ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕಾ ಇಲಾಖೆ, ರೈತ ಜನ್ಯ ಫಾರ್ಮರ್ ಪ್ರೊಡ್ಯೂಸರ್ ಕಂಪೆನಿ ಮತ್ತು ಕೃಷಿ ವಿಚಾರ ವಿನಿಮಯ ಕೇಂದ್ರದ ಜಂಟಿ ಸಹಭಾಗಿತ್ವದಲ್ಲಿ ಸಮಾಜ ಮಂದಿರದಲ್ಲಿ ಸಮಾಜ ಮಂದಿರದಲ್ಲಿ ರಫ್ತು ಅವಕಾಶಗಳು ಹಾಗೂ ಉತ್ತಮ ಕೃಷಿ ಪದ್ಧತಿಗಳ ಜಾಗೃತಿ ಕಾರ್ಯಕ್ರಮ ನಡೆಯಿತು.
ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಆಫೆಡಾ) ಸಹಾಯಕ ಸಾಮಾನ್ಯ ವ್ಯವಸ್ಥಾಪಕ ಧರ್ಮರಾವ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಮ್ಮ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಸವಿವರವಾಗಿ ತಿಳಿಸಿ ಅಡಿಕೆ ಬೆಳೆಗಾರರಿಗೆ ರಫ್ತಿನ ಅವಕಾಶಗಳ ಬಗ್ಗೆ ಅರಿವು ಮೂಡಿಸಿದರು.
ಅಫೇಡಾದ ಡಾ. ಪೂಜಾ ಮತ್ತು ಡಾ. ಕಾರಂತ್, ಕೃಷಿ ವಿಜ್ಞಾನ ಕೇಂದ್ರದ ಡಾ. ರಶ್ಮಿ ಆರ್. ಮತ್ತು ಡಾ. ಕೇದಾರನಾಥ್ ಇವರು ಅಡಿಕೆ ಬೆಳೆಯಲ್ಲಿ ಉತ್ತಮ ಕೃಷಿ ಪದ್ಧತಿಗಳ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕೃಷಿ ವಿಚಾರ ವಿನಿಮಯ ಕೇಂದ್ರದ ಅಜಯ್ ಕುಮಾರ್ ರೈತ ಜನ್ಯ ಕಂಪನಿಯ ಲಿಯೋ ವಾಲ್ಠರ್ ನಜರತ್ ಹಾಜರಿದ್ದರು. ಕಂಕನಾಡಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಟಿ.ಜೆ.ರಮೇಶ ಪ್ರಾಸ್ತಾವಿಕವಾಗಿ ಮಾತನಾಡಿದರು.
ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಕೆ. ಪ್ರವೀಣ್ ಸ್ವಾಗತಿಸಿ, ನಿರೂಪಿಸಿದರು.
ರಫ್ತು ಅವಕಾಶಗಳು ಹಾಗೂ ಉತ್ತಮ ಕೃಷಿ ಪದ್ಧತಿಗಳ ಜಾಗೃತಿ ಕಾರ್ಯಕ್ರಮ
RELATED ARTICLES



