ಬೆಳಗಾವಿ: ಡಿನ್ನರ್ ಬ್ರೇಕ್‌ಫಾಸ್ಟ್ ಬಳಿಕವೂ ತಂದೆಯ ಪರ ಪುತ್ರ ಯತೀಂದ್ರ ಬ್ಯಾಟಿಂಗ್ ಮಾಡುವುದನ್ನು ಮುಂದುವರಿಸಿದ್ದಾರೆ. ಸಿದ್ದರಾಮಯ್ಯ ಪೂರ್ಣ ಅವಧಿಯವರೆಗೆ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ಪೂರ್ಣ ಅವಧಿಯಲ್ಲಿ ಸಿಎಂ ಆಗಿ ಮುಂದುವರಿಯುತ್ತಾರೆ. ಇದರಲ್ಲಿ ಯಾವುದೇ ಬದಲಾವಣೆಯ ಮಾತಿಲ್ಲ ಎಂದರು.
ಹೈಕಮಾಂಡ್ ಹಲವಾರು ವಿಚಾರಗಳಿಗೆ ಕರೆಯುತ್ತಾರೆ ಹೋಗಿ ಮಾತನಾಡಿಕೊಂಡು ಬರುತ್ತಾರೆ. ಆ ರೀತಿ ಆಗಬಹುದು ಈ ರೀತಿ ಆಗಬಹುದು ಅನ್ನೋದು ಈಗಲೇ ಯಾಕೆ ಎಂದು ಪ್ರಶ್ನಿಸಿದರು.
ಡಿಸಿಎಂ ಶಿವಕುಮಾರ್ ನಾನು ಮುಖ್ಯಮಂತ್ರಿ ಆಗಬೇಕು ಎಂದು ಕೇಳಿದರು. ಹಾಗಾಗಿ ಗೊಂದಲ ಇತ್ತು ಹೈಕಮಾಂಡ್ ಸ್ಪಷ್ಟನೆ ಕೊಟ್ಟಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಇಷ್ಟು ವರ್ಷಗಳಿಗೆ ಅಂತ ತೀರ್ಮಾನ ಮಾಡುತ್ತಾರಾ ಎಂದು ಕೇಳಿದರು.



