ಮಂಗಳೂರು,ಶ್ರೀ ಲಂಕಾ ಪತ್ರಕರ್ತರ ನಿಯೋಗ ಡಿಸೆಂಬರ್ 27 ಹಾಗೂ ಡಿಸೆಂಬರ್ 28 ರಂದು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿದೆ.
ಡಿಸೆಂಬರ್ 27 ರಂದು ಮಂಗಳೂರಿಗೆ ನಿಯೋಗ ಆಗಮಿಸಲಿದೆ. ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಕರ್ತರನ್ನು ಭೇಟಿ ಮಾಡಲಿದ್ದಾರೆ. ಬಳಿಕ ಕುಲಶೇಖರದಲ್ಲಿರುವ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ಪಿಲಿಕುಳ ನಿಸರ್ಗಧಾಮ, ಕರಾವಳಿ ಉತ್ಸವ, ಮಂಗಳೂರು ಕಂಬಳ, ಯಕ್ಷಗಾನ ಕೂಡಾ ವೀಕ್ಷಿಸಲಿದೆ.
ಡಿಸೆಂಬರ್ 28 ರಂದು ಕರ್ನಾಟಕ ವಿಧಾನ ಸಭೆ ಸಭಾಪತಿ ಯು ಟಿ ಖಾದರ್ ಅವರನ್ನು ನಿಯೋಗ ಭೇಟಿ ಮಾಡಲಿದೆ. ಸ್ವಸಹಾಯ ಗುಂಪುಗಳ ಸದಸ್ಯರು ಹಾಗೂ ಗೊಂಡಂಬಿ ಕಾರ್ಖಾನೆಗೂ ಭೇಟಿ ನೀಡಲಿದ್ದಾರೆ. ಅಲ್ಲದೆ ಮಂಗಳೂರಿನ ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಿಸಲಿದೆ.
ಶ್ರೀ ಲಂಕಾ ಆರ್ಥಿಕ ಸಚಿವಾಲಯದ ಮಾಜಿ ಮಾಧ್ಯಮ ಕಾರ್ಯದರ್ಶಿ ಹಾಗೂ ಏಶಿಯನ್ ಮೀಡಿಯಾ ಅಸೋಸಿಯೇಷನ್ ನ ಅಧ್ಯಕ್ಷ ಪ್ಯಾಟಮ್ ಪ್ಯಾಸ್ತ್ಯಯುಲ್ ನೇತೃತ್ವದ ನಿಯೋಗದಲ್ಲಿ 6 ಮಂದಿ ಹಿರಿಯ ಪತ್ರಕರ್ತರು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ನಿರ್ದೇಶಕ ಶ್ರೀನಿವಾಸ್ ನಾಯಕ್ ಇಂದಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



