Tuesday, December 30, 2025
Google search engine

Homeರಾಜಕೀಯಕೆಸಿ ವೇಣುಗೋಪಾಲ್ ಅಂತಹವರು ನಮ್ಮ ಸರ್ಕಾರ ನಡೆಸಬೇಕಾ? : ಲಹರ್‌ ಸಿಂಗ್

ಕೆಸಿ ವೇಣುಗೋಪಾಲ್ ಅಂತಹವರು ನಮ್ಮ ಸರ್ಕಾರ ನಡೆಸಬೇಕಾ? : ಲಹರ್‌ ಸಿಂಗ್

ಬೆಂಗಳೂರು : ಕೋಗಿಲು ನಿರಾಶ್ರಿತರ ಬೆನ್ನಿಗೆ ಸರ್ಕಾರ ನಿಂತಿದ್ದು, ರಾಜೀವ್ ಗಾಂಧಿ ವಸತಿ ಯೋಜನೆ ಅಡಿ ಮನೆ ಕೊಡಲು ಮುಂದಾಗಿದೆ. ಅಕ್ರಮ ಒತ್ತುವರಿ ತೆರವು ಮಾಡಿ, ಮನೆ ಕೊಡುತ್ತಿರುವ ಸರ್ಕಾರದ ನಡೆ ವಿಪಕ್ಷಗಳ ಪಾಲಿಗೆ ಬ್ರಹ್ಮಾಸ್ತ್ರವಾಗಿವಾಗಿದ್ದು, ರಾಜ್ಯದ 6 ಕೋಟಿ ಜನ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​​ರನ್ನು ಆಯ್ಕೆ ಮಾಡಿದ್ದಾರೆ. ಕೆ.ಸಿ.ವೇಣುಗೋಪಾಲ್​ರನ್ನು ಆಯ್ಕೆ ಮಾಡಿಲ್ಲ. ಜುಜುಬಿ ವೇಣುಗೋಪಾಲ್ ಮಾತು ಕೇಳಿಕೊಂಡು ಆಡಳಿತ ಮಾಡುವುದು 6 ಕೋಟಿ ಜನರಿಗೆ ಮಾಡಿರುವ ಅವಮಾನ ಎಂದು ರಾಜ್ಯಸಭಾ ಬಿಜೆಪಿ ಸದಸ್ಯ ಲಹರ್ ಸಿಂಗ್ ಸಿರೋಯಾ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.‌

ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ, ಈ ಸರ್ಕಾರದಿಂದ ಏನೂ ಅಪೇಕ್ಷೆ ಪಡಲು ಸಾಧ್ಯವೇ ಇಲ್ಲ. ಸೋ ಕಾಲ್ಡ್ ಪವರ್ ಫುಲ್ ಲೀಡರ್​​​ಗಳಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​ ಕೆ.ಸಿ.ವೇಣುಗೋಪಾಲ್ ಮಾತು ಕೇಳಿ ನಾಚಿಕೆಗೇಡಿನ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.

ಕೆಸಿ ವೇಣುಗೋಪಾಲ ಅಂತಹವರು ನಮ್ಮ ಸರ್ಕಾರ ನಡೆಸಬೇಕಾ? ಅವರ ಆದೇಶ ನಾವು ಪಾಲಿಸಬೇಕಾ? ಈ ಸರ್ಕಾರ ಕೇವಲ ಕುರ್ಚಿ ಜಗಳಕ್ಕೆ ಮಾತ್ರ ಸೀಮಿತ ಅಷ್ಟೇ. ಪ್ರವಾಹ ಸಂತ್ರಸ್ತರಿಗೆ ಮನೆ ಕೊಟ್ಟಿಲ್ಲ, ಡ್ರಗ್ಸ್ ಸಮಸ್ಯೆ ಸರಿಪಡಿಸಿಲ್ಲ, ಇಂತಹ ಸರ್ಕಾರ ನಮಗೆ ಸಿಕ್ಕಿರುವುದು ದುರದೃಷ್ಟಕರ.

ಅಲ್ಲದೆ ಪಾಕಿಸ್ತಾನ ಪ್ರತಿಕ್ರಿಯೆ ಕೊಡುತ್ತದೆ ಎಂದರೆ, ಇದು ಬಹಳ ಭಯನಕ ಟ್ರೆಂಡ್. ಪಶ್ಚಿಮ ಬಂಗಾಳ ರೀತಿ ಇಲ್ಲಿ ಆದರೆ ನಮ್ಮ ಗತಿ ಏನು ಎಂದು ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ಪ್ರಶ್ನೆ ಮಾಡಿದ್ದಾರೆ.

ಇನ್ನೂ ಎಐಸಿಸಿಯ ಕೆ.ಸಿ. ವೇಣು ಗೋಪಾಲ್ ಹೇಳಿದರೂ ಅನ್ನೋ ಒಂದೇ ಕಾರಣಕ್ಕೆ ಇಷ್ಟು ದೊಡ್ಡ ನಿರ್ಧಾರ ಮಾಡಿರೋದನ್ನ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದು, ಕಾಂಪಿಟೇಷನ್ ಮೇಲೆ ಸಿಎಂ, ಡಿಸಿಎಂ ಹೈಕಮಾಂಡ್ ಓಲೈಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಡಿಸಿಎಂ ಡಿಕೆ ಶಿವಕುಮಾರ್​ ಮಾತ್ರ ಇದನ್ನ ತಳ್ಳಿಹಾಕಿದ್ದಾರೆ.

RELATED ARTICLES
- Advertisment -
Google search engine

Most Popular