Wednesday, December 10, 2025
Google search engine

Homeರಾಜ್ಯಸುದ್ದಿಜಾಲಸಾಯಿ ಬಾಬಾನಿಗೆ ಚಿನ್ನದ ಕಿರೀಟ ಕೊಟ್ಟ ನಟಿ ಮಾಲಾಶ್ರೀ

ಸಾಯಿ ಬಾಬಾನಿಗೆ ಚಿನ್ನದ ಕಿರೀಟ ಕೊಟ್ಟ ನಟಿ ಮಾಲಾಶ್ರೀ

ಸ್ಯಾಂಡಲ್‌ವುಡ್‌ನ ಕನಸಿನ ರಾಣಿ ಮಾಲಾಶ್ರೀ 3 ದಶಕಗಳಿಗೂ ಹೆಚ್ಚು ಕಾಲ ಸೌತ್ ಸಿನಿಮಾ ರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. 1989ರಲ್ಲಿ ನಂಜುಂಡಿ ಕಲ್ಯಾಣ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು. ಇದಕ್ಕಿಂತಲೂ ಮೊದಲು ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಸಿನಿಮಾ ಮಾಡಿದ್ದಾರೆ ಮಾಲಾಶ್ರೀ. ಬಾಲನಟಿಯಾಗಿ ತಮಿಳು ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದಾರೆ. ತಮ್ಮ ಮೊದಲ ಕನ್ನಡ ಸಿನಿಮಾ ನಂಜುಂಡಿ ಕಲ್ಯಾಣ ಶುರು ಮಾಡುವ ಮುನ್ನ ಶಿರಡಿ ಸಾಯಿಬಾಬಾ ಆರ್ಶೀವಾದವನ್ನ ಪಡೆದು ಸಿನಿಮಾವನ್ನ ಆರಂಭಿಸಿದ್ದರಂತೆ. ಮಾಲಾಶ್ರೀ ಒಂದು ಕಾಲದಲ್ಲಿ ಸಖತ್ ಬ್ಯುಸಿಯೆಸ್ಟ್ ನಟಿ.

ಮಾಲಾಶ್ರೀ ಅವರ ಈ ಸಕ್ಸಸ್ ಹಿಂದೆ ಶಿರಡಿ ಸಾಯಿಬಾಬಾ ಅವರ ಆರ್ಶೀವಾದ ಅಚಲವಾಗಿದೆ. ಈ ಹಿನ್ನೆಲೆ ತಮ್ಮ ಪುತ್ರಿಯ ಮೊದಲ ಸಿನಿಮಾ ಶುರು ಮಾಡುವಾಗಲೂ ಬಾಬಾ ಆರ್ಶೀವಾದವನ್ನ ಪಡೆದಿದ್ದಾರೆ. ಇದೀಗ ಶಿರಡಿಗೆ ಭೇಟಿಕೊಟ್ಟು ಚಿನ್ನದ ಕಿರೀಟವನ್ನ ನೀಡಿದ್ದಾರೆ. ನಮ್ಮ ಕುಟುಂಬದ ಶಕ್ತಿ ಸಾಯಿಬಾಬಾ ಆಗಿದ್ದಾರೆ. ಹೀಗಾಗಿ, ನಮ್ಮ ಕಡೆಯಿಂದ ಒಂದು ಚಿಕ್ಕ ಉಡುಗೊರೆ ಎಂದಿದ್ದಾರೆ ಮಾಲಾಶ್ರೀ.

ಮಗಳು ಆರಾಧನಾ ರಾಮ್ ಹಾಗೂ ಪುತ್ರ ಆರ್ಯನ್ ಜೊತೆ ಶಿರಡಿಗೆ ಭೇಟಿ ನೀಡಿ ಬಂಗಾರದ ಕಿರೀಟವನ್ನ ಬಾಬಾಗೆ ಅರ್ಪಿಸಿದ್ದಾರೆ. ಇನ್ನು ಇದೇ ವೇಳೆ ಸಾಯಿಬಾಬಾ ಮೇಲಿನ ಭಕ್ತಿಯನ್ನ ನಟಿ ಮಾಲಾಶ್ರೀ ವಿವರಿಸಿದ್ದಾರೆ. ಮಾಲಾಶ್ರೀ ಅವರ ಪುತ್ರಿ ಕಾಟೇರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಇದೀಗ ಉಪೇಂದ್ರ ಅವರು ನಾಯಕರಾಗಿ ನಟಿಸುತ್ತಿರುವ ನೆಕ್ಸ್ಟ್‌ ಲೆವೆಲ್ ಸಿನಿಮಾದಲ್ಲಿ ನಟಿಸಲಿದ್ದಾರೆ.

RELATED ARTICLES
- Advertisment -
Google search engine

Most Popular