Saturday, December 27, 2025
Google search engine

Homeರಾಜಕೀಯಯಶಸ್ಸು ಪಡೆಯಲು ತಾಳ್ಮೆ ಅತ್ಯಗತ್ಯ : ಡಿಕೆ ಸುರೇಶ್‌ ಮಾರ್ಮಿಕ ಪೋಸ್ಟ್

ಯಶಸ್ಸು ಪಡೆಯಲು ತಾಳ್ಮೆ ಅತ್ಯಗತ್ಯ : ಡಿಕೆ ಸುರೇಶ್‌ ಮಾರ್ಮಿಕ ಪೋಸ್ಟ್

ಬೆಂಗಳೂರು : ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿದ್ದು, ಅತ್ತ ದೆಹಲಿಗೆ ಹಾರಿರುವ ಸಿಎಂ ಸಿದ್ದರಾಮಯ್ಯ ಇಂದು ರಾಹುಲ್ ಗಾಂಧಿಯನ್ನ ಭೇಟಿ ಮಾಡಲಿದ್ದಾರೆ. ಅಂತೂ ಇಂತೂ ಕುರ್ಚಿ ಕಿತ್ತಾಟ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಗೊಂದಲಕ್ಕೆ ಕಾಂಗ್ರೆಸ್​ ಹೈಕಮಾಂಡ್​ ತೆರೆ ಎಳೆಯಲು ಮುಂದಾಗಿದೆ ಎನ್ನಲಾಗಿದೆ.

ಇತ್ತ ಸಿಎಂ ಬದಲಾವಣೆ ವಿಚಾರದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಸೈಲೆಂಟ್​ ಮಂತ್ರ ಜಪಿಸುತ್ತಿದ್ದು, ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಯ ನಡುವೆ ಡಿಕೆ ಸುರೇಶ್ ಪೋಸ್ಟ್​  ಶೇರ್​ ಮಾಡಿದ್ದು, ಕಾಯುವಿಕೆಯ ಮೊರೆ ಹೋದಂತೆ ಕಾಣುತ್ತಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಸಿಎಂ ಕುರ್ಚಿಯಲ್ಲಿ ನೋಡ್ಬೇಕು ಎನ್ನುವ ಆಸೆ ಸಹೋದರ ಹಾಗೂ ಮಾಜಿ ಡಿಕೆ ಸುರೇಶ್​ ಅವರಲ್ಲೇ ಹೆಚ್ಚಿದ್ದು, ಅಣ್ಣನಿಗೆ ಬಲವಾಗಿ ನಿಂತಿರುವ ಸುರೇಶ್​ ನಾನಾ ತಂತ್ರ ರೂಪಿಸುತ್ತಿದ್ದಾರೆ. ಅಂದು ಕೊಟ್ಟ ಮಾತು ನೆನಪಿಸುವ ಮಾತಾಡಿದ ಡಿಕೆ ಸುರೇಶ್​ ಇದೀಗ ತಾಳ್ಮೆಯ ಜಪ ಮಾಡ್ತಿದ್ದಾರೆ.

ಸಹೋದರನಿಗೆ ಇನ್ನೂ ಸಿಎಂ ಸ್ಥಾನ ಒಲಿಯದ ವಿಚಾರಕ್ಕೆ ಸಂಬಂಧಿಸಿದಂತೆ ಡಿಕೆ ಸುರೇಶ್​​ ತಾಳ್ಮೆಯ ಮಂತ್ರ ಜಪಿಸುತ್ತಿದ್ದು, ಯಶಸ್ಸು ಪಡೆಯಲು ತಾಳ್ಮೆ ಅತ್ಯಗತ್ಯ ಎಂದು ಡಿಕೆ ಸುರೇಶ್​ ಪೋಸ್ಟ್ ಮಾಡಿದ್ದಾರೆ.‌

ಈ ಬಗ್ಗೆ ತಮ್ಮ ಎಕ್ಸ್​​ ಖಾತೆಯಲ್ಲಿ ಮತ್ತೆ ಡಿಕೆ ಸುರೇಶ್ ಮಾರ್ಮಿಕ ಸಂದೇಶ ನೀಡಿದ್ದು, ತಮ್ಮ ಅಣ್ಣನನ್ನು ಮುಖ್ಯಮಂತ್ರಿ ಮಾಡುವ ಗುರಿ ಹೊಂದಿರುವ ಡಿಕೆ ಸುರೇಶ್, ಇನ್ನೂ ಸಮಯ ಒದಗಿ ಬಾರದಿರುವ ಹಿನ್ನೆಲೆ ತಾಳ್ಮೆಯ ಮಾತಾನಾಡುತ್ತಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಪವರ್​ ಶೇರಿಂಗ್​ ಗೊಂದಲ ಬಗ್ಗೆ ಹೈಕಮಾಂಡ್​ ನಾಯಕರ ಜೊತೆ ಸಿಎಂ ಚರ್ಚೆ ನಡೆಸುವ ಸಾಧ್ಯತೆ ಇದ್ದು, ಕುರ್ಚಿ ಗುದ್ದಾಟಕ್ಕೆ ತೆರೆ ಬೀಳುವ ಸಂದೇಶವನ್ನ ಹೈಕಮಾಂಡ್​ ನೀಡುವ ಸಾಧ್ಯತೆ ಇದೆ.

RELATED ARTICLES
- Advertisment -
Google search engine

Most Popular