Saturday, December 20, 2025
Google search engine

Homeರಾಜಕೀಯದ್ವೇಷ ಭಾಷಣ ಮಸೂದೆ ಜನರ ಬಾಯಿ ಮುಚ್ಚಿಸೋ ಆದೇಶ: ಪ್ರಹ್ಲಾದ್‌ ಜೋಶಿ ಕಿಡಿ

ದ್ವೇಷ ಭಾಷಣ ಮಸೂದೆ ಜನರ ಬಾಯಿ ಮುಚ್ಚಿಸೋ ಆದೇಶ: ಪ್ರಹ್ಲಾದ್‌ ಜೋಶಿ ಕಿಡಿ

ನವದೆಹಲಿ: ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಂಗೀಕರಿಸಿದ ದ್ವೇಷ ಭಾಷಣ ಮಸೂದೆ ಸಾರ್ವಜನಿಕರ ಬಾಯಿ ಮುಚ್ಚಿಸುವ ಆದೇಶವಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್‌ ಜೋಶಿ ಕಿಡಿ ಕಾರಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಈ ಮಸೂದೆ ಮೂಲಕ ಸಂವಿಧಾನದ 19ನೇ ವಿಧಿಯ ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಿದೆ. ಈ ಸರ್ಕಾರದ ಇಂತಹ ನೀತಿಗಳಿಂದಾಗಿ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲದಂತಾಗಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಇನ್ನೂ ಬ್ರಿಟಿಷರ ಕಾಲದ ವಸಾಹತು ಶಾಹಿಗಳ ಅಸ್ಪಷ್ಟ ವ್ಯಾಖ್ಯಾನಗಳು, ವ್ಯಾಪಕ ಅಧಿಕಾರದ ದಾಹ ಮತ್ತು ಕಠಿಣ ಕ್ರಿಮಿನಲ್ ಶಿಕ್ಷೆ ಮೂಲಕ ಜನಪರ ಹೋರಾಟವನ್ನು ಹತ್ತಿಕ್ಕಲು ನೋಡಿದೆ. ಈ ಸರ್ಕಾರ ದಬ್ಬಾಳಿಕೆಗಾಗಿ ಇಂತಹ ಕಾನೂನುಗಳನ್ನು ಬಳಸಿಕೊಳ್ಳಲು ನೋಡುತ್ತಿದೆ. ಸಂವಿಧಾನದ ನಿಬಂಧನೆಗಳನ್ನು ಕಿಂಚಿತ್ತೂ ಗೌರವಿಸದೇ ಆಡಳಿತ ನಡೆಸುತ್ತಿದೆ ಎಂದು ಸಚಿವ ಜೋಶಿ ಆಕ್ರೋಶ ಹೊರ ಹಾಕಿದ್ದಾರೆ.

RELATED ARTICLES
- Advertisment -
Google search engine

Most Popular