ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಎಷ್ಟೇ ಯತ್ನಿಸಿದರೂ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಭಾನುವಾರ ಹೇಳಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಏನೇ ಪ್ರಯತ್ನ ಮಾಡಿದರೂ ನನ್ನ ನಿಲುವು ಬದಲಾಗಲ್ಲ. ನಾನು ಎಂದಿಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಪರವೇ. ಈ ಹಿಂದೆ ನಾನು ನೀಡಿದ್ದ ಹೇಳಿಕೆಗಳಿಗೆ ಈಗಲೂ ಬದ್ಧ ಎಂದು ಪುನರುಚ್ಚರಿಸಿದ್ದಾರೆ.
ಇನ್ನೂ ಡಿಕೆ ಶಿವಕುಮಾರ್ ಭೇಟಿ ಮಾಡಿದ್ದು ಹೌದು ಅವರೇನು ಹುಡಿಕಿಕೊಂಡು ಬಂದಿರಲಿಲ್ಲ. ಅವರು ಪಾರ್ಟಿ ಅಧ್ಯಕ್ಷರು ಮಾತನಾಡುತ್ತಾರೆ. ಯಾರನ್ನೂ ಬೇಕಾದರೂ ಮಾತಾಡಿಸಬಹುದು. ಪಕ್ಷ ಸಂಘಟನೆ ವಿಚಾರವಾಗಿ ಭೇಟಿ ಮಾಡಿದ್ದರು. ಪಕ್ಷ ಸಂಘಟನೆ ಮಾಡೋಣ ಎಂದರು, ನಾನು ಆಯಿತು ಅಂದೆ ಅದರ ಹೊರತಾಗಿ ಬೇರೆ ಯಾವುದೇ ವಿಚಾರಗಳು ಚರ್ಚೆ ಆಗಿಲ್ಲ ಎಂದು ತಿಳಿಸಿದರು.
ನಮ್ಮ ನಿಲುವು ಸಿದ್ದರಾಮಯ್ಯ ಪರವಾಗಿಯೇ ಇದೆ. ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಮನೆಗೆ ಎಲ್ಲರೂ ಊಟಕ್ಕೆ ಹೋಗಿದ್ದು, ಅದು ರಾಜಕೀಯ ಅಲ್ಲ. ಅದೊಂದು ಸೌಜನ್ಯಕ್ಕೆ ಅಷ್ಟೆ. ಇನ್ನೂ ಸಿಎಂ ವಿಚಾರವನ್ನ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಸಿಎಂ ಕೂಡ ನಾನೇ 5 ವರ್ಷ ಇರ್ತೀನಿ ಅಂತ ಪದೇ ಪದೇ ಹೇಳಿದ್ದಾರೆ. ಹೈಕಮಾಂಡ್ ಹೇಳುವವರೆಗೆ ನಾನು ಕಾಯುತ್ತೇನೆಂದು ತಿಳಿಸಿದ್ದಾರೆ.
ಅಷ್ಟಲ್ಲದೇ ನಾನು ಈ ಹಿಂದೆ ನೀಡಿದ ಹೇಳಿಕೆಗಳಿಗೆ ಈಗಲೂ ಬದ್ಧ. ನಾನು ಸಿದ್ದರಾಮಯ್ಯ ಪರವೇ, ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಡಿ.ಕೆ ಶಿವಕುಮಾರ್ ಏನೇ ಪ್ರಯತ್ನ ಮಾಡಿದರೂ ಕೂಡ ನನ್ನ ಹಿಂದಿನ ಎಲ್ಲ ಹೇಳಿಕೆಗಳಿಗೆ ನಾನು ಬದ್ಧ ಎಂದಿದ್ದಾರೆ.



