Wednesday, December 17, 2025
Google search engine

Homeರಾಜ್ಯಗ್ರಾಮೀಣ ಭಾಗದಲ್ಲಿ ಕೃಷಿ ಮಾಡೋ ಯುವಕರಿಗೆ ವಿಶೇಷ ಯೋಜನೆ ರೂಪಿಸಬೇಕು 10 ರಿಂದ 25 ಲಕ್ಷ...

ಗ್ರಾಮೀಣ ಭಾಗದಲ್ಲಿ ಕೃಷಿ ಮಾಡೋ ಯುವಕರಿಗೆ ವಿಶೇಷ ಯೋಜನೆ ರೂಪಿಸಬೇಕು 10 ರಿಂದ 25 ಲಕ್ಷ ರೂ.ವರೆಗೆ ಸಹಾಯಧನ ನೀಡಬೇಕು : ಕಾಂಗ್ರೆಸ್ ಸದಸ್ಯ ಪುಟ್ಟಣ್ಣ

ಬೆಳಗಾವಿ: ಗ್ರಾಮೀಣ ಭಾಗದಲ್ಲಿ ಕೃಷಿ ಮಾಡ್ತಿರೋ ಯುವಕರಿಗೆ ಮದುವೆ ಆಗಲು ಹೆಣ್ಣು ಸಿಕ್ತಿಲ್ಲ. ಹೀಗಾಗಿ ಸರ್ಕಾರ ಇಂತಹ ಯುವಕರಿಗೆ ವಿಶೇಷ ಯೋಜನೆ ಜಾರಿ ಮಾಡಬೇಕು. 10 ರಿಂದ 25 ಲಕ್ಷ ರೂ.ವರೆಗೆ ಸಹಾಯಧನ ನೀಡಬೇಕು ಅಂತ ಕಾಂಗ್ರೆಸ್ ಸದಸ್ಯ ಪುಟ್ಟಣ್ಣ ಒತ್ತಾಯಿಸಿದ್ದಾರೆ.

ವಿಧಾನ ಪರಿಷತ್ ಶೂನ್ಯ ವೇಳೆ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಕೃಷಿ ಮಾಡೋ ಯುವಕರಿಗೆ ಹೆಣ್ಣು ಸಿಕ್ತಿಲ್ಲ. ಸರ್ಕಾರ ಇಂತಹ ಯುವಕರಿಗೆ ಯೋಜನೆ ಘೋಷಣೆ ಮಾಡಬೇಕು. ಹೆಣ್ಣುಮಕ್ಕಳು ಸಿಗದೇ ತಾಲೂಕಿಗೊಂದು ಮಠ ಕಟ್ಟಿಕೊಡಿ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಯುವಕರ ನಡುವೆ ಚರ್ಚೆ ಆಗ್ತಿದೆ. ಮದುವೆ ಆಗದ ಯುವಕರು ದೇವಾಲಯಗಳಿಗೆ ಪಾದಯಾತ್ರೆ ಹೋಗ್ತಾ ಇದ್ದಾರೆ. ಕೃಷಿ ಮಾಡೋ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ. ಇದು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ಸರ್ಕಾರ ಗ್ರಾಮೀಣ ಭಾಗದಲ್ಲಿ ಕೃಷಿ ಮಾಡೋ ಯುವಕರಿಗೆ ವಿಶೇಷ ಯೋಜನೆ ರೂಪಿಸಬೇಕು. ಕನಿಷ್ಠ 10 ರಿಂದ 25 ಲಕ್ಷ ರೂ. ಮದುವೆ ಆಗದ ಯುವಕರಿಗೆ ಸರ್ಕಾರ ಸಹಾಯಧನ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯಗೆ ಒತ್ತಾಯ ಮಾಡಿದರು. ಸಭಾನಾಯಕ ಬೋಸರಾಜು ಸಿಎಂ ಅವರಿಂದ ಉತ್ತರ ಕೊಡಿಸುವ ಭರವಸೆ ಕೊಟ್ಟಿದ್ದಾರೆ.

RELATED ARTICLES
- Advertisment -
Google search engine

Most Popular