-ವರದಿ, ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಆರ್.ನಗರ ತಾಲೂಕಿನ ಮೂಲೆಪೆಟ್ಲು ಗ್ರಾಮದ ಪ್ರದೀಪ್ ಕುಮಾರ್ ಅವರಿಗೆ ಮೈಸೂರು ವಿವಿರಿಂದ ಪಿಹೆಚ್‌ಡಿ ಪದವಿ ದೊರಕಿದೆ.
ಮೈಸೂರಿನ ಮಹಾರಾಜ ಕಾಲೇಜಿನ ಪ್ರೊ.ಲ್ಯಾನ್ಸಿ ಡಿಸೋಜಾ ಅವರ ಮಾರ್ಗದರ್ಶನದಲ್ಲಿ ಅಪರಾಧ ಶಾಸ್ತ್ರ ಮತ್ತು ನ್ಯಾಯ ವಿಜ್ಞಾನ ವಿಭಾಗದಲ್ಲಿ ಯುವ ವಯಸ್ಕರಲ್ಲಿ ವ್ಯಕ್ತಿತ್ವ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರವೃತಿಯ ಮೌಲ್ಯಮಾಪನ ವಿಷಯ ಕುರಿತು ಸಂಶೋಧನೆ ನಡೆಸಿ ಸಾಧರಪಡಿಸಿರುವ ಮಹಾ ಪ್ರಬಂಧಕ್ಕೆ ಮೈಸೂರು ವಿಶ್ವ ವಿದ್ಯಾಲಯವು ಪಿಹೆಚ್ ಡಿ ಪದವಿಗೆ ಅಂಗೀಕರಿಸಿದೆ.
ಇವರನ್ನು ಹಾಸನ ಜಿಲ್ಲಾ ಅಗ್ನಿ ಶಾಮಕ ದಳದ ಅಧಿಕಾರಿ ಕೆ.ಪಿ. ನವೀನ್ ಕುಮಾರ್, ವಕೀಲ ಸಂತು ಉಪ್ಪಾರ್, ಪತ್ರಕರ್ತ ಜಿಟೆಕ್ ಶಂಕರ್, ಸಾಲಿಗ್ರಾಮ ತಾಲೂಕು ನಾಯಕರ ಸಂಘದ ಕಾರ್ಯದರ್ಶಿ ಸಿ.ಎಂ.ಮಂಜುನಾಥ್ ಅಭಿನಂದಿಸಿದ್ದಾರೆ. ಪ್ರದೀಪ್ ಮೂಲೆಪೆಟ್ಲು ಗ್ರಾಮದ ವಿಶಕಂಠ ಶೆಟ್ಟಿ ಮತ್ತು ಪೂರ್ಣಿಮ ಅವರ ಪುತ್ರ.



