Friday, December 12, 2025
Google search engine

Homeರಾಜಕೀಯಇದೇ ಹೈಕಮಾಂಡ್ ನಿರ್ಧಾರ : ಯತೀಂದ್ರ ಸಿದ್ದರಾಮಯ್ಯ!

ಇದೇ ಹೈಕಮಾಂಡ್ ನಿರ್ಧಾರ : ಯತೀಂದ್ರ ಸಿದ್ದರಾಮಯ್ಯ!

ಬೆಳಗಾವಿ : ಚಳಿಗಾಲದ ಅಧಿವೇಶನದ ಸಮಯದಲ್ಲೇ ಪವರ್ ಶೇರಿಂಗ್​ ಹಾಗೂ ಕುರ್ಚಿ ಕಾದಾಟದ ಹಗ್ಗ ಜಗ್ಗಾಟ ಮತ್ತೆ ಜೋರಾಗಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಣ ಗದ್ದುಗೆ ಗುದ್ದಾಟದ ನಡುವೆ ಯತೀಂದ್ರ ಸಿದ್ದರಾಮಯ್ಯ ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ.

ಕಾಂಗ್ರೆಸ್​ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಮಾತೇ ಇಲ್ಲ. ಈ ಕುರಿತು ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಬೆಳಗಾವಿಯಲ್ಲಿ ಮಾತಾಡಿದ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಪವರ್​ ಶೇರಿಂಗ್ ಚರ್ಚೆ, ಕುರ್ಚಿ ಕಾದಾಟಕ್ಕೆ ಸದ್ಯ ಫುಲ್​ ಸ್ಟಾಪ್​ ಇಡುವ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ನಾಯಕತ್ವ ವಿಚಾರದಲ್ಲಿ ಯಾವುದೇ ಜಗಳ ಇಲ್ಲ. ಲೀಡರ್‌ ಶಿಪ್ ಬದಲಾವಣೆ ಇಲ್ಲ ಎಂದು ಹೈಕಮಾಂಡ್ ಸ್ಪಷ್ಟವಾಗಿಯೇ ಹೇಳಿದೆ ಎಂದು ಸಿಎಂ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular