ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಅರ್‌ನಗರ : ಮಾಜಿ ಸಚಿವರಾದ ಸಾ.ರಾ.ಮಹೇಶ್ ಅಚರ ಸುದೀರ್ಘ ಹದಿನೈದು ವರ್ಷಗಳ ಶಾಸಕತ್ವದ ಅವದಿಯಲ್ಲಿ ಯಾವೊಬ್ಬ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಂದ ಒಂದೇಒಂದು ನಯಾಪೈಸಾ ಪಡೆದಿಲ್ಲ ಎಂದು ಕಪ್ಪಡಿ ಕ್ಷೇತ್ರಕ್ಕೆ ಬಂದು ಸತ್ಯ ಮಾಡುತ್ತೇವೆ ನಿಮಗೆ ತಾಕತ್ ಇದ್ದರೆ ನೀವು ನಿಮ್ಮ ಶಾಸಕರು ಹಾಗು ಅವರ ತಂದೆ ಅವರು ತೋಟದ ಮನೆಯಲ್ಲಿ ವರ್ಗಾವಣೆ ಮತ್ತು ಗುತ್ತಿಗೆದಾರರಿಂದ ಹಣ ಪಡೆದಿಲ್ಲ ಎಂದು ಸತ್ಯ ಮಾಡಿ ಎಂದು ಜಿಲ್ಲಾ ಜೆಡಿಎಸ್ ಮುಖಂಡ ಮತ್ತು ವಕೀಲ ಅಂಕನಹಳ್ಳಿ ತಿಮ್ಮಪ್ಪ ಸವಾಲ್ ಹಾಕಿದರು.
ಸುದ್ದಿಗಾರರೊಂದಿಗೆ ಮಾಡಿದ ಅವರು ತಾಲೂಕು ಕಾಂಗ್ರೆಸ್ ವಕ್ತಾರ ಸಯ್ಯದ್ದ್ ಜಾಬೀರ್ ಆರೋಪಕ್ಕೆ ಪ್ರತಿ ಆರೋಪ ಮಾಡಿ ವಾಗ್ದಾಳಿ ನಡೆಸಿ ಆಣೆ ಪ್ರಮಾಣೆಕ್ಕೆ ಸವಾಲ್ ಹಾಕಿ ಪ್ರಶ್ನೆಗಳ ಸುರಿಮಳೆಗೈದರು. ರೋಲ್ ಕಾಲ್ ಮತ್ತು ವರ್ಗಾವಣೆ ದಂದೆ ಮೂಲಕ ಹಣ ವಸೂಲಿ ಮಾಡುವುದು ನೀವು ಮತ್ತು ನಿಮ್ಮ ಶಾಸಕರು ಹಾಗೂ ಅವರ ತಂದೆ ಎಂದು ಗಂಭೀರವಾಗಿ ಆರೋಪಿಸದ ಅವರು ಹಂಪಾಪುರ ರೈಲ್ವೆ ಗೇಟ್ ನಿಂದ ಸನ್ಯಾಸಿಪುರ ಮೂಲಕ ಹಾಸನ -ಮೈಸೂರು ಹೆದ್ದಾರಿಗೆ ಸಂಪರ್ಕದ ಹಳೇ ರಸ್ತೆಗೆ ಐದು ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ.
ಇತ್ತೀಚಿಗೆ ನಿಮ್ಮ ಶಾಸಕರು ಗುದ್ದಲಿ ಪೂಜೆ ಮಾಡಿದ್ದಾರೆ, ಅದಾದ ಎರಡೇ ದಿನಕ್ಕೆ ಗುಂಡಿಗಳನ್ನು ಮುಚ್ಚಿಸಿ ಬಿಲ್ ಪಾಸ್ ಮಾಡಿಸಿ ಮೂರೇ ದಿನಕ್ಕೆ ಮತ್ತೆ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಾರಂಬಿಸಿ ಏಕೆ ಎಂದು ಕಾಂಗ್ರೆಸ್ ವಕ್ತಾರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಪ್ರಶ್ನೆ ಮಾಡಿದ ಈ ಕಾಮಗಾರಿಯಲ್ಲಿ ಎಷ್ಟು ಕಮಿಷನ್ ಬಂದಿದೆ. ಇಷ್ಟೊಂದು ಕಳಪೆಯಾಗಿ ಕಾಮಗಾರಿ ಮಾಡುತ್ತಿದ್ದರು ನಿಮಗಾಗಲಿ ಅಥವಾ ಶಾಸಕ.ಡಿ.ರವಿಶಂಕರ್ ಅವರಿಗಾಗಲಿ ಗೊತ್ತಾಗಲಿಲ್ಲವೇ ಎರಡೂವರೆ ಕಿ.ಮೀ ರಸ್ತೆ ಅಭಿವೃದ್ಧಿಗೆ ಐದುಕೋಟಿ ವೆಚ್ಚದಲ್ಲಿ ಕಾಮಗಾರಿ ಮಾಡುತ್ತಿರುವುದು ಜನರ ತೆರಿಗೆ ಹಣದಲ್ಲಿ ನಿಮ್ಮ ಮನೆಯ ಹಣವಲ್ಲ, ಎಂದು ಕಾಂಗ್ರೆಸ್ ಮುಖಂಡರುಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವರಾದ ಸಾ.ರಾ.ಮಹೇಶ್ ಅವರು ತಮ್ಮ ದುಡಿಮೆಯ ಸ್ವಂತ ಹಣದಲ್ಲಿ ಇವಾಗ ಕೂಡ ಪ್ರತಿ ಮಂಗಳವಾರ ಜನ ಸಾಮಾನ್ಯರ ದುಃಖ ದುಮ್ಮಾನಗಳಿಗೆ ಸ್ಪಂದಿಸುವ ಮೂಲಕ ಅನಾರೋಗ್ಯ ಪೀಡಿತರಿಗೆ , ನೊಂದವರ, ಶೋಷಿತರಿಗೆ ನೆರವು ನೀಡುತ್ತಿದ್ದಾರೆ ಎಂದರು.
