ಬೆಂಗಳೂರು : ಆಹಾರ ಇಲಾಖೆ ಬಿಪಿಎಲ್, ಎಪಿಎಲ್ ಕಾರ್ಡ್‌ಗಳ ರಿಯಾಲಿಟಿ ಚೆಕ್‌ಗೆ ಮುಂದಾಗಿದ್ದು, ಈ ಮೂಲಕ ಅನರ್ಹ ಪಡಿತರ ಚೀಟಿಗಳ ಪರಿಶೀಲಿಸಿ ಮನೆ ಮನೆಗೆ ಭೇಟಿ ಕೊಟ್ಟು ಅನರ್ಹರ ಕಾರ್ಡ್‌ಗಳನ್ನು ರದ್ದು ಮಾಡಲು ನಿರ್ಧರಿಸಿದೆ ಎನ್ನಲಾಗಿದೆ.
ಸುಮಾರು 13 ಲಕ್ಷಕ್ಕೂ ಹೆಚ್ಚು ಕಾರ್ಡ್‌ನ್ನು ಪರಿಷ್ಕರಣೆ ಮಾಡಲಾಗುತ್ತಿದ್ದು, ಆಹಾರ ಇಲಾಖೆ ಆದ್ಯತಾ ಪಡಿತರ ಚೀಟಿಗಳನ್ನ ಅರ್ಹರಿಲ್ಲದಿದ್ದರೂ ಇಟ್ಟಿಕೊಂಡಿರುವ ಕಾರ್ಡ್ ಪರಿಶೀಲನೆ ಮಾಡಿ ಅರ್ಹತೆ ಇರುವವರಿಗೆ ತಲುಪಿಸುವ ನಿಟ್ಟಿನಲ್ಲಿ ಮನೆ ಮನೆಗೆ ಭೇಟಿ ಕೊಟ್ಟು ಆಹಾರ ಇಲಾಖೆ ಅಧಿಕಾರಿಗಳು ಅನರ್ಹ ಕಾರ್ಡ್‌ದಾರರ ದಾಖಲಾತಿ ಪರಿಶೀಲಿಸಿ ಅರ್ಹತೆ ಇರುವವರಿಗೆ ಕಾರ್ಡ್ ನೀಡಲು ಮುಂದಾಗಿದ್ದಾರೆ.
ಈಗಾಗಲೇ ಆಯಾಯ ನ್ಯಾಯ ಬೆಲೆ ಅಂಗಡಿಗಳಿಗೆ ಆಹಾರ ಇಲಾಖೆ ಪರಿಷ್ಕರಣೆ ಮಾಡುತ್ತಿರುವ ಕಾರ್ಡ್ ಪಟ್ಟಿ ಕಳುಹಿಸಿದ್ದು, ತೆರಿಗೆ ಪಾವತಿ, ಜಮೀನು, ಸ್ವಂತ ಮನೆ ಮತ್ತು ಕಾರುಗಳನ್ನ ಹೊಂದಿರುವವರ ಕಾರ್ಡ್ ಗಳನ್ನ ಡಿಲಿಟ್ ಮಾಡಿದೆ. ಡಿಲಿಟ್ ಆಗಿರುವ ಕಾರ್ಡ್‌ದಾರರಿಂದ ನ್ಯಾಯ ಬೆಲೆ ಅಂಗಡಿಯವರು ದಾಖಲಾತಿ ಸಂಗ್ರಹ ಮಾಡಿಕೊಂಡಿದ್ದು, ಕಾರ್ಡ್‌ದಾರರು ಕೂಡ ನಮ್ಮ ಮನೆಯ ಸದಸ್ಯರ ಆಧಾರ್ ಕಾರ್ಡ್ ಮತ್ತು ಆದಾಯ ದೃಢಿಕರಣ ಪತ್ರವನ್ನ ಕಡ್ಡಾಯವಾಗಿ ಪರಿಶೀಲನೆ ವೇಳೆ ತೋರಿಸಬೇಕಿದೆ ಎಂದು ತಿಳಿಸಿದ್ದಾರೆ.
ಪರಿಶೀಲನೆ ವೇಳೆ ಆದಾಯ ಹೆಚ್ವಿರೋದು ಪತ್ತೆಯಾದರೆ ಕಾರ್ಡ್ ಎಪಿಎಲ್ ಗೆ ಬದಲಾಯಿಸಲಾಗುತ್ತದೆ. ಆದಾಯ ಇಲ್ಲದೇ ಕಾರ್ಡ್ ಪಡೆಯಲು ಅರ್ಹರಿದ್ದರೆ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಆಹಾರ ಇಲಾಖೆಯ ಕ್ರಮದಿಂದ ಅನರ್ಹ ಪಡಿತರ ಚೀಟಿಗಳಿಗೆ ಬ್ರೇಕ್ ಬೀಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ ಎಂದಿದ್ದಾರೆ.



