Saturday, December 6, 2025
Google search engine

HomeUncategorizedರಾಷ್ಟ್ರೀಯವಿಶ್ವದಾಖಲೆಗೆ ಸಿಎಂ ನಿತೀಶ್ ಕುಮಾರ್

ವಿಶ್ವದಾಖಲೆಗೆ ಸಿಎಂ ನಿತೀಶ್ ಕುಮಾರ್

ಪಾಟ್ನಾ :ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಲಂಡನ್‌ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ವಿಶಿಷ್ಟ ಸಾಧನೆಗಾಗಿ ಗುರುತಿಸಿದೆ. ಹತ್ತನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಈ ಮನ್ನಣೆ ದೊರೆತಿದ್ದು, ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ೧೯೪೭ ರಿಂದ ೨೦೨೫ ರವರೆಗೆ ಹತ್ತು ಬಾರಿ ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಮೊದಲ ವ್ಯಕ್ತಿ ನಿತೀಶ್ ಕುಮಾರ್ ಎಂದು ಲಂಡನ್‌ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ ಪತ್ರದಲ್ಲಿ ತಿಳಿಸಿದೆ.

ಈ ಸಾಧನೆಯು ಬಿಹಾರಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ ಎನ್ನಲಾಗಿದೆ.
ಈ ನಡುವೆ ವಿಶ್ವ ದಾಖಲೆ ಪುಸ್ತಕ ಕಳುಹಿಸಿರುವ ಪತ್ರದಲ್ಲಿ ನಿತೀಶ್ ಕುಮಾರ್ ಅವರ ದಾಖಲೆಯು ಭಾರತೀಯ ಪ್ರಜಾಪ್ರಭುತ್ವದ ಸ್ಥಿರತೆ, ಅವರ ಬಲವಾದ ನಾಯಕತ್ವ ಮತ್ತು ಜನರಿಗೆ ಅವರ ಸಮರ್ಪಣೆಯನ್ನು ಸಂಕೇತಿಸುತ್ತದೆ ಎಂದು ಹೇಳಲಾಗಿದೆ. ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸತತ ಹತ್ತು ಅವಧಿಗೆ ರಾಜ್ಯವನ್ನು ಮುನ್ನಡೆಸುವುದು ಅತ್ಯಂತ ಅಪರೂಪದ ಮತ್ತು ಗಮನಾರ್ಹ ಸಾಧನೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಬಿಹಾರದ ಜನರು ಅವರ ಮೇಲೆ ಇಟ್ಟಿರುವ ನಿರಂತರ ನಂಬಿಕೆಯು ಅವರ ನೀತಿಗಳು ಮತ್ತು ದೂರದೃಷ್ಟಿಯ ಮೇಲಿನ ಸಾರ್ವಜನಿಕ ಅನುಮೋದನೆಯ ಮುದ್ರೆಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದು, ಇದನ್ನು ಅನುಕರಣೀಯ ಸಾಧನೆ ಎಂದು ಬಣ್ಣಿಸಿದ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್, ಇದು ಕೇವಲ ದಾಖಲೆಯಲ್ಲ, ರಾಷ್ಟ್ರಕ್ಕೆ ಹೆಮ್ಮೆಯ ಕ್ಷಣ ಎಂದು ತಿಳಿಸಿದೆ.

ಈ ಸಾಧನೆಯನ್ನು ಗುರುತಿಸಿ, ನಿತೀಶ್ ಕುಮಾರ್ ಅವರ ಹೆಸರನ್ನು ತಮ್ಮ ಜಾಗತಿಕ ಪ್ರತಿಷ್ಠಿತ ಪಟ್ಟಿಯಲ್ಲಿ ಔಪಚಾರಿಕವಾಗಿ ಸೇರಿಸಲಾಗುವುದು ಮತ್ತು ಅವರಿಗೆ ಅಧಿಕೃತ ಪ್ರಮಾಣಪತ್ರವನ್ನು ಸಹ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಲಂಡನ್‌ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್, ವಿಶಿಷ್ಟ ಸಾಧನೆಗಳು ಮತ್ತು ಅಸಾಧಾರಣ ದಾಖಲೆಗಳನ್ನು ದಾಖಲಿಸಲು ಹೆಸರುವಾಸಿಯಾದ ವಿಶ್ವದ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ.

ಈ ಸಂಸ್ಥೆಯು ಪ್ರಪಂಚದಾದ್ಯಂತದ ಪ್ರಭಾವಿ ವ್ಯಕ್ತಿಗಳು, ಸಂಸ್ಥೆಗಳು ಮತ್ತು ಐತಿಹಾಸಿಕ ತಾಣಗಳ ಕೊಡುಗೆಗಳು ಮತ್ತು ಸಾಧನೆಗಳನ್ನು ಗುರುತಿಸುತ್ತದೆ. ನಿತೀಶ್ ಕುಮಾರ್ ಅವರ ಈ ಸಾಧನೆಯನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಎಂದು ಪರಿಗಣಿಸಲಾಗುತ್ತಿದೆ ಎಂದಿದ್ದಾರೆ.

ಇನ್ನೂ ಬಿಹಾರದ ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಸಾಮಾಜಿಕ ಉನ್ನತಿಗಾಗಿ ಅವರ ನಾಯಕತ್ವದಲ್ಲಿ ಮಾಡಿದ ಕಾರ್ಯಗಳಿಗೆ ಈ ಜಾಗತಿಕ ಮನ್ನಣೆ ದೊರೆತಿರುವುದು ಅವರ ರಾಜಕೀಯ ಪ್ರಯಾಣವನ್ನು ಇನ್ನಷ್ಟು ವಿಶೇಷವಾಗಿಸಲಿದ್ದು, ರಾಜಕೀಯದಲ್ಲಿ ಸ್ಥಿರತೆ ಮತ್ತು ದೀರ್ಘಾವಧಿಯ ಅಧಿಕಾರಾವಧಿಗೆ ಹೆಸರುವಾಸಿಯಾಗಿರುವ ನಿತೀಶ್ ಕುಮಾರ್ ಹತ್ತನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಹೊಸ ಇತಿಹಾಸವಾಗಿದ್ದು, ಮುಂಬರುವ ದಿನಗಳಲ್ಲಿ ಇದು ಪ್ರಜಾಪ್ರಭುತ್ವದ ಸಾಧನೆಗಳ ಮಾನದಂಡವಾಗಿ ಕಂಡುಬರುತ್ತದೆ ಹಾಗೂ ಜೆಡಿಯು ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಸಂಜಯ್ ಝಾ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅವರು ಇದನ್ನು ಬಿಹಾರ ಮತ್ತು ದೇಶದ ಪ್ರಜಾಪ್ರಭುತ್ವದ ಪ್ರಯಾಣದಲ್ಲಿ ಒಂದು ವಿಶಿಷ್ಟ ಕ್ಷಣ ಎಂದು ಬಣ್ಣಿಸಿದ್ದಾರೆ.

RELATED ARTICLES
- Advertisment -
Google search engine

Most Popular