ಕರಾವಳಿ ಅಭಿವೃದ್ಧಿ ಮಂಡಳಿ ವತಿಯಿಂದ ಮೀನುಗಳ ಸಂರಕ್ಷಿತ ಸರಬರಾಜಿಗೆ ಅನುಕೂಲವಾಗುವಂತಹ ಐಸ್ ಬಾಕ್ಸ್ ಗಳನ್ನು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮಕ್ಕೆ ಮಂಗಳವಾರ ನೀಡಲಾಯಿತು.
ಮಂಡಳಿ ಅಧ್ಯಕ್ಷ ಎಂ.ಎ ಗಫೂರ್ ಅವರು ಮೀನುಗಾರಿಕೆ ನಿಗಮದ ಪ್ರಧಾನ ವ್ಯವಸ್ಥಾಪಕ ಮಹೇಶ್ ಕುಮಾರ್ ಅವರಿಗೆ ಐಸ್ ಬಾಕ್ಸ್ ಗಳನ್ನು ನೀಡಿದರು.
ಮೀನುಗಳ ಸಾಗಣೆ ಹಾಗೂ ಸಂರಕ್ಷಣೆಗೆ ಐಸ್ ಬಾಕ್ಸ್ ಗಳ ಅಗತ್ಯವಿರುವುದಾಗಿ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದಿಂದ ಬಂದ ಮನವಿಯ ಹಿನ್ನೆಲೆಯಲ್ಲಿ, ಸಾರ್ವಜನಿಕ ಹಿತದೃಷ್ಟಿಯಿಂದ ಈ ಐಸ್ ಬಾಕ್ಸ್ ಗಳನ್ನು ಹಸ್ತಾಂತರಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಪ್ರದೀಪ್ ಡಿಸೋಜಾ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಮಂಜುನಾಥ್ ಆರ್ ಶೆಟ್ಟಿ ಮತ್ತು ಮಂಡಳಿಯ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.



