Friday, December 5, 2025
Google search engine

Homeರಾಜ್ಯಸುದ್ದಿಜಾಲತಾಯಿ  ಮತ್ತು ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ 

ತಾಯಿ  ಮತ್ತು ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ 

ಶಿವಮೊಗ್ಗ: ತಾಯಿ  ಮತ್ತು ಮಗ ಪ್ರತ್ಯೇಕವಾಗಿ ತಮ್ಮ ತಮ್ಮ ಬೆಡ್​​ರೂಮ್​​​ಗಳಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ  ಮಾಡಿಕೊಂಡಿರುವಂತಹ ಘಟನೆ ನಗರದ ಅಶ್ವತ್ಥ್ ಬಡಾವಣೆಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ತಾಯಿ ಜಯಶ್ರೀ(57) ಮತ್ತು ಮಗ ಆಕಾಶ್(32) ಮೃತರು. ಇಬ್ಬರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಭೇಟಿ ನೀಡಿದ ವಿನೋಬನಗರ ಠಾಣಾ ಪೊಲೀಸರು ಮನೆ ಪರಿಶೀಲನೆ ಮಾಡಿದ್ದಾರೆ.

ಮೃತ ಡಾ. ಜಯಶ್ರೀ ಶಿವಮೊಗ್ಗದಲ್ಲಿ ತಾಯಿ ಮತ್ತು ಪ್ರಸೂತಿ ಆಸ್ಪತ್ರೆ ಹೊಂದಿದ್ದರು. ನಿನ್ನೆ ರಾತ್ರಿ ತಾಯಿ ಮತ್ತು ಮಗನ ಮಧ್ಯೆ ಜಗಳವಾಗಿದೆ. ಬಳಿಕ ಮಗ ಹಾಗೂ ಸೊಸೆ ಹೆಸರಿಗೆ ಆಸ್ತಿ ಬರೆದಿಟ್ಟು ಡಾ. ಜಯಶ್ರೀ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೂರು ವರ್ಷದ ಹಿಂದಷ್ಟೇ ಸೊಸೆ ಆತ್ಮಹತ್ಯೆ

ಡೆತ್​​ನೋಟ್ ಬರೆದಿಟ್ಟು ತಾಯಿ ಮೊದಲು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳಿಕ ಮಗ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಳೆದ ಮೂರು ವರ್ಷದ ಹಿಂದೆಯಷ್ಟೇ ಮೃತ ಆಕಾಶ್​​ನ ಮೊದಲನೇ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದ ಆಘಾತಕ್ಕೆ ಒಳಗಾಗಿದ್ದ.

ಆಘಾತದಿಂದ ಹೊರಬರಲು ಕಳೆದ ಮೇ ತಿಂಗಳಲ್ಲಿ ಆಕಾಶ್​ ಮತ್ತೊಂದು ಮದುವೆಯಾಗಿ ಆರು ತಿಂಗಳಾಗಿತ್ತು. ಹೀಗಿರುವಾಗ ತಾಯಿ ಮಗ ಆತ್ಮಹತ್ಯೆಗೆ ಶರಣಾಗಿದ್ದಾರೆ. ಎರಡನೇ ಪತ್ನಿ ಮನೆಯಲ್ಲಿರುವಾಗಲೇ ಆಕಾಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

RELATED ARTICLES
- Advertisment -
Google search engine

Most Popular