ಪೋಸ್ಟಿಂಗ್ ಮಾಡಿಲ್ಲ. ಲಂಚ ಪಡೆದಿದ್ದು ಸಾಬೀತು ಪಡಿಸಿದರೆ ಗೃಹ ಸಚಿವ ಸ್ಥಾನದಲ್ಲಿರಲ್ಲ. ಯಾರೊ ಒಬ್ಬ ನನ್ನ ಪರಿಚಯವಿದೆ ಎಂದು ಲಂಚ ಪಡೆದರೇ ಆತನ ವಿರುದ್ದವೂ ಕ್ರಮ ಕೈಗೊಳ್ಳುತ್ತೇವೆ. ಮೊನ್ನೆ ಕಮಿಷನರ್ ಕಚೇರಿಯಲ್ಲಿ ಓರ್ವ ಪಿಸಿ ಹಣ ಪಡೆದಿದ್ದ. ಆತನ ವಿರುದ್ದವೂ ಕ್ರಮ ಕೈಗೊಳ್ಳುತ್ತೇವೆ ಬೆಳಗಾವಿ ಲಾಠಿ ಚಾರ್ಜ್ ಬಗ್ಗೆ ನ್ಯಾಯಾಂಗ ತನಿಖೆ ನಡೆಯುತ್ತಿದೆ ಎಂದು ಪರಮೇಶ್ವರ್ ತಿಳಿಸಿದರು.