ನಮ್ಮ ನಾಯಕರಾದ ಮಾಜಿ ಸಚಿವರಾದ ಸಾ.ರಾ.ಮಹೇಶ್ ಅವರು ಹದಿನೈದು ವರ್ಷಗಳಲ್ಲಿ ಯಾರಿಗೂ ನಿಮ್ಮತರ ಕಳ್ಳ ಬಿಲ್ ಬರೆಸಿಲ್ಲ, ಹೊಟ್ಟೆ ಪಾಡಿನ ಜೀವನ ಮಾಡುತ್ತಿರುವುದು ನೀವು ಎಂದು ಕಾಂಗ್ರೆಸ್ ವಕ್ತಾರ ಜಾಬೀರ್ ವಿರುದ್ದ ವಾಗ್ದಾಳಿ ನಡೆಸಿದರು.
ಯಾವೊಂದು ಕಾಮಗಾರಿ ಮಾಡ ಬೇಕಾದರೂ ನಿಮ್ಮ ಶಾಸಕರಿಗೆ ,ಅವರ ತಂದೆಗೆ ಗುತ್ತಿಗೆದಾರರು ಹಣ ಕೊಡ ಬೇಕು, ನಮ್ಮ ತಾಲೂಕಿನಲ್ಲಿ ಗುತ್ತಿಗೆದಾರರು ಇಲ್ಲವೇ ಅವರ ಹೊಟ್ಟೆ ಮೇಲೆ ಹೊಡೆದು ಕೆ.ಆರ್.ಡಿ.ಎಲ್ ಮತ್ತು ನಿರ್ಮಿತಿ ಕೇಂದ್ರದವರಿಗೆ ಕಾಮಗಾರಿ ಕೊಡುತ್ತಿರುವುದು ಏಕೆ ಎಂದು ಪ್ರಶ್ನೆ ಮಾಡಿದ ಅವರು ಮುಖ್ಯಮಂತ್ರಿ ಕರೆದು ಕೊಂಡು ಬಂದು 519 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿಸಿದರಲ್ಲ ಎಲ್ಲಿ ಹೋಯಿತು ಅಭಿವೃದ್ಧಿ ಕಾಮಗಾರಿ, ಎಲ್ಲಿ ನಡೆಯುತ್ತಿದೆ ನಿಮ್ಮ ಅಭಿವೃದ್ಧಿ ಕಾಮಗಾರಿ ಎಂದು ಶಾಸಕ ಡಿ.ರವಿಶಂಕರ್ ಅವರಿಗೆ ಟೀಕಿಸಿದರು.
ರಾಜ್ಯದಲ್ಲಿ ನಿಮ್ಮದೇ ಸರ್ಕಾರ, ನಿಮ್ಮವರೇ ಶಾಸಕರು, ಪುರಸಭೆ ನಿಮ್ಮದೇ, ಜಿಲ್ಲಾ ಮಂತ್ರಿಗಳು ನೀವೇ ಹಾಗಾದರೆ ಅಭಿವೃದ್ಧಿ ಎಲ್ಲಿ ನಡೆಯುತ್ತಿದೆ, ನಮ್ಮ ಮಾಜಿ ಸಚಿವರಾದ ಸಾ.ರಾ.ಮಹೇಶ್ ಅವರು ಹದಿನೈದು ವರ್ಷಗಳ ಅಭಿವೃದ್ಧಿ ಕೆಲಸಗಳ ಬಗ್ಗೆ ಪುಸ್ತಕ ರೂಪದಲ್ಲಿ ಪ್ರಿಂಟ್ ಹಾಕಿಸಿದ್ದೇವೆ, ಚುನಾವಣೆಗೂ ಮುನ್ನಾ ಶಾಸಕ ರವಿಶಂಕರ್ ಅವರಿಗೆ ಪೋಸ್ಟ್ ಮೂಲಕ ಕಳುಹಿಸಲಾಗಿದೆ ಎಂದು ಅಭಿವೃದ್ಧಿ ಬಗ್ಗೆ ಪ್ರಿಂಟ್ ಹಾಕಿಸಿರುವ ಪುಸ್ತಕ ತೋರಿಸಿದರು.
ಪಟ್ಟಣದ ತರಕಾರಿ ಸಂಕೂಲ ಮಾಡಿದ್ದರಲ್ಲ ಅದು ಯಾವ ಅನುದಾನ ಬಳಕೆ ಮಾಡಿದ್ದಿರಿ ತಿಳಿಸಿ, ಎಲ್ಲಾ ಇಲಾಖೆಯವರು ನಾವು ಮಾಡಿಲ್ಲ ಎಂದು ಹಿಂಬರಹ ನೀಡಿದ್ದಾರೆ, ಶಾಸಕ.ಡಿ.ರವಿಶಂಕರ್ ಅವರು ಎಪ್ಪತ್ತು ಲಕ್ಷಕ್ಕೆ ನಿರ್ಮಿಸಿ ಕೇಂದ್ರದಲ್ಲಿ ಬಿಲ್ ಬರೆಸಲು ಮುಂದಾಗಿದ್ದಾರೆ ಎಂದು ಆರೋಪ ಮಾಡಿದರು.



