ಹಾಸನ : ಜಿಲ್ಲೆಯ ಹೊಳೆನರಸೀಪುರ ಪಟ್ಟಣದಲ್ಲಿ ವೃದ್ಧರ ಮದುವೆ ಸಂಘರ್ಷ ನಡೆದಿದ್ದು, ಇಳಿ ವಯಸ್ಸಿನಲ್ಲಿ ಮದುವೆಯಾದ ತಂದೆ ವಿರುದ್ಧ ಮಕ್ಕಳ ಆಕ್ರೋಶಗೊಂಡಿದ್ದಾರೆ. ಮೊದಲ ಪತ್ನಿ ಮೃತಪಟ್ಟಿದ್ದರಿಂದ 68 ವರ್ಷದ ರಾಜಣ್ಣಅವರು ಪತಿಯಿಂದ ದೂರವಾಗಿರುವ 58 ವರ್ಷದ ಗೀತಾ ಎನ್ನುವವರನ್ನು ಎರಡನೇ ಮದುವೆಯಾಗಿದ್ದಾರೆ.
ಆದ್ರೆ, ಇದೀಗ ಈ ವಯಸ್ಸಿನಲ್ಲಿ ತಂದೆ ಮದುವೆಯಾಗಿದ್ದಕ್ಕೆ ಮಕ್ಕಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಂದೆ ರಾಜಣ್ಣ ಅವರು ಮಕ್ಕಳ ವಿರುದ್ಧವೇ ದೂರು ನೀಡಿದ್ದಾರೆ. ಆಸ್ತಿಗಾಗಿ ಮಕ್ಕಳಿಂದಲೇ ಜೀವ ಬೆದರಿಕೆ ಇದೆ.
ಇಬ್ಬರು ಹೆಣ್ಣುಮಕ್ಕಳು, ಓರ್ವ ಪುತ್ರನಿಗೆ ಮದುವೆ ಮಾಡಿ ಆಸ್ತಿ ನೀಡಿದ್ದೇನೆ. ನನ್ನ ಬಳಿ ಒಂದು ಮನೆಯಿದ್ದು ಅದನ್ನು ತಮಗೆ ನೀಡುವಂತೆ ನನ್ನ ಮಕ್ಕಳು ಹಲ್ಲೆ ನಡೆಸಿದ್ದಾರೆ. ನನ್ನ ಕಷ್ಟ-ಸುಖಕ್ಕೆ ನೆರವಾಗಲಿ ಎಂದು ಎರಡನೇ ವಿವಾಹ ಆಗಿದ್ದೇನೆ. ಸೂಕ್ತ ರಕ್ಷಣೆ ನೀಡುವಂತೆ ರಾಜಣ್ಣ-ಗೀತಾ ದಂಪತಿ ಪೊಲೀಸರಿಗೆ ಮನವಿ ಮಾಡಿದ್ದಾರೆ.



