Saturday, December 27, 2025
Google search engine

Homeರಾಜ್ಯಸುದ್ದಿಜಾಲಡಾ. ಮಹಾಂತೇಶ ರಾಮಣ್ಣವರ ಪ್ರತಿಷ್ಠಿತ ಆಯುರ್ವೇದ ವಿಶ್ವರತ್ನ ಪ್ರಶಸ್ತಿಗೆ ಆಯ್ಕೆ.

ಡಾ. ಮಹಾಂತೇಶ ರಾಮಣ್ಣವರ ಪ್ರತಿಷ್ಠಿತ ಆಯುರ್ವೇದ ವಿಶ್ವರತ್ನ ಪ್ರಶಸ್ತಿಗೆ ಆಯ್ಕೆ.

ವರದಿ :ಸ್ಟೀಫನ್ ಜೇಮ್ಸ್.

ಬೆಳಗಾವಿ
ಕಜೆ ಆಯುರ್ವೇದಿಕ್ ಫೌಂಡೇಶನ್ ವತಿಯಿಂದ ಎರಡನೇ ವಿಶ್ವ ಆಯುರ್ವೇದ ಸಮ್ಮೇಳನ ನಾಳೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದು. ದೇಹದಾನ ಜಾಗೃತಿಗಾಗಿ ತಂದೆಯ ಮೃತದೇಹ ಛೇದನ ಮಾಡಿ ವೈದ್ಯಕೀಯ ಇತಿಹಾಸ ಸೃಷ್ಟಿಸಿದ ದೇಹದಾನದ ರಾಯಭಾರಿ, ಕೆ ಎಲ್ ಇ ಬಿ.ಎಂ.ಕಂಕಣವಾಡಿ ಆಯುರ್ವೆದ ಮಹಾವಿದ್ಯಾಲಯದ ಶರೀರ ರಚನಾ ವಿಭಾಗದ ಮುಖ್ಯಸ್ಥ ಹಾಗೂ ಡಾ. ರಾಮಣ್ಣವರ ಚಾರಿಟೇಬಲ ಟ್ರಸ್ಟ್ ನ ಕಾರ್ಯದರ್ಶಿ ಡಾ.ಮಹಾಂತೇಶ ಬಿ ರಾಮಣ್ಣವರ ಅವರು
ಆಯುರ್ವೇದ ವಿಶ್ವರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಒಟ್ಟು ದೇಶ ಹಾಗೂ ವಿದೇಶಗಳಿಂದ 400 ಆಯುರ್ವೇದ ವೈದ್ಯರಿಗೆ ಈ ಪ್ರಶಸ್ತಿಯನ್ನು ನೀಡಲಿದ್ದು ಅದರಲ್ಲಿ ಡಾ. ರಾಮಣ್ಣವರ ಅವರು ಕೂಡ ಒಬ್ಬರು.ದೇಶಾದ್ಯಂತ ದೇಹದಾನದ ಹಾಗೂ ಅಂಗಾಂಗ ದಾನದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು
ಜನಸಾಮಾನ್ಯರಲ್ಲಿ ಇರುವಂತ ಮೂಢನಂಬಿಕೆಯನ್ನು ತೆಗೆದು ಹೆಚ್ಚಿನ ಸಂಖ್ಯೆಯಲ್ಲಿ ಜನಸಾಮಾನ್ಯರು ದೇಹದಾನಕ್ಕೆ ಮುಂದೆ ಬರಲು ಕ್ರಾಂತಿಕಾರಿ ಕೆಲಸಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ.
ವಿಶ್ವ ಆಯುರ್ವೇದ ಸಮ್ಮೇಳನದ ಆಯೋಜಕರಾದ ಡಾ.ಗಿರಿಧರ್ ಕಜೆ, ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಹಾಸ ಕುಮಾರ ಶೆಟ್ಟಿ ಶಿಕ್ಷಕರು ಹಾಗೂ ವಿದ್ಯಾರ್ಥಿ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES
- Advertisment -
Google search engine

Most Popular