Wednesday, December 24, 2025
Google search engine

Homeಅಪರಾಧಮಾರುತಿ‌ ಕಾರಿನಲ್ಲಿ ಗಾಂಜಾ ಮಾರಾಟ ಇಬ್ಬರು ಯುವಕರ ಬಂದನ

ಮಾರುತಿ‌ ಕಾರಿನಲ್ಲಿ ಗಾಂಜಾ ಮಾರಾಟ ಇಬ್ಬರು ಯುವಕರ ಬಂದನ

ವರದಿ:ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಕೆ.ಆರ್.ನಗರ ಪಟ್ಟಣದಲ್ಲಿ ಇಬ್ಬರು ಯುವಕರು ಮಾರುತಿ‌ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಅಬಕಾರಿ‌ ಅಧಿಕಾರಿಗಳು ದಾಳಿ‌‌ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಬಂದಿಸಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ .

ಕೊಡುಗು ಜಿಲ್ಲೆಯ ಮಕ್ಕಂದೂರಿನ‌ ರಾಜರಾಜೇಶ್ವರಿ ನಗರದ
ಎಂ ವಿ ಮಹಮ್ಮದ್ ಮಿರ್ಶದ್ ಬಿನ್ ವಾಜಿದ್,(23) ಹಾಗೂ ಕುಶಾಲನಗರ ತಾಲೂಕಿನ ಕಲಂದರ್
ಹಾರಂಗಿ ಯೋಜನೆ, ಯಡವನಾಡು ಅರಣ್ಯದ ಎಲ್ ಪದ್ಮನಾಭ ಬಿನ್ ಆರ್ ಲೋಕೇಶ್, (23) ಬಂದಿಸಿ‌ ನ್ಯಾಯಾಲಕ್ಕೆ ಹಾಜರು‌ ಪಡಿಸಿ ಸದ್ಯಕ್ಕೆ ನ್ಯಾಯಾಂಗ ಬಂದನದಲ್ಲಿ ಇರಿಸಿದ್ದಾರೆ.

ಪಟ್ಟಣದ ಚೀರಹಳ್ಳಿ ಮುಖ್ಯ ರಸ್ತೆಯ ಸಾಯಿ ಕನ್ವೆನ್ಸನ್ ಹಾಲ್ ಬಳಿ ಅಬಕಾರಿ ಅಧಿಕಾರಿಗಳು ಗಸ್ತು ನಡೆಸುತ್ತಿದ್ದಾಗ ಕೆ.ಆರ್.ನಗರ-ಮೈಸೂರು ಮುಖ್ಯ ರಸ್ತೆಯಲ್ಲಿರುವ ತೋಪಮ್ಮ ದೇವಸ್ಥಾನದ ಬಳಿ ಇಬ್ಬರು ಆಸಾಮಿಗಳು ಬಿಳಿ ಬಣ್ಣದ ಮಾರುತಿ 800 ಕಾರು ಸಂಖ್ಯೆ ಕೆಎ-19 ಎಂ-8366 ರಲ್ಲಿ ಅಕ್ರಮವಾಗಿ ಒಣ ಗಾಂಜಾವನ್ನು ಇಟ್ಟುಕೊಂಡು ರಸ್ತೆ ಬದಿಯಲ್ಲಿ ವಾಹನವನ್ನು ನಿಲ್ಲಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿಯ ಮೇರೆಗೆ ದಾಳಿ ನಡೆಸಲಾಗಿ 974 ಗ್ರಾಂ ತೂಕದ ಬೀಜ ಮಿಶ್ರಿತ ಒಣ ಗಾಂಜಾವನ್ನು ಅಕ್ರಮವಾಗಿ ಮಾರಾಟದ ಉದ್ದೇಶದಿಂದ ಸಾಗಾಣಿಕೆ ಮಾಡುತ್ತಿರುವುದು ಪತ್ತೆಯಾಗಿದ್ದು ದೊರೆತ ಗಾಂಜಾವನ್ನು ವಶಪಡಿಸಿಕೊಂಡಿದ್ದೇವೆ ಎಂದು ಪಟ್ಟಣದ ಅಬಕಾರಿ ಇನ್ಸ್ ಪೆಕ್ಟರ್ ವೈ.ಎಸ್. ಲೋಕೇಶ್ ತಿಳಿಸಿದ್ದಾರೆ.

ಮಾರುತಿ‌ ಕಾರಿನಲ್ಲಿ ಗಾಂಜಾ ಸಾಗಾಣಿಕೆ ಮತ್ತು ‌ಮಾರಾಟ ಮಾಡಲಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ವಿಭಾಗದ ಜಂಟಿ‌ ಆಯುಕ್ತರಾದ ಬಸವರಾಜ ಹಡಪದ ಹಾಗೂ ಮೈಸೂರು‌ ಜಿಲ್ಲೆ ಗ್ರಾಮಾಂತರ ಅಬಕಾರಿ ಉಪ‌ ಆಯುಕ್ತರಾದ ಡಾ.ಮಹದೇವಿ ಬಾಯಿ , ಹುಣಸೂರಿನ ಅಬಕಾರಿ ಉಪ‌ಅಧೀಕ್ಷಕರಾದ ಎಂ.ಡಿ.ಮೋಹನ್ ಕುಮಾರ್ ಇವರುಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಮಾಡಲಾಯಿತು.

ಕಾರ್ಯಾಚರಣೆಯ ದಾಳಿ ವೇಳೆಯಲ್ಲಿ ಅಬಕಾರಿ‌ ಸಬ್ ಇನ್ಸ್ ಪೆಕ್ಟರ್ ಸಿ.ವಿ. ರಾಘವೇಂದ್ರ, ಮುಖ್ಯ ಪೇದೆ ಕೆ.ಪಿ. ಶಿವಕುಮಾರ್, ಅಬಕಾರಿ ಪೇದೆ ಶಿವಪ್ಪಮಾಳಪ್ಪ ಭಾನುಸಿ, ಮತ್ತು ವಾಹನ ಚಾಲಕರಾದ ಮಹದೇವ.ಕೆ & ಗೃಹರಕ್ಷದಳ ಸಿಬ್ಬಂದಿಯಾದ ರವೀಶ.ಆರ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular