ಬೆಳಗಾವಿ : ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ವಿಚಾರ ಕುರಿತು ರಾಜ್ಯ ಸರ್ಕಾರದ ನಡೆಗೆ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಸುರೇಶ್ ಕುಮಾರ್ ಕಿಡಿಕಾರಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ಮದ್ಯ ಮಾರಾಟ ವಿಚಾರ ಕುರಿತು ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದ ಶಾಸಕ ಸುರೇಶ್ ಕುಮಾರ್, ಕಿರಾಣಿ ಅಂಗಡಿಯಲ್ಲಿ ಮದ್ಯ ಮಾರಾಟ ಯಾಕೆ ಆನ್ ಲೈನ್ ಮಾಡಿಬಿಡಿ. ಸ್ವಿಗ್ಗಿ ಝೊಮೋಟೊದಲ್ಲಿ ಮಾರಾಟ ಮಾಡಿಸಿಬಿಡಿ ಎಂದು ಹರಿಹಾಯ್ದರು. ಈ ವೇಳೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್ ಅನಧಿಕೃತವಾಗಿ ನಡೆಯುತ್ತಿರಬಹುದು. ನಾನೂ ಕೂಡಾ ಎಷ್ಟೋ ಕಡೆ ಕೇಳಿದ್ದೇನೆ ಎಂದರು.
ಹಾಗೆಯೇ ಆನ್ ಲೈನ್ ಮೂಲಕ ಡ್ರಗ್ಸ್ ಸಪ್ಲೆ ಆಗುತ್ತಿದೆ. ಆನ್ ಲೈನ್ ಡ್ರಗ್ಸ್ ಸಪ್ಲೆಗೆ ಕಡಿವಾಣ ಹಾಕಬೇಕು ಎಂದು ಸುರೇಶ್ ಕುಮಾರ್ ಆಗ್ರಹಿಸಿದರು. ಮಾಹಿತಿ ಇದ್ರೆ ನಮಗೆ ಕೊಡಿ. ಡ್ರಗ್ಸ್ ಮುಕ್ತ ಮಾಡುತ್ತೇವೆ ಎಂದು ಭರವಸೆ ಕೊಟ್ಟದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸದನದಲ್ಲಿ ತಿಳಿಸಿದರು.



