ಕಲಬುರಗಿ : ನಗರದ ಶಿವಶಕ್ತಿ ಕಾಲೋನಿಯಲ್ಲಿ ರಿವಾಲ್ವರ್ನಿಂದ ತಲೆಗೆ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವಂತಹ ಘಟನೆ ನಡೆದಿದೆ. ಖಂಡುರಾಜ್ ದವಳಜಿ(36) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ತನ್ನ ಲೈಸೆನ್ಸ್ ರಿವಾಲ್ವರ್ನಿಂದಲೇ ಖಂಡುರಾಜ್ ಶೂಟ್ ಮಾಡಿಕೊಂಡಿದ್ದಾರೆ. ಪತ್ನಿ ಜೊತೆಗಿನ ಜಗಳ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಚೌಕ್ ಠಾಣೆಯ ಪೊಲೀಸರು ಭೇಟಿ ನೀಡಿ ಪರೀಶಿಲನೆ ಮಾಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಖಂಡುರಾಜ್ ದವಳಜಿ ಪತ್ನಿ ಪ್ರಿಯಾ ನಡತೆ ಬಗ್ಗೆ ಅನುಮಾನ ಪಡುತ್ತಿದ್ದರಂತೆ. ಹೀಗಾಗಿ ಪತ್ನಿ ಜೊತೆ ಜಗಳವಾಡುತ್ತಿದ್ದರು. ರವಿವಾರ ಕೂಡ ಗಲಾಟೆ ಮಾಡಿದ್ದು, ನಿದ್ದೆ ಮಾತ್ರೆ ಕೊಟ್ಟು ಸಾಯಿಸುವುದಕ್ಕೆ ಅಂತಾ ಪ್ಲ್ಯಾನ್ ಮಾಡಿದ್ದರು. ನನ್ನ ಗಂಡ ಸೈಕೋ ರೀತಿ ವರ್ತಿಸುತ್ತಿದ್ದರು ಎಂದು ಪತ್ನಿ ಪ್ರಿಯಾ ಹೇಳಿದ್ದಾರೆ.
ಲೈಸೆನ್ಸ್ ಇಲ್ಲದೆ ಇರುವ ಕಂಟ್ರಿ ಮೇಡ್ ಪಿಸ್ತೂಲ್ನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಯದಿಂದ ನಾವು ಮನೆ ಬಿಟ್ಟು ಹೋಗಿದ್ದೇವು. ಬೆಳಿಗ್ಗೆ ನನ್ನ ಗಂಡ ಸಾವನ್ನಪ್ಪಿರುವುದು ಗೊತ್ತಾಗಿ ಇವಾಗ ಬಂದು ನೋಡಿದೆ ಎಂದು ಅವರು ಹೇಳಿದ್ದಾರೆ.



