ವರದಿ :ಸ್ಟೀಫನ್ ಜೇಮ್ಸ್.
ಬೆಳಗಾವಿ
ಜಿಲ್ಲಾದ್ಯಂತ ಗುರುವಾರ ಕ್ರಿಸ್ಮಸ್ ಹಬ್ಬವನ್ನು ಭಕ್ತಿ, ಸಂಭ್ರಮ ಹಾಗೂ ಸೌಹಾರ್ದದಿಂದ ಆಚರಿಸಲಾಯಿತು. ನಗರ ಪ್ರದೇಶ ಹಾಗೂ ಗ್ರಾಮೀಣ ಭಾಗದ ಚರ್ಚ್‌ಗಳಲ್ಲಿ ಏಸು ಕ್ರಿಸ್ತರ ಜನೋತ್ಸವದ ಅಂಗವಾಗಿ ಬುಧವಾರ ಮಧ್ಯರಾತ್ರಿಯಿಂದಲೇ ಪ್ರಾರ್ಥನೆಗಳು ಮತ್ತು ವಿಧಿ-ವಿಧಾನಗಳು ನೆರವೇರಿದವು. ವಿಶೇಷ ಧಾರ್ಮಿಕ
ನಗರದ ಕ್ಯಾಂಪ್ ಪ್ರದೇಶದ ಐತಿಹಾಸಿಕ ಸೇಂಟ್ ಮೇರಿಸ್ ಕ್ಯಾಥೆಡ್ರಲ್, ಸೇಂಟ್ ಫಾಲ್ಸ್ ಚರ್ಚ್, ಸೆಂಟ್ರಲ್ ಮೆಥೋಡಿಸ್ಟ್ ಚರ್ಚ್, ತಿಲಕವಾಡಿಯ ಆರ್ ಲೇಡಿ ಆಫ್ ಫಾತಿಮಾ ಚರ್ಚ್, ವಡಗಾಂವನ ಇನ್ವೆಂಟ್ ಜೀಸಸ್ ಮತ್ತು ಶಹಾಪುರದ ಸೇಂಟ್ ಅಂಥೋನೀಸ್ ಚರ್ಚ್‌ಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದವು.
ಕ್ರಿಸ್ಮಸ್ ನಕ್ಷತ್ರಗಳು ಹಾಗೂ ಏಸುವಿನ ಜನನವನ್ನು ಬಿಂಬಿಸುವ ಸುಂದರ ಗೋದಲಿಯು ಜನರ ಗಮನ ಸೆಳೆಯಿತು
ಶಾಂತಿ, ಮಾನವೀಯತೆಯ
ಸಂದೇಶ: ಪ್ರಾರ್ಥನಾ ಸಭೆಗಳಲ್ಲಿ ಭಾಗ
ವಹಿಸಿದ್ದ ಸಾವಿರಾರು ಭಕ್ತರಿಗೆ ಧರ್ಮ ಗುರುಗಳು ಶಾಂತಿಯ ಸಂದೇಶ ನೀಡಿ, “ಏಸು ಕ್ರಿಸ್ತರು ಜಗತ್ತಿಗೆ ಸಾರಿದ ಪ್ರೀತಿ, ತ್ಯಾಗ ಮತ್ತು ಕರುಣೆಯನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕು. ಮಾನವೀಯ ತೆಯೇ ಧರ್ಮದ ಮೂಲವಾಗಲಿ,” ಎಂದು ಆಶೀರ್ವಚನ ನೀಡಿದರು. ಪ್ರಾರ್ಥನೆಯ ನಂತರ ಕ್ರೈಸ್ತ ಸಮುದಾಯದವರು ಪರಸ್ಪರ ಶುಭಾಶಯ ವಿನಿಮಯ ಮಾಡಿ ಕೊಂಡರು.
“
- ಮಕ್ಕಳ ಮನಗೆದ್ದ ಸಾಂತಾ ಕ್ಲಾಸ್:
:
ಹಬ್ಬದ ಸಡಗರಕ್ಕೆ ಸಾಂತಾ ಕ್ಲಾಸ್ ಆಗಮನ ವಿಶೇಷ ಮೆರುಗು ನೀಡಿತು. ಸಾಂತಾ ಕ್ಲಾಸ್ ವೇಷಧಾರಿಗಳು ಮಕ್ಕಳಿಗೆ ಸಿಹಿ ಮತ್ತು ಉಡುಗೊರೆಗಳನ್ನು ವಿತರಿಸಿ ಸಂಭ್ರಮಿಸಿದರು. ಮನೆಗಳಲ್ಲಿ ಕ್ರಿಸ್ಮಸ್ ಮರವನ್ನು ಅಲಂಕರಿಸಿ, ಕುಟುಂಬದ ಸದಸ್ಯರೆಲ್ಲರೂ ಸೇರಿ ಕೇಕ್
ಸೇವೆ ಮೂಲಕ ಸೌಹಾರ್ದತೆಬೆಳಗಾವಿ ನಗರ ಮಾತ್ರವಲ್ಲದೆ ನಿಪ್ಪಾಣಿ, ಚಿಕ್ಕೋಡಿ, ಗೋಕಾಕ ಸೇರಿದಂತೆ ಜಿಲ್ಲಾದ್ಯಂತ ಹಬ್ಬದ ವಾತಾವರಣ ಮನೆ ಮಾಡಿತ್ತು. ಹಲವೆಡೆ ಹಬ್ಬದ ಅಂಗವಾಗಿ ಬಡವರು ಮತ್ತು ನಿರ್ಗತಿಕರಿಗೆ ಆಹಾರ, ಬಟ್ಟೆ ಹಾಗೂ ಅಗತ್ಯ ವಸ್ತುಗಳನ್ನು ವಿತರಿಸುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮಾರುಕಟ್ಟೆಯಲ್ಲಿ ಕೂಡ ವ್ಯಾಪಾರ-ವಹಿವಾಟು ಚುರು ಕುಗೊಂಡು ಹಬ್ಬದ ಸಂಭ್ರಮ ಇಮ್ಮಡಿಗೊಂಡಿತ್ತು.



