Wednesday, December 31, 2025
Google search engine

Homeಅಪರಾಧಟೋಲ್ ಗೇಟ್ ಸಿಬ್ಬಂದಿಗೆ ಹಲ್ಲೆ: ಇಬ್ಬರು ಅರೆಸ್ಟ್

ಟೋಲ್ ಗೇಟ್ ಸಿಬ್ಬಂದಿಗೆ ಹಲ್ಲೆ: ಇಬ್ಬರು ಅರೆಸ್ಟ್

ಟೋಲ್ ಗೇಟ್ ಸಿಬ್ಬಂದಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರನ್ನು ಚಿಕ್ಕಮಗಳೂರು ಮೂಲದ ಆರೋಪಿಗಳಾದ ಲಾರಿ ಚಾಲಕ ಭರತ್ (23) ಮತ್ತು ಲಾರಿಯಲ್ಲಿದ್ದ ಕ್ಲೀನರ್ ತೇಜಸ್ (26) ಎಂದು ಗುರುತಿಸಲಾಗಿದೆ. ಬಂಟ್ವಾಳ ಬ್ರಹ್ಮರಕೂಟ್ಲು ಟೋಲ್ ಗೇಟ್ ನಲ್ಲಿ ದಿನಾಂಕ 29.12.2025 ರ ಮುಂಜಾನೆ ಕೆಎ.18.ಸಿ.3048 ನೇ ನೊಂದಣಿಯ ಟಾಟಾ ಲಾರಿಯೊಂದನ್ನು ಟೋಲ್ ಬಳಿ ರಸ್ತೆಯ ವಿರುದ್ದ ದಿಕ್ಕಿನಿಂದ ಚಲಾಯಿಸಿಕೊಂಡು ಬಂದು, ಟೋಲ್ ಗೇಟ್ ಬಳಿ ಟೋಲ್ ಹಣವನ್ನು ಸಂಗ್ರಹಿಸುತ್ತಿದ್ದ ಟೋಲ್ ಸಿಬ್ಬಂದಿ ಟೋಲ್ ಹಣವನ್ನು ಕೇಳಿದಾಗ, ಹಣ ನೀಡಲು ನಿರಾಕರಿಸಿ ಮುಂದಕ್ಕೆ ಚಲಾಯಿಸುತ್ತಾ, ಟೋಲ್ ಗೇಟ್ ಗೆ ಹಾನಿ ಮಾಡಿದ್ದಾರೆ. ಬಳಿಕ ಲಾರಿಯ ಚಾಲಕ ಹಾಗೂ ಇನ್ನೋರ್ವ ಆರೋಪಿಯು, ಟೋಲ್‌ ಸಿಬ್ಬಂದಿಗಳಾದ ಅಂಕಿತ್ ಹಾಗೂ ರೋಹಿತ್ ಎಂಬವರಿಗೆ ಅವ್ಯಾಚವಾಗಿ ಬೈದು ಹಲ್ಲೆ ನಡೆಸಿದ್ದಾರೆ. ಬಳಿಕ ಇನ್ನೊಂದು ಪಿಕಪ್ ವಾಹನದಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ಕರೆದುಕೊಂಡು ಟೋಲ್ ಬೂತ್ ನ ಒಳಗಡೆ ಅಕ್ರಮವಾಗಿ ಪ್ರವೇಶಿಸಿ, ಸದ್ರಿ ಇಬ್ಬರು ಟೋಲ್ ಸಿಬ್ಬಂದಿಗಳಿಗೆ ಪುನಃ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಕ್ರ: 154/2025 ಕಲಂ 329(3), 351(2), 352,115(2), 118(1), 324(2), r/w 3(5) BNS-2023 ಮತ್ತು ಕಲಂ 184(E) IMV ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

RELATED ARTICLES
- Advertisment -
Google search engine

Most Popular