ಚಾಮರಾಜನಗರ : ಸರ್ಕಾರದ ಹಾಗೂ ಜನಪ್ರತಿನಿಧಿಗಳ ವಿರುದ್ದ ಕಾಡಿನ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ರಾಮಯ್ಯನಪುರ ಗ್ರಾಮದ ಜನರು, ಮೂಲಭೂತ ಸಮಸ್ಯೆ ಬಗೆ ಬಗೆಹರಿಸದಿದ್ದರೆ ಮತದಾನ ಬಹಿಷ್ಕರಿಸುತ್ತೇವೆ ಎಂದು ಹೇಳಿದ್ದಾರೆ.
ರಾಮಯ್ಯನಪುರ ಗ್ರಾಮದಲ್ಲಿ ರಸ್ತೆಯಿಲ್ಲ, ಕುಡಿಯುವ ನೀರಿಲ್ಲ, ಜೊತೆಗೆ ಕಾಡು ಪ್ರಾಣಿಗಳ ಕಾಟದಿಂದ ಜನ ಆತಂಕದಲ್ಲೇ ಜೀವನ ನಡೆಸುತ್ತಿದ್ದಾರೆ. ಇನ್ನು ಶಾಲೆಗೆ ಹೋಗುವ ಮಕ್ಕಳು ಕಲ್ಲು ಮುಳ್ಳಿನ ಹಾದಿಯಲ್ಲೆ ದಿನ ನಿತ್ಯ ನಡೆದುಕೊಂಡೆ ಹೋಗಬೇಕು.
ಇಲ್ಲಿ ನಮ್ಮ ಸಮಸ್ಯೆಗಳನ್ನು ಕೇಳುವವರು ಇಲ್ಲ. ದಿನನಿತ್ಯ ಈ ಹಿಂಸೆಲೇ ಬದುಕುತ್ತಿದ್ದೇವೆ. ಜನಪ್ರತಿನಿಧಿಗಳು ಚುನಾವಣೆ ವೇಳೆ ಮಾತ್ರ ಮತ ಕೇಳಲು ಬರುತ್ತಾರೆ ಮತ್ತೆ ಸದ್ದೇ ಇರುವುದಿಲ್ಲ ಎಂದು ಹೇಳಿದ್ದಾರೆ.



